ETV Bharat / bharat

ಚಿನ್ನದ ಮೇಲಿನ ಹೂಡಿಕೆಗೆ ಸರಿಯಾದ ಸಮಯ ಯಾವುದು?: ಇಲ್ಲಿದೆ ತಜ್ಞರ ಸಲಹೆ - ಮಾರ್ಕೆಟ್​ ಎಕ್ಸ್​ಪರ್ಟ್​ ಸತೀಶ್​​​ ಕಾಂಥೆತಿ

ಡಾಲರ್ ಮೌಲ್ಯದ ಏರಿಕೆ (ಅಥವಾ ರೂಪಾಯಿ ಮೌಲ್ಯದ ಕುಸಿತ) ಚಿನ್ನದ ಬೆಲೆ ಕುಸಿತಕ್ಕೆ ಕಾರಣವಾಯಿತು. ಉದಾಹರಣೆಗೆ, ರಾಷ್ಟ್ರ ರಾಜಧಾನಿಯಲ್ಲಿ ಜೂನ್ 18 ರಂದು 10 ಗ್ರಾಂ ಚಿನ್ನ 46,460 ರೂ.ಗಳಿಗೆ ಮಾರಾಟ ಮಾಡಲಾಗಿದ್ದು, ಜುಲೈ 1 ರಂದು 10 ಗ್ರಾಂಗೆ 48,892 ರೂಗೆ ಮಾರಾಟವಾಗಿದೆ.

Gold
ಚಿನ್ನ
author img

By

Published : Jun 21, 2021, 5:33 PM IST

ಹೈದರಾಬಾದ್: ಬಹಳ ಹಿಂದಿನಿಂದಲೂ ಭಾರತೀಯರು ಚಿನ್ನದ ಮೇಲೆ ಹೂಡಿಕೆ ಮಾಡುವುದು ರೂಢಿಗತ ಪದ್ಧತಿಯಾಗಿ ಪರಿಣಮಿಸಿದೆ. ಷೇರುಗಳು, ಸಾಲ, ರಿಯಲ್ ಎಸ್ಟೇಟ್ ಮುಂತಾದ ಹೂಡಿಕೆ ಮಾರ್ಗಗಳ ಹೊರತಾಗಿಯೂ, ಚಿನ್ನದ ಮೇಲಿನ ಹೂಡಿಕೆ ಇನ್ನೂ ಕಡಿಮೆಯಾಗಿಲ್ಲ.

ಕೊರೊನಾ ಸಂದರ್ಭದಲ್ಲಿ ಆರ್ಥಿಕತೆ ಕುಸಿದಿರುವುದರಿಂದ ಜನರು ಹೂಡಿಕೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೇ, ಚಿನ್ನದ ಮೇಲಿನ ಹೂಡಿಕೆಗೆ ಇದು ಸರಿಯಾದ ಸಮಯವೇ ಎಂದು ಈಟಿವಿ ಭಾರತವು ಮಾರ್ಕೆಟ್​ ಎಕ್ಸ್​ಪರ್ಟ್​ ಸತೀಶ್​​​ ಕಾಂಥೆತಿಯವರನ್ನು ಮಾತಾಡಿಸಿದೆ.

ಝೆನ್​ ಸೆಕ್ಯುರಿಟೀಸ್​ ಲಿಮಿಟೆಡ್​ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಸತೀಶ್​ ಕಾಂಥೆತಿಯವರ ಪ್ರಕಾರ, ಡಾಲರ್ ಮೌಲ್ಯವು ಏರಿದರೆ, ಚಿನ್ನದ ಬೆಲೆ ಕಡಿಮೆಯಾಗುತ್ತದೆ. ಡಾಲರ್ ಮೌಲ್ಯವು ಕಡಿಮೆಯಾದರೆ, ಚಿನ್ನದ ಬೆಲೆ ಹೆಚ್ಚಾಗುತ್ತದೆ. ಯುಎಸ್ ಫೆಡರಲ್ ರಿಸರ್ವ್​​ ನಿರ್ಧಾರದಿಂದ ಚಿನ್ನದ ಬೆಲೆಯು ಕುಸಿಯುತ್ತಿದೆ ಎಂದರು.

ಯುಎಸ್ ಫೆಡರಲ್ ರಿಸರ್ವ್ ಮುಂಬರುವ ದಿನಗಳಲ್ಲಿ ಪ್ರಮುಖ ನೀತಿ ದರ ಹೆಚ್ಚಿಸಲು ನಿರ್ಧರಿಸಿದೆ. ಈ ನಿರ್ಧಾರವು ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್‌ಗಳ ಬೇಡಿಕೆಯನ್ನು ಹೆಚ್ಚಿಸಿದ್ದು, ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರಿತು. ಭಾರತೀಯ ರೂಪಾಯಿ ಮೌಲ್ಯವು ಇತ್ತೀಚೆಗೆ ಸುಮಾರು 100 ಪೈಸೆ ಕಡಿಮೆಯಾಗಿದೆ. ಒಂದು ಯುಎಸ್ ಡಾಲರ್ ವಿರುದ್ಧ ಭಾರತೀಯ ರೂಪಾಯಿ ಮೌಲ್ಯವು ಜೂನ್ 8 ರಂದು 72.89 ರಿಂದ ಜೂನ್ 18 ರಂದು 73.86 ಕ್ಕೆ ಇಳಿದಿದೆ.

ಡಾಲರ್ ಮೌಲ್ಯದ ಏರಿಕೆ (ಅಥವಾ ರೂಪಾಯಿ ಮೌಲ್ಯದ ಕುಸಿತ) ಚಿನ್ನದ ಬೆಲೆ ಕುಸಿತಕ್ಕೆ ಕಾರಣವಾಯಿತು. ಉದಾಹರಣೆಗೆ, ರಾಷ್ಟ್ರ ರಾಜಧಾನಿಯಲ್ಲಿ ಜೂನ್ 18 ರಂದು 10 ಗ್ರಾಂ ಚಿನ್ನ 46,460 ರೂ.ಗಳಿಗೆ ಮಾರಾಟ ಮಾಡಲಾಗಿದೆ.

ಡಾಲರ್​ಮೌಲ್ಯವು ಹೆಚ್ಚುತ್ತಿದ್ದು, ಅಲ್ಪಾವಧಿಯ ಅವಧಿಯಲ್ಲಿ ಚಿನ್ನದ ಬೆಲೆ ಮತ್ತಷ್ಟು ಕುಸಿಯುವ ನಿರೀಕ್ಷೆಯಿದೆ. ದೂರದೃಷ್ಟಿ ಹೊಂದಿರುವವರು ಈಗಿನಿಂದಲೇ ಚಿನ್ನದ ಮೇಲಿನ ಹೂಡಿಕೆಯನ್ನು ಪ್ರಾರಂಭಿಸಬೇಕು. ಖರೀದಿ ಮಾಡುವವರಿಗೆ ಇದು ಒಳ್ಳೆಯ ಸಮಯವಾಗಿದೆ ಎಂದು ಸತೀಶ್ ಅಭಿಪ್ರಾಯ ಪಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.