ETV Bharat / bharat

ಕೊರೊನಾ ನಾಗಾಲೋಟ ; ವಿಶ್ವದಾದ್ಯಂತ 7 ಕೋಟಿಗೂ ಅಧಿಕ ಮಂದಿಗೆ ವಕ್ಕರಿಸಿದೆ ವೈರಸ್​!!

author img

By

Published : Dec 15, 2020, 4:40 PM IST

ಯುಎಸ್​ನ ಫೆಡರಲ್ ಆರೋಗ್ಯ ಅಧಿಕಾರಿಗಳು ರಾಷ್ಟ್ರದ ಅತಿದೊಡ್ಡ ವ್ಯಾಕ್ಸಿನೇಷನ್ ಅಭಿಯಾನ ಹೆಚ್ಚಿಸಲು ಹಾಗೂ 2ನೇ ಹಂತದ ಕೋವಿಡ್​ ವ್ಯಾಕ್ಸಿನ್‌​ ಪರಿಶೀಲಿಸುತ್ತಿರುವುದರಿಂದ ಯುಎಸ್​ನ ನೂರಾರು ಆಸ್ಪತ್ರೆಗಳು ಇಂದು ತಮ್ಮ ಸಿಬ್ಬಂದಿಗೆ ಲಸಿಕೆ ನೀಡಲು ಪ್ರಾರಂಭಿಸಿವೆ..

COVID19 tracker
ಕೊರೊನಾ

ಹೈದರಾಬಾದ್ : ಕೊರೊನಾ ವೈರಸ್ ತನ್ನ ಓಟವನ್ನು ಮುಂದುವರೆಸಿದೆ. ಈ ಸಾಂಕ್ರಾಮಿಕವು ಪ್ರಪಂಚದಾದ್ಯಂತ 7,32,12,302ಕ್ಕೂ ಹೆಚ್ಚು ಜನರಿಗೆ ತಗುಲಿದೆ. 16,28,442ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈವರೆಗೆ 5,13,53,862ಕ್ಕೂ ಹೆಚ್ಚು ಜನ ಚೇತರಿಸಿಕೊಂಡಿದ್ದಾರೆ.

Global COVID19 tracker
ಕೊರೊನಾ ವೈರಸ್​ಗೆ ತತ್ತರಿಸಿದ ಟಾಪ್​ ದೇಶಗಳು ಇವೇ

1,69,42,980 ಕ್ಕಿಂತ ಹೆಚ್ಚು ಪ್ರಕರಣ ಮತ್ತು 3,08,091 ಕ್ಕಿಂತ ಹೆಚ್ಚು ಸಾವುನೋವುಗಳೊಂದಿಗೆ ಯುಎಸ್ ಕೋವಿಡ್​ಗೆ ಹೆಚ್ಚು ನಲುಗಿದ ರಾಷ್ಟ್ರವಾಗಿದೆ. ಯುಎಸ್​ನ ಫೆಡರಲ್ ಆರೋಗ್ಯ ಅಧಿಕಾರಿಗಳು ರಾಷ್ಟ್ರದ ಅತಿದೊಡ್ಡ ವ್ಯಾಕ್ಸಿನೇಷನ್ ಅಭಿಯಾನ ಹೆಚ್ಚಿಸಲು ಹಾಗೂ 2ನೇ ಹಂತದ ಕೋವಿಡ್​ ವ್ಯಾಕ್ಸಿನ್‌​ ಪರಿಶೀಲಿಸುತ್ತಿರುವುದರಿಂದ ಯುಎಸ್​ನ ನೂರಾರು ಆಸ್ಪತ್ರೆಗಳು ಇಂದು ತಮ್ಮ ಸಿಬ್ಬಂದಿಗೆ ಲಸಿಕೆ ನೀಡಲು ಪ್ರಾರಂಭಿಸಿವೆ.

ಇದನ್ನೂ ಓದಿ: ಚೀನಾದ ಟಾಪ್ 3 ಕೋವಿಡ್ -19 ಲಸಿಕೆಗಳ ಸ್ಥಿತಿ-ಗತಿ ಹೇಗಿದೆ?

ಅಮೆರಿಕನ್ನರು, ಬ್ರಿಟನ್ನರು,ಕೆನಡಿಯನ್ನರು ಹಾಗೂ ಅನೇಕ ಪಾಶ್ಚಿಮಾತ್ಯ ದೇಶಗಳು ಲಸಿಕೆ ಕೊಳ್ಳಲು ಕೈ ಮುಂದೆ ಚಾಚಿವೆ. ಅಲ್ಲದೆ ಅವರಿಗೆ ತಾವು ಈ ಸಾಂಕ್ರಾಮಿಕದಿಂದ ಹೊರ ಬರುವುದು ಸಹ ಸ್ಪಷ್ಟವಾಗಿದೆ. ಆದರೆ, ಕೊರೊನಾದಿಂದ ನಲುಗಿರುವ ಬಡ ರಾಷ್ಟ್ರಗಳಿಗೆ ಮಾತ್ರ ಈ ದಾರಿ ತೀರಾ ದೂರವಾಗಿಯೂ, ಕಠಿಣವಾಗಿಯೂ ಪರಿಣಮಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.