ETV Bharat / bharat

Facebook​, WhatsApp​ ಬೆನ್ನಲ್ಲೇ Gmail ಸರದಿ... ಭಾರತ ಸೇರಿ ಅನೇಕ ದೇಶಗಳಲ್ಲಿ ಸೇವೆ ಸ್ಥಗಿತ

ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಜಿಮೇಲ್(Gmail)​​ ಸ್ಥಗಿತಗೊಂಡಿದ್ದು, ಲಾಗಿನ್​ ಸೇರಿದಂತೆ ಇ-ಮೇಲ್​ ಕಳುಹಿಸಲು ಹಾಗೂ ಸ್ವೀಕರಿಸಲು ಸಮಸ್ಯೆ ಎದುರಿಸುತ್ತಿದ್ದಾರೆ.

author img

By

Published : Oct 12, 2021, 5:26 PM IST

Gmail Services Down In India
Gmail Services Down In India

ನವದೆಹಲಿ: ಕಳೆದ ಕೆಲ ದಿನಗಳ ಹಿಂದೆ ಫೇಸ್​​ಬುಕ್(Facebook)​, ಇನ್ಸ್​​ಸ್ಟಾಗ್ರಾಂ(Instagram) ಹಾಗೂ ವ್ಯಾಟ್ಸ್​​ಆ್ಯಪ್​(WhatsApp) ಸೇವೆ ಸ್ಥಗಿತಗೊಂಡು ಕೋಟ್ಯಂತರ ಜನರು ಸಮಸ್ಯೆ ಎದುರಿಸಿದ್ದರು. ಇದೀಗ ಗೂಗಲ್​ ಒಡೆತನದ Gmail ಕೂಡ ಜಾಗತಿಕ ಮಟ್ಟದಲ್ಲಿ ಸ್ಥಗಿತಗೊಂಡಿದೆ.

ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ Gmail ಸೇವೆ ಸ್ಥಗಿತಗೊಂಡಿದ್ದು, ಬಳಕೆದಾರರು ಸಂದೇಶ ಕಳುಹಿಸಲು ಹಾಗೂ ಸ್ವೀಕರಿಸುವಾಗ ಸಮಸ್ಯೆ ಎದುರಿಸಿದ್ದಾರೆ. ನನಗೆ ಇ-ಮೇಲ್​ ಕಳುಹಿಸಲು ಹಾಗೂ ಸ್ವೀಕಾರ ಮಾಡಲು ತೊಂದರೆಯಾಗುತ್ತಿದೆ ಎಂದು ಅನೇಕರು ಬರೆದುಕೊಂಡಿದ್ದರೆ, ಕೆಲವರಿಗೆ ಲಾಗಿನ್​ ಮಾಡಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.

ಲಭ್ಯವಾಗಿರುವ ಮಾಹಿತಿ ಪ್ರಕಾರ ಶೇ. 68ರಷ್ಟು ಬಳಕೆದಾರರು ಸಮಸ್ಯೆ ಎದುರಿಸಿದ್ದು, ಶೇ.18ರಷ್ಟು ಬಳಕೆದಾರರು ಸರ್ವರ್​​ ಹಾಗೂ ಶೇ. 14ರಷ್ಟು ಜನರು ಲಾಗಿನ್​​ ಸಮಸ್ಯೆ ಎದುರಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿರಿ: ಸರ್ವರ್ ​ಡೌನ್​ಗೆ ಕ್ಷಮೆಯಾಚಿಸಿದ ಫೇಸ್​​ಬುಕ್: ಸಮಸ್ಯೆ ಪರಿಹರಿಸಿರುವುದಾಗಿ ಸ್ಪಷ್ಟನೆ

ಕಳೆದ ವಾರ ಫೇಸ್​ಬುಕ್​, ವಾಟ್ಸ್​​ಆ್ಯಪ್​ ಹಾಗೂ ಇನ್​​ಸ್ಟಾಗ್ರಾಂ ಸೇವೆ ಸ್ಥಗಿತಗೊಂಡಿತು. ಇದರಿಂದ 7 ಬಿಲಿಯನ್ ಡಾಲರ್​ ನಷ್ಟವಾಗಿರುವುದಾಗಿ ಜುಕರ್​ಬರ್ಗ್​​ ಹೇಳಿಕೊಂಡಿದ್ದರು. ತಮ್ಮಿಂದ ಆದ ತೊಂದರೆಗೆ ಕ್ಷಮೆಯಾಚಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.