ETV Bharat / bharat

‘ಪ್ಲಾಸ್ಟಿಕ್​ ನೀಡಿ, ಚಿನ್ನ ತೆಗೆದುಕೊಳ್ಳಿ’.. ಫಲಿಸಿತು ಸರ್​ಪಂಚ್​ ಐಡಿಯಾ, ಸ್ವಚ್ಛವಾಯ್ತು ಗ್ರಾಮ! - ಫಲಿಸಿತು ಸರ್​ಪಂಚ್​ ಐಡಿಯಾ

ಒಂದು ಕಾಲದಲ್ಲಿ ಗ್ರಾಮದ ಸಮೀಪದ ನದಿ ಚರಂಡಿಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಹರಿಯುತ್ತಿತ್ತು. ಇಂದು ಈ ಗ್ರಾಮದ ಮುಖಲಕ್ಷಣವೇ ಬದಲಾಗಿದೆ. ಮಹಿಳೆಯರೂ ಸ್ವಚ್ಛತೆಗೆ ಸಹಕರಿಸಿದ್ದಾರೆ. ಹಳ್ಳಿಯ ರಸ್ತೆಗಳಲ್ಲಿ ಕಸದ ರಾಶಿಯಿತ್ತು, ಇಂದು ರಸ್ತೆಗಳು ಸ್ವಚ್ಛವಾಗಿವೆ. ಆ ಗ್ರಾಮ ಯಾವುದು, ಪ್ಲಾಸ್ಟಿಕ್​ ಕೊಟ್ಟು ಚಿನ್ನ ತೆಗೆದುಕೊಳ್ಳಿ ಎಂಬ ಅಭಿಯಾನ ಪ್ರಾರಂಭಿಸಿದ್ದು ಯಾರು ಎಂಬುದು ತಿಳಿಯೋಣಾ ಬನ್ನಿ..

Give plastic and take gold  environment pollution free  Advocate Farooq Ahmad Ganai  ಪ್ಲಾಸ್ಟಿಕ್ ಮಾಲಿನ್ಯದ ವಿರುದ್ಧ ಹೋರಾಡಲು ವಿಶಿಷ್ಟ ಅಭಿಯಾನ  ನದಿ ಚರಂಡಿಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ  ಹಳ್ಳಿಯ ರಸ್ತೆಗಳಲ್ಲಿ ಕಸದ ರಾಶಿ  ಪ್ಲಾಸ್ಟಿಕ್​ ಕೊಟ್ಟು ಚಿನ್ನ ತೆಗೆದುಕೊಳ್ಳಿ ಎಂಬ ಅಭಿಯಾನ  ಅಂಟಾರ್ಟಿಕಾದ ಮಂಜುಗಡ್ಡೆಯಲ್ಲೂ ಪ್ಲಾಸ್ಟಿಕ್ ಪತ್ತೆ  ಸಾದೇವಾರ ಗ್ರಾಮದ ನಿವಾಸಿಯಾದ ಸರಪಂಚ್ ಫಾರೂಕ್  ಸ್ಟಿಕ್ ತ್ಯಾಜ್ಯದಿಂದ ಸ್ವಚ್ಛಗೊಳಿಸುವ ವಿಶಿಷ್ಟ ಅಭಿಯಾನ  ಫಲಿಸಿತು ಸರ್​ಪಂಚ್​ ಐಡಿಯಾ  ಸ್ವಚ್ಛವಾಯ್ತು ಗ್ರಾಮ
ಫಲಿಸಿತು ಸರ್​ಪಂಚ್​ ಐಡಿಯಾ
author img

By

Published : Apr 7, 2023, 1:40 PM IST

ಅನಂತನಾಗ್, ಜಮ್ಮು-ಕಾಶ್ಮೀರ್​: ಪ್ಲಾಸ್ಟಿಕ್​ಗಳು ಪರ್ವತಗಳ ಎತ್ತರದಿಂದ ಸಮುದ್ರದ ಆಳಕ್ಕೆ ತಲುಪಿದೆ. ಅಂಟಾರ್ಟಿಕಾದ ಮಂಜುಗಡ್ಡೆಯಲ್ಲೂ ಪ್ಲಾಸ್ಟಿಕ್ ಪತ್ತೆಯಾಗಿದೆ. ನಾವು ಉಸಿರಾಡುವ ಗಾಳಿಯಲ್ಲಿ ಪ್ಲಾಸ್ಟಿಕ್‌ನ ಉಪಸ್ಥಿತಿಯೂ ಇದೆ. ಅದು ನಮ್ಮ ಶ್ವಾಸಕೋಶವನ್ನು ತಲುಪುತ್ತಿದೆ. ಪ್ಲಾಸ್ಟಿಕ್​ನಿಂದಾಗುವ ದುಷ್ಪರಿಣಾಮಗಳ ಬಗ್ಗೆ ನಮಗೆಲ್ಲ ಗೊತ್ತಿದ್ದರೂ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುತ್ತಿಲ್ಲ. ಜಮ್ಮು ಮತ್ತು ಕಾಶ್ಮೀರದ ಹಳ್ಳಿಯೊಂದು ಪ್ಲಾಸ್ಟಿಕ್ ಮಾಲಿನ್ಯದ ವಿರುದ್ಧ ಹೋರಾಡಲು ವಿಶಿಷ್ಟ ಅಭಿಯಾನವನ್ನು ಪ್ರಾರಂಭಿಸಿದೆ. ಈ ಗ್ರಾಮದಲ್ಲಿ ಪ್ಲಾಸ್ಟಿಕ್ ಬದಲು ಚಿನ್ನ ಸಿಗುತ್ತದೆ.

ದಕ್ಷಿಣ ಅನಂತನಾಗ್ ಜಿಲ್ಲೆಯ ಹಿಲ್ಲರ್ ಶಹಾಬಾದ್ ಬ್ಲಾಕ್‌ನ ಸಾದೇವಾರ ಗ್ರಾಮದ ನಿವಾಸಿಯಾದ ಸರಪಂಚ್ ಫಾರೂಕ್ ಅಹ್ಮದ್ ಗನೈ ಅವರು ತಮ್ಮ ಪ್ರದೇಶವನ್ನು ಪ್ಲಾಸ್ಟಿಕ್ ತ್ಯಾಜ್ಯದಿಂದ ಸ್ವಚ್ಛಗೊಳಿಸುವ ವಿಶಿಷ್ಟ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಗ್ರಾಮ ಪಂಚಾಯಿತಿಯ ಸರಪಂಚರು ಪ್ಲಾಸ್ಟಿಕ್ ಮಾಲಿನ್ಯವನ್ನು ಎದುರಿಸಲು ವಿಶಿಷ್ಟ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ವೃತ್ತಿಯಲ್ಲಿ ವಕೀಲರಾಗಿರುವ ಫಾರೂಕ್ ಅಹಮದ್ ಗನೈ ಅವರು ‘ಪ್ಲಾಸ್ಟಿಕ್ ನೀಡಿ ಚಿನ್ನ ತೆಗೆದುಕೊಳ್ಳಿ’ ಎಂಬ ಅಭಿಯಾನ ಆರಂಭಿಸಿದರು. ಫಾರೂಕ್ ಗ್ರಾಮಸ್ಥರಿಗೆ ಪ್ಲಾಸ್ಟಿಕ್ ಸಂಗ್ರಹಿಸಲು ಪ್ರೇರಣೆ ನೀಡಿದರು.

ಈಟಿವಿ ಭಾರತದೊಂದಿಗೆ ಮಾತನಾಡಿದ ಫಾರೂಕ್ ಅಹ್ಮದ್, ಈ ಅಭಿಯಾನದಡಿ ಹೇಳಿದ ಗ್ರಾಮದಿಂದ 20 ಕ್ವಿಂಟಾಲ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸುವ ವ್ಯಕ್ತಿಗೆ 10 ಗ್ರಾಂ ಚಿನ್ನದ ನಾಣ್ಯವನ್ನು ನೀಡಲಾಗುವುದು. ತ್ಯಾಜ್ಯ ಸಂಗ್ರಹಣೆಗೆ ಯಾವುದೇ ಗುರಿ ಅಗತ್ಯವಿಲ್ಲ. ತಮ್ಮ ಕೈಲಾದಷ್ಟು ಪ್ರತಿಯೊಬ್ಬರೂ ಈ ಅಭಿಯಾನದಲ್ಲಿ ಪಾಲ್ಗೊಂಡು ಬಹುಮಾನ ಗೆಲ್ಲಬಹುದಾಗಿದೆ ಎಂದು ಹೇಳಿದರು.

ಪ್ಲಾಸ್ಟಿಕ್ ತ್ಯಾಜ್ಯದ ಬದಲಿಗೆ ಚಿನ್ನದ ನಾಣ್ಯಗಳ ನೀಡುವುದಕ್ಕೆ ಜಿಲ್ಲಾ ಅಭಿವೃದ್ಧಿ ಆಯುಕ್ತ ಡಾ.ಬಶರತ್ ಖಯೂಮ್ ಅವರ ಅನುಮೋದನೆ ದೊರೆತಿದೆ. ಈ ಬಗ್ಗೆ ಡಿಸಿಯವರೊಂದಿಗೆ ಚರ್ಚಿಸಿದ ಅವರು, ಈ ವಿಶಿಷ್ಟ ಅಭಿಯಾನಕ್ಕೆ ಡಿಸಿ ಅವರು ಫಾರೂಕ್​ ಅವರನ್ನು ಶ್ಲಾಘಿಸಿದ್ದಾರೆ ಕೂಡಾ. ಜನವರಿ 7, 2023 ರಂದು ಗ್ರಾಮೀಣಾಭಿವೃದ್ಧಿ ಇಲಾಖೆ ಆಯೋಜಿಸಿದ್ದ ಸಮಾರಂಭದಲ್ಲಿ ಈ ಅಭಿಯಾನಕ್ಕೆ ಚಾಲನೆ ದೊರೆತಿದೆ.

ಅಭಿಯಾನದ ಪ್ರಾರಂಭ, ನಿರಂತರ ಸಾಮೂಹಿಕ ಮತ್ತು ವೈಯಕ್ತಿಕ ಸ್ವಚ್ಛತಾ ಅಭಿಯಾನಗಳು ಈ ಪ್ರದೇಶದಲ್ಲಿ ನಡೆಯುತ್ತಿವೆ. ಈ ಅಭಿಯಾನವನ್ನು ಯಶಸ್ವಿಗೊಳಿಸಲು ಫಾರೂಕ್ ಅಹಮದ್ ಅವರು ಕನಿಷ್ಠ 30 ಸ್ವಯಂಸೇವಕರೊಂದಿಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇದರಲ್ಲಿ ಯುವ ಕ್ಲಬ್‌ಗಳು, ಔಕಾಫ್ ಸಂಸ್ಥೆಯ ಸ್ಥಳೀಯ ಸದಸ್ಯರು, ಹಿರಿಯ ನಾಗರಿಕರು ಮತ್ತು ನೀರಾವರಿ ನೌಕರರು ಸೇರಿದ್ದಾರೆ.

ಅಭಿಯಾನದ ವೇಳೆ ಕ್ಷೇತ್ರದ ರಸ್ತೆಗಳಲ್ಲದೇ ನದಿ-ಕಾಲುವೆಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ಕಸ ಸಂಗ್ರಹಿಸಲು ಸಾಕಷ್ಟು ಸಂಗ್ರಹಣಾ ತಾಣಗಳಿವೆ. ಕಯಾಂ ಎಂಬಲ್ಲಿ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ಅಷ್ಟೇ ಅಲ್ಲ ತ್ಯಾಜ್ಯವನ್ನು ಮರುಬಳಕೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಫಾರೂಕ್​ ಹೇಳುತ್ತಾರೆ.

ತ್ಯಾಜ್ಯ ಸಂಗ್ರಹಿಸಲು ಜನರಿಗೂ ಒಂದಿಷ್ಟು ಪ್ರೇರಣೆ ಬೇಕು. ಜನರಲ್ಲಿ ಜಾಗೃತಿ ಮೂಡಿಸಲು ಒಂದು ತಂತ್ರಗಾರಿಕೆ ಬೇಕಿತ್ತು. ಹೀಗಾಗಿ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಚಿನ್ನದ ನಾಣ್ಯಗಳನ್ನು ಬಹುಮಾನವಾಗಿ ಕೊಡುವ ಯೋಚನೆ ಮನಸ್ಸಿಗೆ ಬಂದಿತ್ತು. ನದಿ, ಕಾಲುವೆ, ಬೀದಿಗೆ ಎಸೆಯುವ ಬದಲು ಪ್ಲಾಸ್ಟಿಕ್ ಅನ್ನು ತರಕಾರಿಗಳನ್ನು ಸಂಗ್ರಹಿಸುವ ರೀತಿಯಲ್ಲಿ ಜನರಲ್ಲಿ ಜಾಗೃತಿ ಮೂಡಿಸಿ ಅವರ ಮನಸ್ಥಿತಿಯನ್ನು ಬದಲಾಯಿಸಲು ಬಯಸಿದ್ದೇನೆ ಎಂದು ಅವರು ಹೇಳಿದರು.

ಇಂದು ಈ ಅಭಿಯಾನದಲ್ಲಿ ಸಾಕಷ್ಟು ಯಶಸ್ವಿಯಾಗಿದ್ದೇನೆ. ಅವರ ಪ್ರಯತ್ನದಿಂದಾಗಿ ಇಂದು ಅಭಿಯಾನದ ಸಕಾರಾತ್ಮಕ ಪರಿಣಾಮಗಳು ಗೋಚರಿಸುತ್ತಿದ್ದು, ಪ್ಲಾಸ್ಟಿಕ್‌ನಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿದೆ. ಈ ಅಭಿಯಾನವನ್ನು ತಮ್ಮ ಕ್ಷೇತ್ರಕ್ಕೆ ಸೀಮಿತಗೊಳಿಸುವುದಿಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಈ ಅಭಿಯಾನ ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದ್ದಾರೆ.

ನಮ್ಮ ಪರಿಸರವು ಸುರಕ್ಷಿತ ಮತ್ತು ಮಾಲಿನ್ಯ ಮುಕ್ತವಾಗಿರುವವರೆಗೆ ನಾವು ಸುರಕ್ಷಿತವಾಗಿರುತ್ತೇವೆ. ಈ ಅಭಿಯಾನವು ಖಂಡಿತವಾಗಿಯೂ ಕೆಲಸ ಮಾಡುತ್ತದೆ. ವಿಶೇಷವಾಗಿ ಚಿನ್ನವು ಸಿಗುತ್ತದೆ. ಇದನ್ನು ಪಡೆಯಲು ಜನರು ಕಸವನ್ನು ಎಸೆಯುವುದಿಲ್ಲ ಮತ್ತು ಕ್ರಮೇಣ ಅವರಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸಬಹುದು ಎಂದು ಫಾರೂಕ್​ ಹೇಳುತ್ತಾರೆ.

ಫಾರೂಕ್ ಅಹ್ಮದ್ ಮೊದಲು ಮನೆ ಮನೆಗೆ ತೆರಳಿ ಈ ಅಭಿಯಾನದ ಬಗ್ಗೆ ತಿಳಿಸಿದರು. ಬಳಿಕ ದಿನ ಕಳೆದಂತೆ ಜನರು ಸ್ವಯಂ ಪ್ರೇರಣೆಯಿಂದ ಅವರ ಅಭಿಯಾನದಲ್ಲಿ ಪಾಲ್ಗೊಂಡರು ಎಂದು ಅಲ್ಲಿನ ಸ್ಥಳೀಯರು ಹೇಳುತ್ತಾರೆ. ಜನರು ಚಿನ್ನಕ್ಕಾಗಿ ಈ ಅಭಿಯಾನದಲ್ಲಿ ಪಾಲ್ಗೊಂಡರು. ಅವರ ಈ ವಿಶಿಷ್ಟ ಅಭಿಯಾನವು ಸಾಕಷ್ಟು ಪರಿಣಾಮ ಬೀರಿತು. ಇಂದು ಗ್ರಾಮದ ರಸ್ತೆಗಳು, ಬೀದಿಗಳು ಕಸದಿಂದ ಮುಕ್ತವಾಗಿವೆ. ಫಾರೂಕ್ ಅಹ್ಮದ್ ಅವರ ಈ ಪ್ರಯತ್ನದಿಂದ ಸ್ಥಳೀಯ ಜನರಲ್ಲಿ ಜಾಗೃತಿ ಮೂಡಿದೆ ಮತ್ತು ಜನರು ಕಸವನ್ನು ಎಸೆಯುವ ಬದಲು ಸಂಗ್ರಹಿಸುತ್ತಿದ್ದಾರೆ ಎಂದು ಸ್ಥಳೀಯರು ಹೇಳಿಕೊಳ್ಳುತ್ತಿದ್ದಾರೆ.

ಫಾರೂಕ್ ಅವರ ಪ್ರಚಾರ ಮತ್ತು ಪ್ರಯತ್ನ ಫಲ ನೀಡಿದೆ. ಅವರ ಗ್ರಾಮ ಕಾಶ್ಮೀರ ಕಣಿವೆಯಲ್ಲಿ ಪ್ಲಾಸ್ಟಿಕ್ ಮುಕ್ತ ಎಂದು ಘೋಷಿಸಿದ ಮೊದಲ ಗ್ರಾಮವಾಗಿದೆ. ಯುವಕರು ಕೂಡ ಗ್ರಾಮದ ಪ್ರಗತಿಗೆ ಸರಪಂಚರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಿರುವುದು ಗಮನಾರ್ಹ..

ಓದಿ: ಎಚ್ಚರ... ಕಾಗದದ ಆಹಾರ ಕಂಟೇನರ್​ನಲ್ಲಿರುತ್ತೆ ಅಪಾಯಕಾರಿ ಕೆಮಿಕಲ್: ಅಧ್ಯಯನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.