ನವದೆಹಲಿ : ಮಂಗಳವಾರದ ಚಿನ್ನದ ಬೆಲೆಗಳು ಪ್ರತಿ 10 ಗ್ರಾಂಗೆ 179 ರೂ. ನಷ್ಟು ಏರಿಕೆಯಾಗಿ 47,230ಕ್ಕೆ ತಲುಪಿದೆ.
ಮಲ್ಟಿ ಕಮೋಡಿಟಿ ಎಕ್ಸ್‌ಚೇಂಜ್‌ನಲ್ಲಿ ಡಿಸೆಂಬರ್ ವಿತರಣೆಯ ಚಿನ್ನದ ಒಪ್ಪಂದಗಳು 179 ರೂ. ಅಥವಾ ಶೇ.0.38 ವಹಿವಾಟು ನಡೆಸಿ, ಪ್ರತಿ 10 ಗ್ರಾಂಗೆ 47,230 ರೂ. ಆಗಿದೆ. 13,345 ಲಾಟ್‌ಗಳ ವ್ಯಾಪಾರ, ವಹಿವಾಟಿನಲ್ಲಿ ಭಾಗವಹಿಸುವವರು ನಿರ್ಮಿಸಿದ ತಾಜಾ ಸ್ಥಾನಗಳು ಚಿನ್ನದ ಬೆಲೆ ಏರಿಕೆಗೆ ಕಾರಣವಾಯಿತು ಎಂದು ವಿಶ್ಲೇಷಕರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆ 44,150 ರೂ. (22ct) ಅಷ್ಟಿದೆ. ನ್ಯೂಯಾರ್ಕ್‌ನಲ್ಲಿ ಪ್ರತಿ ಔನ್ಸ್‌ಗೆ ಚಿನ್ನದ ಬೆಲೆಗಳು ಶೇ.0.14ರಷ್ಟು ಹೆಚ್ಚಳವಾಗಿ 1,758.10 ಡಾಲರ್‌ಗೆ ತಲುಪಿದೆ.