ಹೈದರಾಬಾದ್ : ಮುಂದಿನ ತಿಂಗಳಿಂದ ಸಾಲು ಸಾಲು ಹಬ್ಬಗಳು ಬರಲಿವೆ. ಈ ವೇಳೆ ಕೂಡ ಬಂಗಾರದ ಬೆಲೆಯಲ್ಲಿ ಇಳಿಕೆ ಅಥವಾ ಯಥಾಸ್ಥಿತಿ ಕಂಡು ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಚಿನ್ನದ ದರ ಕಡಿಮೆಯಾದರೆ ಗ್ರಾಹಕರು ಖರೀದಿ ಮಾಡಲು ಹೆಚ್ಚು ಆಸಕ್ತಿ ತೋರುವ ಸಾಧ್ಯತೆ ಇದೆ ಎನ್ನಲಾಗಿದೆ.
ದೇಶದಲ್ಲಿ ಇಂದು ಕೂಡ ಚಿನ್ನದ ಬೆಲೆ ಸ್ಥಿರವಾಗಿದೆ. ಮುಂಬರುವ ಹಬ್ಬದ ಸೀಸನ್ಗಳಲ್ಲೂ ಇದೇ ರೀತಿಯ ಬೆಳವಣಿಗೆ ಕಂಡು ಬರುವ ಸಾಧ್ಯತೆ ಇದೆ. ಪ್ರಮುಖವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಹಳದಿ ಲೋಹದ ಖರೀದಿಯಲ್ಲಿ ಹಾಗೂ ಅದರ ಮೇಲೆ ಹೂಡಿಕೆ ಮಾಡಲು ಹೆಚ್ಚಿನ ಆಸಕ್ತಿ ತೋರಿಸದ ಕಾರಣ ಈ ಬೆಳವಣಿಗೆ ಆಗಬಹುದು ಎನ್ನಲಾಗಿದೆ.
ಇದನ್ನೂ ಓದಿರಿ: ಡ್ರೋಣ್ ಮೂಲಕ ಔಷಧಿ ಕಳುಹಿಸಿ,16 ತಿಂಗಳ ಮಗುವಿನ ಪ್ರಾಣ ರಕ್ಷಣೆ!!
MCXIndia ವೆಬ್‌ಸೈಟ್ ಪ್ರಕಾರ 10 ಗ್ರಾಂ ಚಿನ್ನದ ಬೆಲೆಯಲ್ಲಿ ಶೇ. 0.13ರಷ್ಟು ಕಡಿಮೆಯಾಗಿದೆ. ಬರುವ ದಿನಗಳಲ್ಲೂ ಇದರಲ್ಲಿ ಸ್ವಲ್ಪ ಮಟ್ಟಿನ ಕಡಿತ ಕಂಡು ಬರುವ ಸಾಧ್ಯತೆ ಇದೆ. ಭಾರತದಲ್ಲಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಗಳ ಮೇಲೆ ಅವಲಿಂಬಿತವಾಗಿದೆ. ಇಳಿಕೆ ಕಂಡು ಬರುವ ಸಾಧ್ಯತೆ ಇದೆ. ಸದ್ಯ ದೇಶದಲ್ಲಿ 10 ಗ್ರಾಂ ಚಿನ್ನದ ಬೆಲೆ(22 ಕ್ಯಾರೆಟ್) 45.240 ರೂ. ಇದ್ದು, 24 ಕ್ಯಾರೆಟ್ ಚಿನ್ನದ ಬೆಲೆ 47.550 ರೂ. ಇದೆ.