ಮುಂಬೈ: ಬಾಲಿವುಡ್ನ ಖ್ಯಾತ ನಟ ಅಮಿತಾಭ್ ಬಚ್ಚನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಗುಡ್ ಬೈ' ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ.
ಬಾಲಿವುಡ್ನ ಬಿಗ್ ಬಿ ಅಮಿತಾಬ್ ಬಚ್ಚನ್ ತಮ್ಮ ಟ್ವಿಟರ್ ಖಾತೆಯಲ್ಲಿ ಚಿತ್ರದ ಪೋಸ್ಟರ್ನ್ನು ಹಂಚಿಕೊಂಡಿಳ್ಳುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಪೋಸ್ಟರ್ನಲ್ಲಿ ಬಚ್ಚನ್ ಗಾಳಿಪಟವನ್ನು ಹಾರಿಸುತ್ತಿದ್ದು, ರಶ್ಮಿಕಾ ಗಾಳಿಪಟದ ನೂಲಿನ ಬಂಡಲ್ನ್ನು ಹಿಡಿದಿರುವುದು ಕಾಣಬಹುದಾಗಿದೆ. ಇನ್ನು ಪೋಸ್ಟರ್ಗೆ ಸಾಕಷ್ಟು ಮೆಚ್ಚುಗೆಗಳು ವ್ಯಕ್ತವಾಗಿವೆ.
ಕನ್ನಡದ ನಟಿ ರಶ್ಮಿಕಾ ಮಂದಣ್ಣ ಅವರ ಬಾಲಿವುಡ್ನ ಮೊದಲ ಚಿತ್ರ ಇದಾಗಿದ್ದು, ಮೊದಲ ಚಿತ್ರದಲ್ಲೇ ಬಿಗ್ ಬಿ ಜೊತೆ ತೆರೆ ಹಂಚಿಕೊಳ್ಳುತ್ತಿರುವುದು ವಿಶೇಷ. ಇನ್ನು ಚಿತ್ರದಲ್ಲಿ ನೀನಾ ಗುಪ್ತಾ ಮತ್ತು ಪಾವೈಲ್ ಗುಲಾಟಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅಕ್ಟೋಬರ್ 7 ರಂದು ವಿಶ್ವದಾದ್ಯಂತ ಚಿತ್ರ ತೆರೆ ಕಾಣಲಿದೆ.
ಇದನ್ನೂ ಓದಿ: ಯುವ ನಟ ಕಿರೀಟಿ ಸಿನಿಮಾ ಸೆಟ್ಗೆ ಸರ್ಪ್ರೈಸ್ ವಿಸಿಟ್ ಕೊಟ್ಟ ಶಿವಣ್ಣ