ETV Bharat / bharat

ಲಖನೌ ವಿಮಾನ ನಿಲ್ದಾಣದ ಕಸದ ಬುಟ್ಟಿಯಲ್ಲಿ 6 ಚಿನ್ನದ ಗಟ್ಟಿಗಳು ಪತ್ತೆ! - Customs officials being investigation

ಲಖನೌದ ವಿಮಾನ ನಿಲ್ದಾಣದ ಕಸದ ಬುಟ್ಟಿಯಲ್ಲಿ ಕಪ್ಪು ಟೇಪ್​​ನಿಂದ ಸುತ್ತಿದ ಪ್ಲಾಸ್ಟಿಕ್​ ಕವರ್​ನಲ್ಲಿ ಚಿನ್ನದ ಬಿಸ್ಕಟ್​ಗಳು ದೊರೆತಿವೆ.

Gold bars found in Lucknow airport dustbin
ವಿಮಾನ ನಿಲ್ದಾಣದ ಕಸದ ಬುಟ್ಟಿಯಲ್ಲಿ ಆರು ಚಿನ್ನದ ಗಟ್ಟಿಗಳು ಪತ್ತೆ
author img

By

Published : Aug 4, 2022, 8:06 PM IST

ಲಖನೌ (ಉತ್ತರ ಪ್ರದೇಶ): ಕಸದ ಬಡ್ಡಿಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಆರು ಚಿನ್ನದ ಗಟ್ಟಿಗಳು ಪತ್ತೆಯಾಗಿರುವ ಘಟನೆ ಲಖನೌದ ಚೌಧರಿ ಚರಣ್​ ಸಿಂಗ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಳಕಿಗೆ ಬಂದಿದೆ. ಡಸ್ಟ್​ಬಿನ್​ನಲ್ಲಿ ಈ ಚಿನ್ನವನ್ನು ಎಸೆದವರ ಪತ್ತೆಗಾಗಿ ಕಸ್ಟಮ್ಸ್​ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

ಆರು ಚಿನ್ನದ ಗಟ್ಟಿಗಳನ್ನು ಕಪ್ಪು ಟೇಪ್​​ನಿಂದ ಸುತ್ತಿ, ಪ್ಲಾಸ್ಟಿಕ್​ ಕವರ್​ನಲ್ಲಿ ಬಚ್ಚಿಟ್ಟು ವಲಸೆ ವಿಭಾಗದ ಸಮೀಪದ ಡಸ್ಟ್​ಬಿನ್​ನಲ್ಲಿ ಹಾಕಲಾಗಿದೆ. ಇದರ ಮಾರುಕಟ್ಟೆ ಮೌಲ್ಯ ಅಂದಾಜು 36.60 ಲಕ್ಷ ರೂ. ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಚಿನ್ನದ ಬಿಸ್ಕಟ್​ಗಳು ಯಾರಿಗೆ ಸೇರಿದ್ದು ಎಂಬುವುದು ಗೊತ್ತಾಗಿಲ್ಲ. ವಿಮಾನ ನಿಲ್ದಾಣದ ಅಧಿಕಾರಿಗಳು ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಯ ತನಿಖೆಯ ಭಾಗವಾಗಿ ನಿಲ್ದಾಣದ ಕೆಲ ಸಿಬ್ಬಂದಿಯನ್ನೂ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಕೈ ಜೋಡಿಸಿ ನಮಸ್ಕರಿಸಿ ಜನರ ಲೂಟಿ​: ಖದೀಮರ ಕೈಗಳಿಗೆ ಬಿತ್ತು ಕೋಳ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.