ETV Bharat / bharat

ಮುಂಬೈನ ಐಕಾನಿಕ್ ಪ್ರೀಮಿಯರ್ ಪದ್ಮಿನಿ ಟ್ಯಾಕ್ಸಿಗಳಿಗೆ ವಿದಾಯ.. ಇಂದಿನಿಂದ 'ಕಪ್ಪು ಹಳದಿ' ಟ್ಯಾಕ್ಸಿಗಳು ಬಂದ್​.. ಧನ್ಯವಾದ ತಿಳಿಸಿದ ಆನಂದ ಮಹಿಂದ್ರಾ.. - ಕಪ್ಪು ಮತ್ತು ಹಳದಿ ಟ್ಯಾಕ್ಸಿ

ಪ್ರಸಕ್ತ ವರ್ಷ ಮುಂಬೈ, ಎರಡು ಸಾಂಪ್ರದಾಯಿಕ ಸಾರಿಗೆ ವಾಹನಗಳಿಗೆ ವಿದಾಯ ಹೇಳಿದೆ. ಈ ಪೈಕಿ ಮುಂಬೈನ ಬೀದಿಗಳಲ್ಲಿ ಕಪ್ಪು ಮತ್ತು ಹಳದಿ ಟ್ಯಾಕ್ಸಿಯ ಪ್ರಯಾಣವು ಕೊನೆಗೊಳ್ಳಲಿದೆ.

Good Bye Kaali Peeli
ಮುಂಬೈನ ಐಕಾನಿಕ್ ಪ್ರೀಮಿಯರ್ ಪದ್ಮಿನಿ ಟ್ಯಾಕ್ಸಿಗಳಿಗೆ ವಿದಾಯ.. ಇಂದಿನಿಂದ 'ಕಪ್ಪು ಹಳದಿ' ಟ್ಯಾಕ್ಸಿಗಳು.. ಧನ್ಯವಾದ ತಿಳಿಸಿದ ಆನಂದ ಮಹಿಂದ್ರಾ..
author img

By ETV Bharat Karnataka Team

Published : Oct 30, 2023, 2:02 PM IST

ಹೈದರಾಬಾದ್: ಮುಂಬೈನ ಬೀದಿಗಳಲ್ಲಿ ಪ್ರಯಾಣಿಸುವಾಗ 'ಕಪ್ಪು ಮತ್ತು ಹಳದಿ' ಟ್ಯಾಕ್ಸಿಗಳ ಚಿತ್ರವು ಖಂಡಿತವಾಗಿಯೂ ಕಣ್ಮುಂದೆ ಬರುತ್ತದೆ. ಅನೇಕ ವರ್ಷಗಳಿಂದ, ಈ ಟ್ಯಾಕ್ಸಿ ಸೇವೆಯನ್ನು 'ಕಾಲಿ-ಪಿಲಿ' ಎಂದು ಕರೆಯಲಾಗುತ್ತಿತ್ತು. ಇದು ಸಾಮಾನ್ಯರಿಂದ ಶ್ರೀಮಂತರವರೆಗಿನ ಮುಂಬೈನ ಎಲ್ಲಾ ವರ್ಗದ ಜನರಿಗೆ ಸಾರಿಗೆ ಸಾಧನವಾಗಿತ್ತು. ಈಗ ಕನಸಿನ ನಗರಿಯಲ್ಲಿ ಕಪ್ಪು ಹಳದಿಯ ನೆನಪುಗಳು ಮೂಲೆ ಸೇರುವ ದಿನ ಸಮೀಪಿಸುತ್ತದೆ.

ಮಹಾನಗರಿ ಮುಂಬೈಗೂ ಇಲ್ಲಿನ 'ಕಾಲಿ-ಪಿಲಿ' ಟ್ಯಾಕ್ಸಿಗೂ ಅವಿನಾಭಾವ ಸಂಬಂಧವಿದ್ದು, ಈಗ ಸುಮಾರು ಆರು ದಶಕಗಳ ನಂತರ ಅದರ ಪಯಣ ಮುಗಿಯಲಿದೆ. ಜನಪ್ರಿಯ ಬೆಸ್ಟ್ ಡಬಲ್ ಡೆಕ್ಕರ್ ಡೀಸೆಲ್ ಬಸ್‌ಗಳ ಸಂಚಾರವನ್ನು ಇತ್ತೀಚೆಗೆ ಸ್ಥಗಿತಗೊಳಿಸಲಾಗಿತ್ತು. ಅದರ ಬೆನ್ನಲ್ಲೇ ಈಗ ಕಪ್ಪು ಮತ್ತು ಹಳದಿ ಟ್ಯಾಕ್ಸಿಗಳು ಸಹ ರಸ್ತೆಗಳಿಂದ ಕಣ್ಮರೆಯಾಗಲಿವೆ. ಈ ಸಂದರ್ಭದಲ್ಲಿ ಮುಂಬೈನ ಸಾಂಸ್ಕೃತಿಕ, ಸಾಮಾಜಿಕ ಮತ್ತು ರಾಜಕೀಯ ಕ್ಷಣಗಳಿಗೆ ಸಾಕ್ಷಿಯಾಗಿದ್ದ ಟ್ಯಾಕ್ಸಿಗಳು ಕಾಯಂ ರಜೆ ತೆಗೆದುಕೊಳ್ಳಲಿವೆ.

ಪ್ರೀಮಿಯರ್ ಪದ್ಮಿನಿ ಟ್ಯಾಕ್ಸಿಗಳಿಗೆ ಧನ್ಯವಾದಗಳು-ಆನಂದ ಮಹಿಂದ್ರಾ: ಇಂದಿನಿಂದ ಐಕಾನಿಕ್ ಪ್ರೀಮಿಯರ್ ಪದ್ಮಿನಿ ಟ್ಯಾಕ್ಸಿಗಳು ಮುಂಬೈನ ರಸ್ತೆಗಳಿಂದ ಕಣ್ಮರೆಯಾಗುತ್ತವೆ. ಅವುಗಳು ಅಹಿತಕರ, ಹೆಚ್ಚು ಶಬ್ದ ಮಾಡುತ್ತಿದ್ದವು, ಜೊತೆಗೆ ಹೆಚ್ಚು ಲಗೇಜ್ ಸಾಮರ್ಥ್ಯವನ್ನೂ ಕೂಡ ಹೊಂದಿರಲಿಲ್ಲ. ಆದರೆ, ನಮ್ಮ ಹಳೆ ತಲೆಮಾರಿನ ಜನರಿಗೆ ಈ ಟ್ಯಾಕ್ಸಿಗಳು ಅಸಂಖ್ಯಾತ ನೆನಪುಗಳನ್ನು ಹೊತ್ತು ತಂದಿವೆ. ಕಾಲಿ-ಪೀಲಿ ಟ್ಯಾಕ್ಸಿಗಳಿಗೆ ವಿದಾಯ. ಈ ಹಿಂದೆ ಒಳ್ಳೆಯ ಸಮಯ ಕಲ್ಪಿಸಿಕೊಟ್ಟಿದ್ದ ಪ್ರೀಮಿಯರ್ ಪದ್ಮಿನಿ ಟ್ಯಾಕ್ಸಿಗಳಿಗೆ ಧನ್ಯವಾದಗಳು ಎಂದು ಮಹೀಂದ್ರಾ ಮತ್ತು ಮಹೀಂದ್ರಾ ಕಂಪನಿಯ ಅಧ್ಯಕ್ಷ ಆನಂದ ಮಹಿಂದ್ರಾ ಸಾಮಾಜಿಕ ಜಾಲತಾಣವಾದ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

  • From today, the iconic Premier Padmini Taxi vanishes from Mumbai’s roads. They were clunkers, uncomfortable, unreliable, noisy. Not much baggage capacity either. But for people of my vintage, they carried tons of memories. And they did their job of getting us from point A to… pic.twitter.com/weF33dMQQc

    — anand mahindra (@anandmahindra) October 30, 2023 " class="align-text-top noRightClick twitterSection" data=" ">

1964ರಲ್ಲಿ ಪಯಣ ಆರಂಭಿಸಿದ ಪದ್ಮಿನಿ: 1964ರಲ್ಲಿ 'ಫಿಯೆಟ್-1100 ಡಿಲೈಟ್' ಮಾದರಿಯ 'ಪ್ರೀಮಿಯರ್ ಪದ್ಮಿನಿ' ಖ್ಯಾತಿಯ ಟ್ಯಾಕ್ಸಿ ಪ್ರಯಾಣ ಆರಂಭಿಸಿತ್ತು. 1200 ಸಿಸಿಯ ಕಾರಿನ ಗೇರ್‌ಗಳು ಸ್ಟೀರಿಂಗ್ ವ್ಹೀಲ್‌ ಹೊಂದಿದ್ದವು. ಪ್ರಾರಂಭವಾದ ಒಂದು ವರ್ಷದೊಳಗೆ ಅವುಗಳನ್ನು ''ಪ್ರೀಮಿಯರ್ ಪ್ರೆಸಿಡೆಂಟ್​'' ಎಂದು ಹೆಸರಿಸಲಾಯಿತು. ಇದರ ನಂತರ, 1974ರಲ್ಲಿ ಮತ್ತೊಮ್ಮೆ ಮರುನಾಮಕರಣ ಮಾಡಲಾಯಿತು. ಆಗ 'ಪ್ರೀಮಿಯರ್ ಪದ್ಮಿನಿ' ಹೆಸರಿಡಲಾಯಿತು. ಇದಕ್ಕೆ ಭಾರತೀಯ ರಾಣಿಯ ಹೆಸರನ್ನು ಇಡಲಾಗಿತ್ತು. ಮುಂದಿನ 30 ವರ್ಷಗಳವರೆಗೆ ಈ ಕಾರು ತನ್ನ ಹೆಸರಿಗೆ ತಕ್ಕಂತೆ ಪ್ರಯಾಣ ಮುಂದುವರಿಸಿತ್ತು. ನಂತರ ಈ ಟ್ಯಾಕ್ಸಿ ಮುಂಬೈನ ಗುರುತಾಯಿತು. ಇಂದಿಗೂ ಈ ಟ್ಯಾಕ್ಸಿಗಳಲ್ಲಿ ಅಳವಡಿಸಿರುವ ಮ್ಯಾನ್ಯುವಲ್ ಮೀಟರ್ ಕೆಳಗಿಳಿಸಿದಾಗ ಅದರ ಸದ್ದು ವಯಸ್ಸಾದವರಿಗೆ ನೆನಪಿಗೆ ಬರುತ್ತದೆ. ಈಗ ಟ್ಯಾಕ್ಸಿಗಳಿಗೆ ಸ್ವಯಂಚಾಲಿತ ವಿದ್ಯುತ್ ಮೀಟರ್‌ಗಳನ್ನು ಅಳವಡಿಸಲಾಗಿದೆ. ಫಿಯೆಟ್ ಟ್ಯಾಕ್ಸಿ ಮೊದಲ ಬಾರಿಗೆ ಮುಂಬೈನ ಬೀದಿಗೆ ಇಳಿದಿತ್ತು. ಅದೇ ಸಮಯದಲ್ಲಿ ಪ್ಲೈಮೌತ್, ಲ್ಯಾಂಡ್‌ಮಾಸ್ಟರ್‌ನಂತಹ ದೊಡ್ಡ ಟ್ಯಾಕ್ಸಿಗಳು ಬೀದಿಗಿಳಿದಿದ್ದವು.

90ರ ದಶಕದಲ್ಲಿ 63,200 ಟ್ಯಾಕ್ಸಿಗಳು ನೋಂದಣಿ: ಮುಂಬೈ ಅಧಿಕಾರಿಗಳು 60ರ ದಶಕದಲ್ಲಿ ಪದ್ಮಿನಿ ಟ್ಯಾಕ್ಸಿಗೆ ಆದ್ಯತೆ ನೀಡಿದ್ದರು. ಇದರ ಹಿಂದಿನ ಮುಖ್ಯ ಕಾರಣವೆಂದರೆ, ಅದರ ಆಕರ್ಷಕ ವಿನ್ಯಾಸ ಮತ್ತು ನಿಖರವಾದ ಎತ್ತರ ಹೊಂದಿರುವುದರಿಂದ ಮುಂಬೈನ ಕಿರಿದಾದ ಮತ್ತು ದಟ್ಟಣೆಯ ಬೀದಿಗಳಲ್ಲಿ ಸಂಚರಿಸುವುದು ಸೂಕ್ತವೆಂದು ಗಮನಿಸಲಾಗಿತ್ತು. ಈ ಟ್ಯಾಕ್ಸಿಗಳ ಜನಪ್ರಿಯತೆಯು 70 ಮತ್ತು 80 ರ ದಶಕದಲ್ಲಿ ಮತ್ತಷ್ಟು ಹೆಚ್ಚಾಯಿತು. 90ರ ದಶಕದಲ್ಲಿ ಸಾರಿಗೆ ಇಲಾಖೆಯಲ್ಲಿ ದಾಖಲೆಯ 63,200 ಟ್ಯಾಕ್ಸಿಗಳು ನೋಂದಣಿಯಾಗಿದ್ದವು. ಕೈಗೆಟುಕುವ ದರದಲ್ಲಿ ಪ್ರಯಾಣವನ್ನು ಒದಗಿಸುವ ಈ ಟ್ಯಾಕ್ಸಿ ಸೇವೆಯು ಇಂದಿನಿಂದ ಮುಂಬೈನ ಬೀದಿಗಳಲ್ಲಿ ಬಂದ್​ ಆಗಲಿದೆ. ಇದರಿಂದ ಮುಂಬೈಗೆ ಇದ್ದಂತಹ ವಿಶೇಷ ಗುರುತೊಂದು ಇತಿಹಾಸ ಪುಟ ಸೇರಲಿದೆ.

ಇದನ್ನೂ ಓದಿ: ಗುಜರಾತ್‌ನ ಬನಸ್ಕಾಂತದಲ್ಲಿ ಪಿಎಂ ಮೋದಿ ರೋಡ್‌ ಶೋ: ಅಂಬಾಜಿ ಸನ್ನಿಧಿಯಲ್ಲಿ ವಿಶೇಷ ಪೂಜೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.