ETV Bharat / bharat

'ಕಾನ್ಪುರದ ಬಪ್ಪಿ ಲಹರಿ' ನಿಗೂಢ ನಾಪತ್ತೆ: ಗೋಲ್ಡನ್‌ ಬಾಬಾಗೆ ಪೊಲೀಸರ ಶೋಧ - ಕಾನ್ಪುರದಲ್ಲಿ ಕಾಣೆಯಾದ ಗೋಲ್ಡನ್ ಬಾಬಾ

ಭಾರಿ ಪ್ರಮಾಣದ ಚಿನ್ನಾಭರಣಗಳನ್ನು ಧರಿಸುವ ಹವ್ಯಾಸದಿಂದಾಗಿ ಹೆಸರುವಾಸಿಯಾಗಿದ್ದ ಗೋಲ್ಡನ್ ಬಾಬಾ ನಿಗೂಢವಾಗಿ ಕಾಣೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

'Golden Baba' goes missing in Kanpur, probe starts
ನಿಗೂಢವಾಗಿ ಕಾಣೆಯಾದ ಗೋಲ್ಡನ್ ಬಾಬಾ, ಪೊಲೀಸರಿಂದ ತನಿಖೆ
author img

By

Published : Mar 16, 2022, 7:12 PM IST

ಕಾನ್ಪುರ(ಉತ್ತರ ಪ್ರದೇಶ): ಗೋಲ್ಡನ್ ಬಾಬಾ ಎಂದೇ ಪ್ರಸಿದ್ಧಿ ಪಡೆದಿರುವ ಉತ್ತರ ಪ್ರದೇಶದ ಕಾನ್ಪುರ್​ ಜಿಲ್ಲೆಯ ಮನೋಜ್ ಸೆಂಗಾರ್ ನಿಗೂಢವಾಗಿ ಣೆಯಾಗಿದ್ದು, ಅವರನ್ನು ಸಾಕಷ್ಟು ಹುಡುಕಾಡಿದ ಕುಟುಂಬಸ್ಥರು ಕೊನೆಗೆ ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಾಥಮಿಕ ಮಾಹಿತಿ ಪ್ರಕಾರ ಮನೋಜ್ ಸೆಂಗಾರ್ ಸ್ವತಃ ತಾವೇ ಎಲ್ಲಿಯೋ ಹೋಗಿದ್ದಾರೆ ಎಂದು ತಿಳಿದುಬಂದಿದೆ. ಯಾವುದೇ ಅಹಿತಕರ ಘಟನೆ ನಡೆದಿರುವ ಸಾಧ್ಯತೆ ಇಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಲ್ಲದೆ, ವಿವಿಧ ಸ್ಥಳಗಳಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿ ತನಿಖೆ ನಡೆಸುತ್ತಿದ್ದಾರೆ.

ಕಾನ್ಪುರದ ಕಾಕಡಿಯೊ ನಿವಾಸಿಯಾಗಿರುವ 'ಗೋಲ್ಡನ್ ಬಾಬಾ' ಭಾರಿ ಚಿನ್ನದ ಆಭರಣಗಳನ್ನು ಧರಿಸುವ ಹವ್ಯಾಸದಿಂದಾಗಿ ಹೆಸರುವಾಸಿಯಾಗಿದ್ದಾರೆ. ಮಂಗಳವಾರ ಬೆಳಗ್ಗೆ ಮನೆಯಿಂದ ಹೋದವರು ವಾಪಸ್ ಬಂದಿಲ್ಲ ಎಂದು ಕುಟುಂಬಸ್ಥರು ಪೊಲೀಸರಿಗೆ ತಿಳಿಸಿದ್ದಾರೆ.

ಕಾನ್ಪುರದ ಡಿಸಿಪಿ ಬಿಬಿಜಿಟಿಎಸ್ ಮೂರ್ತಿ, ಎಡಿಸಿಪಿ ಬ್ರಿಜೇಶ್ ಕುಮಾರ್ ಶ್ರೀವಾಸ್ತವ ಮತ್ತು ಎಸಿಪಿ ದಿನೇಶ್ ಚಂದ್ರ ಶುಕ್ಲಾ ಅವರು ಗೋಲ್ಡನ್ ಬಾಬಾ ಅವರ ಮನೆಗೆ ಆಗಮಿಸಿ ಕುಟುಂಬ ಸದಸ್ಯರಿಂದ ಮಾಹಿತಿ ಸಂಗ್ರಹಿಸಿದ್ದಾರೆ.

ಇದನ್ನೂ ಓದಿ: ಅಗಸ್ಟಾ ವೆಸ್ಟ್‌ಲ್ಯಾಂಡ್ ಹಗರಣ: ಮಾಜಿ ರಕ್ಷಣಾ ಕಾರ್ಯದರ್ಶಿ, ಸಿಎಜಿ ವಿರುದ್ಧ ಸಿಬಿಐ ಚಾರ್ಜ್​​​ಶೀಟ್​

ಸಿಸಿಟಿವಿ ದೃಶ್ಯವೊಂದರ ಪ್ರಕಾರ ಕೇಸರಿ ಬಣ್ಣದ ಬಟ್ಟೆಗಳನ್ನು ಧರಿಸಿ ನಡೆದುಕೊಂಡು ಹೋಗಿದ್ದಾರೆ. ಅವರ ಭುಜದ ಮೇಲೆ ಬ್ಯಾಗ್ ಇದೆ. ಅವರು ಚಿನ್ನಾಭರಣ ಇಲ್ಲದೇ ಮನೆಯಿಂದ ತೆರಳಿರುವ ಕಾರಣದಿಂದ ಯಾವುದೇ ಅಹಿತಕರ ಘಟನೆ ನಡೆಯುವ ಸಾಧ್ಯತೆ ಇಲ್ಲ ಎಂದು ಡಿಸಿಪಿ ಹೇಳಿದ್ದಾರೆ.

ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ 5 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಮಾಸ್ಕ್​ ಅನ್ನು ಧರಿಸಿ, ಗೋಲ್ಡನ್ ಬಾಬಾ ಖ್ಯಾತಿ ಗಳಿಸಿದ್ದರು. ಸಾಮಾನ್ಯವಾಗಿ ಇವರನ್ನು ಕಾನ್ಪುರದ ಬಪ್ಪಿ ಲಹರಿ ಎಂದು ಜನರು ಕರೆಯುತ್ತಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.