ETV Bharat / bharat

ಗೋವಾ ರಾಜಕಾರಣಿಯಿಂದ ಮಹದಾಯಿ ಕ್ಯಾತೆ: ಕರ್ನಾಟಕದ ಪ್ರಯತ್ನ ತಡೆಯಲು ಪತ್ರ

ಕರ್ನಾಟಕದ ಕ್ರಮಗಳು ಗೋವಾದ ಮೂಲಕ ಹರಿಯುವ ಮಹದಾಯಿ ನದಿಗೆ ತೀವ್ರ ಅಪಾಯವನ್ನು ಉಂಟುಮಾಡುತ್ತವೆ. ಈ ವಿಷಯದ ಬಗ್ಗೆ ತುರ್ತು ತನಿಖೆಯ ಅಗತ್ಯವಿದೆ ಎಂದು ಗೋವಾ ಫಾರ್ವರ್ಡ್ ಪಕ್ಷದ ಅಧ್ಯಕ್ಷ ವಿಜಯ್ ಸರ್ದೇಸಾಯಿ ಹೇಳಿದ್ದಾರೆ.

Goa Forward Party asks Sawant govt to stop attempts of Karnataka to divert water
ಗೋವಾ ರಾಜಕಾರಣಿಯಿಂದ ಮಹದಾಯಿ ಕ್ಯಾತೆ: ಕರ್ನಾಟಕದ ಪ್ರಯತ್ನ ತಡೆಯುವಂತೆ ಪತ್ರ
author img

By

Published : Aug 5, 2022, 4:20 PM IST

ಪಣಜಿ (ಗೋವಾ): ಮಹದಾಯಿ ವಿಷಯಕ್ಕೆ ಸಂಬಂಧಿಸಿದಂತೆ ನೆರೆ ಗೋವಾದ ರಾಜಕಾರಣಿಯೊಬ್ಬರು ಕ್ಯಾತೆ ತೆಗೆದಿದ್ದಾರೆ. ಮಹದಾಯಿ ನದಿ ನೀರನ್ನು ತಿರುಗಿಸುವ ಮತ್ತು ಕರ್ನಾಟಕವು ಬಾಂದಾರ ನಿರ್ಮಿಸುವ ಯತ್ನವನ್ನು ತಡೆಯಲು ಕ್ರಮ ಕ್ರಮಕೈಗೊಳ್ಳುವಂತೆ ಫಾರ್ವರ್ಡ್ ಪಕ್ಷದ ಅಧ್ಯಕ್ಷ, ಶಾಸಕ ವಿಜಯ್ ಸರ್ದೇಸಾಯಿ ಗೋವಾ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಕರ್ನಾಟಕದ ಮಹದಾಯಿ ಜಲಾನಯನ ಪ್ರದೇಶದ ಹೊರಗೆ ನೀರನ್ನು ತಿರುಗಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಅಣೆಕಟ್ಟು ನಿರ್ಮಾಣವನ್ನು ಪ್ರಾರಂಭಿಸಿದೆ ಎಂಬ ಪರಿಸರವಾದಿ ರಾಜೇಂದ್ರ ಕೇರ್ಕರ್ ಆರೋಪವನ್ನು ಉಲ್ಲೇಖಿಸಿ ವಿಜಯ್ ಸರ್ದೇಸಾಯಿ ಈ ಪತ್ರ ಬರೆದಿದ್ದು, ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಪರಿಶೀಲನೆ ನಡೆಸಬೇಕೆಂದು ಒತ್ತಾಯಿಸಿದ್ಧಾರೆ.

"ಕರ್ನಾಟಕದ ಕ್ರಮಗಳು ಗೋವಾದ ಮೂಲಕ ಹರಿಯುವ ಮಹದಾಯಿ ನದಿಗೆ ತೀವ್ರ ಅಪಾಯವನ್ನುಂಟುಮಾಡುತ್ತವೆ. ಈ ವಿಷಯದ ಬಗ್ಗೆ ತುರ್ತು ತನಿಖೆಯ ಅಗತ್ಯವಿದೆ. ಇದನ್ನು ಆದ್ಯತೆಯ ಮೇಲೆ ನ್ಯಾಯಮಂಡಳಿ ಮತ್ತು ಸುಪ್ರೀಂ ಕೋರ್ಟ್‌ನ ಗಮನಕ್ಕೆ ತರಬೇಕು" ಎಂದು ಸರ್ದೇಸಾಯಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

"ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಮಹದಾಯಿ ತಮಗೆ ತಾಯಿಗಿಂತ ಹೆಚ್ಚು ಎಂದು ಅನೇಕ ಬಾರಿ ಹೇಳಿದ್ದಾರೆ. ನಾವು ಮಹದಾಯಿ ನದಿ ನಮ್ಮ ಜೀವನಾಡಿ ಎಂದು ನಂಬುತ್ತೇವೆ. ಆದ್ದರಿಂದ ಸರ್ಕಾರ ಕೂಡಲೇ ಪರಿಶೀಲನೆ ನಡೆಸಿ ಯುದ್ಧೋಪಾದಿಯಲ್ಲಿ ಕಾರ್ಯಪ್ರವೃತ್ತವಾಗಬೇಕು. ಕರ್ನಾಟಕ ಬಾಂದಾರ ನಿರ್ಮಿಸದಂತೆ ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ನೀರನ್ನು ಹರಿಸುವ ಯಾವುದೇ ಪ್ರಯತ್ನಗಳನ್ನು ನಿಲ್ಲಿಸಬೇಕೆಂದು ಗೋವಾ ಫಾರ್ವರ್ಡ್ ಪಕ್ಷದ ಪರವಾಗಿ ವಿನಂತಿಸುತ್ತೇನೆ" ಎಂದು ಹೇಳಿದ್ದಾರೆ.

ಟ್ವೀಟ್​ ಮಾಡಿ ಕಿಡಿ: ಇದೇ ವಿಷಯವಾಗಿ ಟ್ವೀಟ್​ ಕೂಡ ಮಾಡಿರುವ ವಿಜಯ್ ಸರ್ದೇಸಾಯಿ, "ಮತ್ತೆ, ಗೋವಾ ಸರ್ಕಾರ ನೋಡಿ, ಸರ್ಕಾರ ಕರ್ನಾಟಕ ತನ್ನ ದುರಹಂಕಾರದ ಪ್ರಾಬಲ್ಯವನ್ನು ಮಹದಾಯಿ ಮೇಲೆ ಮುಂದುವರೆಸಿದೆ. ಮಹದಾಯಿ ನದಿಯನ್ನು ಉಸಿರುಗಟ್ಟಿಸುವುದೇ?. ಹೌದು ಅಥವಾ ಇಲ್ಲವೇ?" ಎಂದು ಪ್ರಶ್ನೆ ಮಾಡಿದ್ಧಾರೆ.

ಇದನ್ನೂ ಓದಿ: ಉಪರಾಷ್ಟ್ರಪತಿ ಚುನಾವಣೆ: ಮಾರ್ಗರೇಟ್ ಆಳ್ವ ಬೆಂಬಲಿಸಲು ಟಿಆರ್​ಎಸ್​ ನಿರ್ಧಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.