ನವದೆಹಲಿ: ಸೋಮವಾರ ಬಹು ಸರಕು ಸೂಚ್ಯಂಕದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಇಳಿಕೆ ಕಂಡು ಬಂದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಕುಸಿತ ಕಂಡಿದ್ದು, ರಾಷ್ಟ್ರ ರಾಜಧಾನಿಯ ಚೀನಿವಾರು ಮಾರುಕಟ್ಟೆಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 100 ರೂಪಾಯಿಗಳಷ್ಟು ಕುಸಿತ ಕಂಡಿದ್ದು, 55,400 ರೂಪಾಯಿಗಳಿಗೆ ತಲುಪಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಮಾಹಿತಿ ನೀಡಿದೆ. ಕಳೆದ ವಹಿವಾಟಿನಲ್ಲಿ ಶುದ್ಧ ಚಿನ್ನದ ಬೆಲೆ 10 ಗ್ರಾಂಗೆ 60450 ರೂ. ಇತ್ತು. ಬೆಳ್ಳಿ ಬೆಲೆಯೂ ರೂ.300 ಇಳಿಕೆಯಾಗಿದ್ದು, ಪ್ರತಿ ಕೆಜಿಗೆ ರೂ.78000 ಕ್ಕೆ ತಲುಪಿದೆ.
1 ಗ್ರಾಂ 22K ಚಿನ್ನದ ಸರಾಸರಿ ಬೆಲೆ ₹5,525 ಆಗಿದ್ದರೆ 24K ಚಿನ್ನದ ಬೆಲೆ ₹6,028 ರಷ್ಟಿದೆ. 10ಗ್ರಾಂ ಬೆಳ್ಳಿಯ ಸರಾಸರಿ ಬೆಲೆ ₹780 ಇದೆ.
ಕರ್ನಾಟಕದಲ್ಲಿನ ಇಂದಿನ ದರ :- ಚಿನ್ನ: 1ಗ್ರಾಂ 22K ಚಿನ್ನದ ಸರಾಸರಿ ಬೆಲೆ ₹5,525 ಆಗಿದ್ದರೆ, 24K ಚಿನ್ನದ ಬೆಲೆ ₹6,028 ರಷ್ಟಿದೆ. 10 ಗ್ರಾಂ ಬೆಳ್ಳಿಯ ಬೆಲೆ ₹770 ಇದೆ.
ಭಾರತದ ಪ್ರಮುಖ ನಗರಗಳಲ್ಲಿ ಜುಲೈ ಇಂದಿನ 24 ಕ್ಯಾರೆಟ್ನ ಚಿನ್ನದ ದರ ಹೀಗಿದೆ
ಬೆಂಗಳೂರು - ₹60,280
ದೆಹಲಿ - ₹60,430
ಚೆನ್ನೈ - ₹60,550
ಮುಂಬೈ - ₹60,280
ಕೋಲ್ಕತ್ತಾ - ₹60,280
ಭಾರತದ ಪ್ರಮುಖ ನಗರಗಳು 1 ಕೆಜಿ ಬೆಳ್ಳಿ ಇಂದಿನ ದರ
ದೆಹಲಿ - ₹ 78,000
ಚೆನ್ನೈ - ₹ 81,000
ಮುಂಬೈ - ₹ 78,000
ಕೋಲ್ಕತ್ತಾ - ₹ 78,000
ಬೆಂಗಳೂರು - ₹ 75,500
ರೂಪಾಯಿ ಮೌಲ್ಯ ಕುಸಿತ: ಸೋಮವಾರ ಡಾಲರ್ ಎದುರು ರೂಪಾಯಿ ಮೌಲ್ಯ 11 ಪೈಸೆ ಕುಸಿದು 82.29 ರೂಗೆ ತಲುಪಿದೆ. ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆಗಳು ಮತ್ತು ವಿಶ್ವದ ಇತರ ಪ್ರಮುಖ ಕರೆನ್ಸಿಗಳ ವಿರುದ್ಧ ಡಾಲರ್‌ನ ಬಲವರ್ಧನೆಯಿಂದಾಗಿ, ರೂಪಾಯಿ ವಿನಿಮಯ ದರವು ಕುಸಿತ ಕಂಡಿದೆ. ಅಂತರ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ 82.23ಕ್ಕೆ ಪ್ರಾರಂಭವಾಯಿತು. ದಿನದ ಅವಧಿಯಲ್ಲಿ ಗರಿಷ್ಠ 82.21 ಮತ್ತು ಕನಿಷ್ಠ 82.29 ಅನ್ನು ತಲುಪಿತು. ಅಂತಿಮವಾಗಿ, ಅದರ ಹಿಂದಿನ ಮುಕ್ತಾಯದ ಬೆಲೆಗಿಂತ 11 ಪೈಸೆ ಇಳಿಕೆಯಾಗಿ ಪ್ರತಿ ಡಾಲರ್‌ಗೆ 82.29 ಕ್ಕೆ ಕೊನೆಗೊಂಡಿತು. ಶುಕ್ರವಾರ ಡಾಲರ್ ಎದುರು ರೂಪಾಯಿ ಮೌಲ್ಯ 82.18ಕ್ಕೆ ತಲುಪಿತ್ತು.
ಕಚ್ಚಾ ತೈಲ ಬೆಲೆ ಏರಿಕೆ: ಕಚ್ಚಾ ತೈಲ ಪ್ರತಿ ಬ್ಯಾರೆಲ್‌ಗೆ 0.41 ಶೇಕಡಾ ಏರಿಕೆಯಾಗಿ 85.34 ಡಾಲರ್‌ಗೆ ತಲುಪಿದೆ. ಬಿಎಸ್‌ಇಯ 30 ಷೇರುಗಳ ಸೆನ್ಸೆಕ್ಸ್ 367.47 ಪಾಯಿಂಟ್‌ಗಳೊಂದಿಗೆ, 0.56 ಶೇಕಡಾ ಏರಿಕೆಯಾಗಿ 66,527.67 ಪಾಯಿಂಟ್‌ಗಳಿಗೆ ತಲುಪಿದೆ. ಷೇರು ಮಾರುಕಟ್ಟೆ ಮಾಹಿತಿ ಪ್ರಕಾರ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ನಿವ್ವಳ ಮಾರಾಟಗಾರರಾಗಿ ಉಳಿದು ಸೋಮವಾರ 701.17 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ತಿಳಿಸಿದೆ.
ಇದನ್ನೂ ಓದಿ: 2030ರ ವೇಳೆಗೆ ಭಾರತೀಯರ ತಲಾ ಆದಾಯ ಶೇಕಡಾ 70 ರಷ್ಟು ಜಿಗಿತ.. ಕರ್ನಾಟಕಕ್ಕೆ ಎರಡನೇ ಸ್ಥಾನ