ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಇಂದು ಚಿನ್ನದ ಬೆಲೆಯು 10 ಗ್ರಾಂಗೆ 140 ರೂ.ಗಳ ಏರಿಕೆ ಕಂಡು 47,268 ರೂ.ಗಳಿಗೆ ತಲುಪಿದೆ. ಈ ಬಗ್ಗೆ ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಮಾಹಿತಿ ನೀಡಿದೆ.
ಹಿಂದಿನ ವಹಿವಾಟಿನಲ್ಲಿ ಪ್ರತಿ 10 ಗ್ರಾಂಗೆ 47,128 ರೂ. ಇತ್ತು. ಇನ್ನು ಬೆಳ್ಳಿಯೂ ಸಹ ಹಿಂದಿನ ವಹಿವಾಟಿನಲ್ಲಿ ಪ್ರತಿ ಕೆಜಿಗೆ 60,809 ರೂ. ಇದ್ದದ್ದು ಈಗ 290 ರೂ.ಏರಿಕೆಯಾಗಿ 61,099 ರೂ.ಗೆ ಜಿಗಿದಿದೆ.
ಇದನ್ನೂ ಓದಿ: ತಿರುಪತಿ ವೆಂಕಟೇಶ್ವರ ಸ್ವಾಮಿಗೆ 3 ಕೋಟಿ ಮೌಲ್ಯದ ಕಠಿ, ವರದ ಹಸ್ತ ಕೊಡುಗೆ ನೀಡಿದ ಅಪರಿಚಿತ ದಾನಿ
ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಪ್ರತಿ ಔನ್ಸ್‌ಗೆ USD 1,807 ಮತ್ತು ಬೆಳ್ಳಿ ಪ್ರತಿ ಔನ್ಸ್‌ಗೆ USD 22.87 ರಂತೆ ವಹಿವಾಟು ನಡೆಸುತ್ತಿದೆ. ದುರ್ಬಲ ಡಾಲರ್ ಮತ್ತು ಕ್ರಿಸ್‌ಮಸ್ ರಜೆಗೆ ಮುಂಚಿತವಾಗಿ ಯುಎಸ್ ಬಾಂಡ್ ಇಳುವರಿಯಲ್ಲಿ ಉಂಟಾದ ಕುಸಿತದಿಂದಾಗಿ ಚಿನ್ನದ ಬೆಲೆಗಳು ಹೆಚ್ಚಾಗಿವೆ ಎಂದು ಹೆಚ್ಡಿಎಫ್ಸಿ ಸೆಕ್ಯುರಿಟೀಸ್ ನ ಹಿರಿಯ ವಿಶ್ಲೇಷಕ ತಪನ್ ಪಟೇಲ್ ಈ ಬಗ್ಗೆ ಹೇಳಿದ್ದಾರೆ.