ನವದೆಹಲಿ/ಬೆಂಗಳೂರು: ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಕೆಯಾಗಿದೆ. ದೇಶದಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 52,470 ರೂಪಾಯಿ ಇದೆ. ಮುಂಬೈ, ದೆಹಲಿ, ಹೈದರಾಬಾದ್ ಮತ್ತು ಕೋಲ್ಕತ್ತಾದಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 48,100 ರೂಪಾಯಿ ಇದ್ದು, ಚೆನ್ನೈನಲ್ಲಿ 48,200 ರೂ.ಗೆ ಮಾರಾಟವಾಗುತ್ತಿದೆ.
ದೇಶದಲ್ಲಿ ಬೆಳ್ಳಿಯ ಬೆಲೆಯೂ ಏರಿಕೆಯಾಗಿದೆ. ಈ ಹಿಂದೆ ಒಂದು ಕಿಲೋಗ್ರಾಂ ಬೆಳ್ಳಿಯ ಬೆಲೆ 61,400 ರೂಪಾಯಿ ಇತ್ತು. ಆದರೆ ಇಂದಿನ ಮಾರುಕಟ್ಟೆಯಲ್ಲಿ ಬೆಳ್ಳಿಯ ಬೆಲೆ 62,700 ರೂ.ಗೆ ಮಾರಾಟವಾಗುತ್ತಿದೆ. ದೆಹಲಿ, ಮುಂಬೈ ಮತ್ತು ಕೋಲ್ಕತ್ತಾ ಸೇರಿದಂತೆ ಹೆಚ್ಚಿನ ಪ್ರಮುಖ ನಗರಗಳಲ್ಲಿ ಬೆಳ್ಳಿ 62,700 ರೂಪಾಯಿಗೆ ಮಾರಾಟವಾಗುತ್ತಿದೆ. ಆದರೆ ಚೆನ್ನೈ ಮತ್ತು ಹೈದರಾಬಾದ್ನಲ್ಲಿ ಕೆಜಿಗೆ 67,000 ರೂಪಾಯಿ ಇದ್ದ ಬೆಳ್ಳಿ ಇಂದು 68,500 ರೂ.ಗೆ ಸೇಲ್ ಆಗ್ತಿದೆ.
ಓದಿ: ಚಿನ್ನ ಏರಿಕೆಯಾದ್ರೆ ಬೆಳ್ಳಿ ದರದಲ್ಲಿ ಕೊಂಚ ಇಳಿಕೆ ಕಂಡಿದೆ.. ಇಂದಿನ ಆಭರಣಗಳ ಬೆಲೆ ಇಷ್ಟು..
ಬೆಂಗಳೂರು ಸೇರಿದಂತೆ ಇತರ ಪ್ರಮುಖ ಜಿಲ್ಲೆಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 47,720 ರೂಪಾಯಿಗೆ ಮಾರಾಟವಾಗುತ್ತಿದೆ. ಬೆಳ್ಳಿ ಒಂದು ಕೆಜಿಗೆ 62,100 ರೂಪಾಯಿ ಇದೆ. ಮಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ ದರ ಗ್ರಾಂಗೆ 4,7750 ರೂ.ಗೆ ಮತ್ತು 24 ಕ್ಯಾರೆಟ್ ಚಿನ್ನ ದರ ಗ್ರಾಂಗೆ 52,100 ರೂ.ಗೆ ಮಾರಾಟವಾದರೆ, ಬೆಳ್ಳಿ ಪ್ರತಿ ಗ್ರಾಂಗೆ 67.50 ರೂಪಾಯಿಯಂತೆ ಸೇಲ್ ಆಗ್ತಿದೆ.
ಮೈಸೂರಿನಲ್ಲಿ 22 ಕ್ಯಾರೆಟ್ ಚಿನ್ನ ದರ ಗ್ರಾಂಗೆ 47,580 ರೂ.ಗೆ ಮತ್ತು 24 ಕ್ಯಾರೆಟ್ ಚಿನ್ನ ದರ ಗ್ರಾಂಗೆ 52,700 ರೂ.ಗೆ ಮಾರಾಟವಾದ್ರೆ, ಬೆಳ್ಳಿ ಪ್ರತಿ ಗ್ರಾಂಗೆ 63.60 ರೂಪಾಯಿಯಂತೆ ಸೇಲ್ ಆಗ್ತಿದೆ. ರಾಜ್ಯದಲ್ಲಿ ಚಿನ್ನದ ದರ ಮತ್ತು ಬೆಳ್ಳಿ ದರದಲ್ಲಿ ಏರಿಳಿಕೆಯಾದ ಹಿನ್ನೆಲೆ ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ.