ಪುಣೆ(ಮಹಾರಾಷ್ಟ್ರ) : ನವರಾತ್ರಿ ಸಂಭ್ರಮದಲ್ಲಿ ದೇಶದ ಬಹುತೇಕ ಎಲ್ಲ ದೇವಸ್ಥಾನದ ಪ್ರತಿಮೆಗಳಿಗೆ ಬಗೆ ಬಗೆಯ ಅಲಂಕಾರ ಮಾಡಲಾಗಿತ್ತು. ಪ್ರಮುಖವಾಗಿ ದುರ್ಗೆ, ಕಾಳಿ, ಪಾರ್ವತಿ ಸೇರಿದಂತೆ ಮಹಿಳಾ ದೇವರ ಮೂರ್ತಿಗಳು ಇನ್ನಿಲ್ಲದ ರೀತಿಯಲ್ಲಿ ಅಲಂಕಾರಗೊಂಡಿದ್ದವು. ಮಹಾರಾಷ್ಟ್ರದ ಪುಣೆಯಲ್ಲಿರುವ ಮಹಾಲಕ್ಷ್ಮಿ ಬಂಗಾರದಿಂದ ಶೃಂಗಾರಗೊಂಡಿದ್ದಳು.
ಇದನ್ನೂ ಓದಿರಿ: 5.16 ಕೋಟಿ ರೂ. ಗರಿ ಗರಿ ಕರೆನ್ಸಿಯಿಂದ ಅಲಂಕೃತಗೊಂಡ ಪರಮೇಶ್ವರಿ.. ನೋಡಲೆರಡು ಕಣ್ಣು ಸಾಲದು!
ಮಹಾರಾಷ್ಟ್ರದ ಪುಣೆಯಲ್ಲಿರುವ ಮಹಾಲಕ್ಷ್ಮೀಯ ಮೂರ್ತಿಗೆ ಬರೋಬ್ಬರಿ 16 ಕೆಜಿ ಬಂಗಾರದ ಸೀರೆಯಲ್ಲಿ ಅಲಂಕಾರ ಮಾಡಲಾಗಿತ್ತು. ಈ ಸೀರೆ ಶುದ್ಧ ಚಿನ್ನದಿಂದ ತಯಾರಾಗಿದೆ. ವರ್ಷದಲ್ಲಿ ಎರಡು ಸಲ ಅಂದ್ರೇ ದಸರಾ ಹಾಗೂ ಲಕ್ಷ್ಮಿ ಪೂಜೆ ಸಂದರ್ಭದಲ್ಲಿ ಮಾತ್ರ ಈ ಸೀರೆಯನ್ನ ದೇವಿಗೆ ಉಡಿಸಲಾಗುತ್ತದೆ.
ಕಳೆದ 10 ವರ್ಷಗಳ ಹಿಂದೆ ಈ ಬಂಗಾರದ ಸೀರೆ ತಯಾರು ಮಾಡಲಾಗಿದೆ. ಅದಕ್ಕಾಗಿ ಸುಮಾರು 6 ತಿಂಗಳ ಕಾಲ ತೆಗೆದುಕೊಳ್ಳಲಾಗಿತ್ತಂತೆ. ಮಹಾಲಕ್ಷ್ಮಿ ದೇವಸ್ಥಾನದ ದೇವಿಯ ಪ್ರತಿಮೆಗೆ ವಿಜಯದಶಮಿಯ ಪ್ರಯುಕ್ತ ಚಿನ್ನದ ಸೀರೆ ಉಡಿಸಲಾಗಿತ್ತು. ಇನ್ನು, ಆಂಧ್ರಪ್ರದೇಶದ ನೆಲ್ಲೂರಿನಲ್ಲಿರುವ ಪರಮೇಶ್ವರಿ ದೇವಿಗೆ ಬರೋಬ್ಬರಿ 5.16 ಕೋಟಿ ರೂ. ಗರಿ ಗರಿ ಕರೆನ್ಸಿ ನೋಟ್ನಿಂದ ಅಲಂಕಾರ ಮಾಡಲಾಗಿತ್ತು.