ನವದೆಹಲಿ: ಶಹದಾರ ಜಿಲ್ಲೆಯ ಸೀಮಾಪುರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರಿನಲ್ಲಿ ಕುಳಿತಿದ್ದ ವ್ಯಕ್ತಿ ಹಾಗೂ ಇಬ್ಬರು ಯುವತಿಯರಿಗೆ ಮಾಸ್ಕ್ ಹಾಕುವಂತೆ ಪೊಲೀಸರು ಸೂಚಿಸಿದಾಗ ಅವರಲ್ಲಿ ಒಬ್ಬಾಕೆ ಪೊಲೀಸರಿಗೆ ಕಪಾಳಮೋಕ್ಷ ಮಾಡಿದ್ದಾಳೆ. ಅಷ್ಟೇ ಅಲ್ಲ, ವ್ಯಕ್ತಿ ರಿವಾಲ್ವರ್ ತೆಗೆದು ಗುಂಡು ಸಹ ಹಾರಿಸಿದ್ದಾನೆ.
ಘಟನೆ ಸಂಬಂಧ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಸೀಲಂಪುರ ಠಾಣೆಯ ಪೊಲೀಸರು, ವ್ಯಕ್ತಿ ಹಾಗೂ ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಇವರಿಂದ ಪರವಾನಗಿ ಪಡೆದ ಪಿಸ್ತೂಲ್ 20 ಕಾಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ದಿಲ್ಶಾದ್ ಗಾರ್ಡನ್‌ನಲ್ಲಿ ಇಂದು ಬೆಳಗಿನಜಾವ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಈ ಮೂವರು ರಸ್ತೆ ಬದಿ ಕಾರು ನಿಲ್ಲಿಸಿ ಕುಳಿತಿದ್ದರು. ಈ ವೇಳೆ ಗಸ್ತಿನಲ್ಲಿದ್ದ ಪೊಲೀಸರು ವಿಚಾರಣೆ ನಡೆಸಿದಾಗ ಈ ಘಟನೆ ನಡೆದಿದೆ.
ಇದನ್ನೂ ಓದಿ: 'ಡಿಕೆ ದಾಟಲಿಲ್ಲ, ಮೇಕೆಯಾದರೂ ದಾಟಲಿ' : ಬಿಜೆಪಿ ವ್ಯಂಗ್ಯ!
ಇವರು ಪೂರ್ವ ದೆಹಲಿಯ ಪಟ್ಪರ್‌ಗಂಜ್ ಗ್ರಾಮದ ನಿವಾಸಿಗಳಾಗಿದ್ದು, ಪತಿ - ಪತ್ನಿಯಾಗಿದ್ದಾರೆ. ಇನ್ನೊಬ್ಬಾಕೆ ಮಹಿಳೆಯ ಸಹೋದರಿಯಾಗಿದ್ದಾಳೆ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.
ಆರೋಪಿಯು ವೃತ್ತಿಯಲ್ಲಿ ವಕೀಲರಾಗಿದ್ದು, ನಂದ ನಗರಿಯಲ್ಲಿ ಬಾಲಾಪರಾಧಿ ನ್ಯಾಯ ಮಂಡಳಿಯ ಕಲ್ಯಾಣಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.