ETV Bharat / bharat

ಸಿಧು ಮೂಸೆವಾಲಾ ಹತ್ಯೆ ಪ್ರಕರಣ: ಜೈಲಿನಿಂದ ತಪ್ಪಿಸಿಕೊಂಡಿದ್ದ ಗ್ಯಾಂಗ್​ಸ್ಟರ್​ ಗರ್ಲ್​ಫ್ರೆಂಡ್​ ಅರೆಸ್ಟ್​ - ಪೊಲೀಸ್ ಕಸ್ಟಡಿಗೆ ಆರೋಪಿ ಗೆಳತಿ

ಸಿಧು ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿ ಪೊಲೀಸ್​ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದ ಗ್ಯಾಂಗ್​ಸ್ಟಾರ್​ನ ಗರ್ಲ್​ಫ್ರೆಂಡ್​ನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

Girlfriend of fugitive gangster Deepak Tinu  gangster Deepak Tinu Girlfriend arrested  Tinu Girlfriend arrested from Mumbai airport  ಸಿಧು ಮೂಸೆವಾಲಾ ಹತ್ಯೆ ಪ್ರಕರಣ  ಗ್ಯಾಂಗ್​ಸ್ಟಾರ್​ ಗರ್ಲ್​ಫ್ರೆಂಡ್​ ಅರೆಸ್ಟ್​ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣ  ದರೋಡೆಕೋರ ದೀಪಕ್ ಟಿನುವಿನ ಗೆಳತಿ  ಪಂಜಾಬ್ ಪೊಲೀಸರು ಭರ್ಜರಿ ಯಶಸ್ಸು  ಜಿತಿಂದರ್ ಕೌರ್ ಅಲಿಯಾಸ್ ಜ್ಯೋತಿ ಡಿಯೋಲ್  ಪೊಲೀಸ್ ಕಸ್ಟಡಿಗೆ ಆರೋಪಿ ಗೆಳತಿ  ಡಿಜಿಪಿ ಗೌರವ್ ಯಾದವ್ ಟ್ವೀಟ್
ಸಿಧು ಮೂಸೆವಾಲಾ ಹತ್ಯೆ ಪ್ರಕರಣ
author img

By

Published : Oct 10, 2022, 9:15 AM IST

ಚಂಡೀಗಢ(ಪಂಜಾಬ್)​: ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿ ಪರಾರಿಯಾಗಿದ್ದ ದರೋಡೆಕೋರ ದೀಪಕ್ ಟಿನುವಿನ ಗೆಳತಿಯನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸುವ ಮೂಲಕ ಪಂಜಾಬ್ ಪೊಲೀಸರು ಭರ್ಜರಿ ಯಶಸ್ಸು ಸಾಧಿಸಿದ್ದಾರೆ. ಬಂಧಿತ ಮಹಿಳೆಯನ್ನು ಜಿತಿಂದರ್ ಕೌರ್ ಅಲಿಯಾಸ್ ಜ್ಯೋತಿ ಡಿಯೋಲ್ ಎಂದು ಗುರುತಿಸಲಾಗಿde.ಅವರು ಮುಂಬೈನಿಂದ ಮಾಲ್ಡೀವ್ಸ್‌ಗೆ ಪರಾರಿಯಾಗಲು ಯತ್ನಿಸುತ್ತಿದ್ದರು ಎಂದು ತಿಳಿದುಬಂದಿದೆ.

ಡಿಜಿಪಿ ಟ್ವೀಟ್.. ಈ ಸಂಬಂಧ ಡಿಜಿಪಿ ಗೌರವ್ ಯಾದವ್ ಟ್ವೀಟ್ ಮಾಡಿ, 'ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡ ದರೋಡೆಕೋರ ದೀಪಕ್ ಟಿನು ಅವರ ಗೆಳತಿಯನ್ನು ಗುಪ್ತಚರ ಆಧಾರದ ಮೇಲೆ ಮುಂಬೈ ವಿಮಾನ ನಿಲ್ದಾಣದಿಂದ ಪಂಜಾಬ್ ಪೊಲೀಸರು ಮತ್ತು ಎಜಿಟಿಎಫ್ ಬಂಧಿಸಿದ್ದಾರೆ. ಟಿನುವನ್ನು ಬಂಧಿಸಲು ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

5 ದಿನ ಪೊಲೀಸ್ ಕಸ್ಟಡಿಗೆ ಆರೋಪಿ ಗೆಳತಿ.. ಬಂಧನದ ನಂತರ ಆರೋಪಿ ಜಸ್ಪ್ರೀತ್ ಕೌರ್ ಅಲಿಯಾಸ್ ಜ್ಯೋತಿ ಅವರನ್ನು ಪೊಲೀಸರು ಮಾನಸಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಳಿಕ ನ್ಯಾಯಾಲಯವು 5 ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ. ಅಕ್ಟೋಬರ್ 14 ರಂದು ಜ್ಯೋತಿ ಅವರನ್ನು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಡಿಜಿಪಿ ಹೇಳಿದ್ದಾರೆ.

ಮಾಹಿತಿಯ ಪ್ರಕಾರ, ಬಂಧಿತ ಮಹಿಳೆ ಲೂಧಿಯಾನ ಜಿಲ್ಲೆಯ ಖಂದೂರ್ ಗ್ರಾಮದ ನಿವಾಸಿಯಾಗಿದ್ದಾರೆ. ಮಾನಸ ಪೊಲೀಸರು ಖಂಡೂರ್ ಗ್ರಾಮದ ಅವರ ಮನೆಯ ಮೇಲೂ ಭಾನುವಾರ ಸಂಜೆ ದಾಳಿ ನಡೆಸಿದ್ದರು. ದರೋಡೆಕೋರ ದೀಪಕ್ ಟಿನು ಓಡಿಹೋಗುವಲ್ಲಿ ಆರೋಪಿ ಜ್ಯೋತಿ ಪ್ರಮುಖ ಪಾತ್ರ ವಹಿಸಿದ್ದರು. ಸುಮಾರು ಒಂದು ವಾರದ ಹಿಂದೆ ದರೋಡೆಕೋರ ದೀಪಕ್ ಟಿನು ಮಾನಸ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದು, ಇನ್ನೂ ಪತ್ತೆಯಾಗಿಲ್ಲ. ತನಿಖೆ ಮುಂದುವರಿದಿದೆ.

ಓದಿ: ಜೈಲ್​ನಲ್ಲಿ ಮೊಬೈಲ್​ ಬಳಕೆ ಮಾಡುತ್ತಿರುವ ಸಿಧು ಮೂಸೆವಾಲಾ ಹಂತಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.