ETV Bharat / bharat

ಅಂಗಡಿ ಮೇಲೆ ಗುಂಡಿನ ದಾಳಿ: ಬುಲೆಟ್​ ಪೆಟ್ಟು ತಿಂದ ಹುಡುಗಿ ಸ್ಥಿತಿ ಗಂಭೀರ

author img

By

Published : Mar 4, 2021, 11:00 AM IST

ಬೈಕ್​ನಲ್ಲಿ ಬಂದ ದುಷ್ಕರ್ಮಿಗಳು ಅಂಗಡಿಯೊಂದರ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಉತ್ತರಪ್ರದೇಶದ ಮೀರತ್​ನಲ್ಲಿ ನಡೆದಿದೆ.

meerut news  up news  unknown miscreants shot student  crime in meerut  miscreants shot the student in meerut  SSP Ajay Kumar Sahni  ಗುಂಡಿನ ದಾಳಿ  ಹುಡುಗಿ ಮೇಲೆ ಗುಂಡಿನ ದಾಳಿ,  ಮೀರತ್​ನಲ್ಲಿ ಹುಡುಗಿ ಮೇಲೆ ಗುಂಡಿನ ದಾಳಿ  ಉತ್ತರಪ್ರದೇಶ ಸುದ್ದಿ  ಉತ್ತರಪ್ರದೇಶ ಅಪರಾಧ ಸುದ್ದಿ
ಅಂಗಡಿ ಮೇಲೆ ಗುಂಡಿನ ದಾಳಿ: ಬುಲೆಟ್​ ಪೆಟ್ಟು ತಿಂದ ಹುಡುಗಿ ಸ್ಥಿತಿ ಗಂಭೀರ

ಮೀರತ್ (ಉತ್ತರ ಪ್ರದೇಶ): ಬುಧವಾರ ರಾತ್ರಿ ಬೈಕ್​ನಲ್ಲಿ ಬಂದ ಮೂವರು ಶಸ್ತ್ರಸಜ್ಜಿತ ದುಷ್ಕರ್ಮಿಗಳು ಅಂಗಡಿಯೊಂದರ ಮೇಲೆ ಗುಂಡಿನ ಮಳೆ ಸುರಿದಿರುವ ಘಟನೆ ನಗರದಲ್ಲಿ ನಡೆದಿದೆ.

ಶಸ್ತ್ರಸಜ್ಜಿತ ಮೂವರು ದುಷ್ಕರ್ಮಿಗಳು ಬೈಕ್​ನಲ್ಲಿ ಬಂದು ಏಕಾಏಕಿ ಅಂಗಡಿ ಮೇಲೆ ಗುಂಡು ಹಾರಿಸಿದ್ದು, ಗುಂಡಿನ ಶಬ್ದ ಕೇಳಿದ ಸ್ಥಳೀಯರು ಭಯಭೀತರಾದರು. ಗುಂಡು ಹಾರಿಸಿದ ಬಳಿಕ ಸಶಸ್ತ್ರ ದುಷ್ಕರ್ಮಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಘಟನೆಯಲ್ಲಿ ಹುಡುಗಿಗೆ ಬುಲೆಟ್ ಪೆಟ್ಟು ಬಿದ್ದಿದೆ. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಗಾಯಗೊಂಡಿದ್ದ ಹುಡುಗಿಯನ್ನು ಆಸ್ಪತ್ರೆಗೆ ದಾಖಲಿಸಿದರು. ಹುಡುಗಿ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಗುಂಡಿನ ದಾಳಿಯ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ. ಆರೋಪಿಗಳಿಗಾಗಿ ಈಗಾಗಲೇ ಪತ್ತೆ ಕಾರ್ಯ ಕೈಗೊಳ್ಳಲಾಗಿದೆ. ಈ ಘಟನೆ ಕುರಿತು ತನಿಖೆ ಕೈಗೊಳ್ಳಲಾಗಿದೆ ಎಂದು ಎಸ್‌ಎಸ್‌ಪಿ ಅಜಯ್ ಕುಮಾರ್ ಸಾಹ್ನಿ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.