ಸಾಂಬಾ (ಜೆ&ಕೆ) : ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ದೂರದ ಗಡಿ ಗ್ರಾಮದ ಬಾಲಕಿಯೊಬ್ಬಳು ಪ್ರತಿಷ್ಠಿತ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯುವ ವಿಜ್ಞಾನಿ ಕಾರ್ಯಕ್ರಮಕ್ಕೆ ಆಯ್ಕೆಯಾದ ನಂತರ ತನ್ನ ಕುಟುಂಬ ಮತ್ತು ಶಾಲೆಗೆ ಕೀರ್ತಿ ತಂದಿದ್ದಾಳೆ.
ಯುವಕರು ಬಾಹ್ಯಾಕಾಶ ವಿಜ್ಞಾನದಲ್ಲಿ ಆಸಕ್ತಿ ವಹಿಸುವಂತೆ ಮೂಲಭೂತ ಜ್ಞಾನವನ್ನು ನೀಡುವ ಉದ್ದೇಶದಿಂದ 2019 ರಲ್ಲಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಈ ವರ್ಷ ಗಡಿ ಜಿಲ್ಲೆ ಸಾಂಬಾದ ಅಬ್ತಾಲ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 10 ನೇ ತರಗತಿಯ ವಿದ್ಯಾರ್ಥಿನಿ ಭೂಪಿಂದರ್ ಕೌರ್ ಈ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾಳೆ.
ರಾಕೆಟ್ ನಿರ್ಮಾಣದ ಹಿಂದಿನ ತಂತ್ರಗಳನ್ನು ತಿಳಿದುಕೊಂಡಿದ್ದೇನೆ: "ಇಸ್ರೋ ಪ್ರತಿ ವರ್ಷ ಯುವಿಕಾ ಯುವ ವಿಜ್ಞಾನಿ ಕಾರ್ಯಕ್ರಮವನ್ನು ಆಯೋಜಿಸುತ್ತದೆ. ಅದರ ಬಗ್ಗೆ ನನಗೆ ಏನೂ ತಿಳಿದಿರಲಿಲ್ಲ ಮತ್ತು ಹೀಗಾಗಿ ಫಾರ್ಮ್‌ಗಳನ್ನು ಭರ್ತಿ ಮಾಡಲು ನನ್ನ ಶಿಕ್ಷಕರು ನನಗೆ ಸಹಾಯ ಮಾಡಿದರು. ನಾನು ಆಯ್ಕೆಯಾದೆ. ನಂತರ ನಾನು IIRS ಡೆಹ್ರಾಡೂನ್‌ಗೆ ಹೋದೆ. ಅಲ್ಲಿ ನಾನು ಬಹಳಷ್ಟು ವಿಷಯಗಳನ್ನು ಕಲಿತಿದ್ದೇನೆ. ನಾನು ರಾಕೆಟ್ ನಿರ್ಮಾಣದ ಹಿಂದಿನ ತಂತ್ರಗಳನ್ನು ತಿಳಿದುಕೊಂಡಿದ್ದೇನೆ'' ಎಂದು ವಿದ್ಯಾರ್ಥಿನಿ ಭೂಪಿಂದರ್ ಕೌರ್ ಹೇಳಿದಳು.
ಇದನ್ನೂ ಓದಿ: VIDEO: ಚಂದ್ರಯಾನ 3 ಮಿನಿ ರಾಕೆಟ್ ತಯಾರಿಸಿ ಶುಭ ಕೋರಿದ ಧಾರವಾಡ ಕಲಾವಿದ
ಭೂಪಿಂದರ್ ಕೌರ್ ಸಮರ್ಪಣಾ ಮನೋಭಾವ ಮತ್ತು ಕಠಿಣ ಪರಿಶ್ರಮ ಆಕೆಯನ್ನು ಆದರ್ಶಪ್ರಾಯ ವಿದ್ಯಾರ್ಥಿನಿಯನ್ನಾಗಿ ಮಾಡಿದೆ. ಇದರಿಂದಾಗಿ ಅವರು ಇಂದು ಮನೆಮಾತಾಗಿದ್ದಾಳೆ. ಆಕೆಯ ಸಾಧನೆಗೆ ಇಡೀ ಗ್ರಾಮವೇ ಬೆರಗಾಗಿದೆ. "ಆಕೆಯ ಸಾಧನೆಗಳ ಬಗ್ಗೆ ನಾವು ನಿಜವಾಗಿಯೂ ಸಂತೋಷಪಡುತ್ತೇವೆ ಮತ್ತು ಇಡೀ ಗ್ರಾಮವು ಅವಳು ಆಯ್ಕೆಯಾದ ಬಗ್ಗೆ ಹೆಮ್ಮೆ ಪಡುತ್ತಿದೆ. ಅವಳ ಶಿಕ್ಷಕರು ಅವಳಿಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ಅವರು ನಿಜವಾಗಿಯೂ ಸಂತೋಷವಾಗಿದ್ದಾರೆ. ಅವಳು ನಮಗೆಲ್ಲರಿಗೂ ಹೆಮ್ಮೆ ತಂದಿದ್ದಾಳೆ ಮತ್ತು ಅವಳು ಹೀಗೆಯೇ ಮುಂದುವರಿಯುತ್ತಾಳೆ'' ಎಂದು ಭೂಪಿಂದರ್ ಕೌರ್ ಅವರ ತಾಯಿ ಅಮರ್ಜಿತ್ ಕೌರ್ ಮಗಳ ಸಾಧನೆ ಕುರಿತು ಸಂತಸ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ISRO: ಸಿಂಗಾಪುರದ 7 ಉಪಗ್ರಹಗಳನ್ನು ಹೊತ್ತು ನಭಕ್ಕೆ ಜಿಗಿದ ಇಸ್ರೋ ರಾಕೆಟ್- ವಿಡಿಯೋ
"ಅವಳು ಇನ್ನಷ್ಟು ಸಾಧನೆ ಮಾಡಬೇಕೆಂದು ಮತ್ತು ಇಡೀ ದೇಶವನ್ನು ಹೆಮ್ಮೆಪಡುವಂತೆ ಮಾಡಬೇಕೆಂದು ನಾವು ನಿಜವಾಗಿಯೂ ಬಯಸುತ್ತೇವೆ. ಆಕೆ ಹಳ್ಳಿಯ ಇತರ ಮಕ್ಕಳಿಗೆ ಮಾದರಿಯಾಗುತ್ತಾಳೆ" ಎಂದು ಎಸ್‌ಜಿಪಿಸಿಯ ಸ್ಥಳೀಯ ಮುಖಂಡ ಮತ್ತು ಉಪಾಧ್ಯಕ್ಷ ಗುರ್ಮೈಲ್ ಸಿಂಗ್ ಹೇಳಿದ್ದಾರೆ.
ಭೂಪಿಂದರ್ ಅವರ ಗ್ರಾಮವು ಅಂತಾರಾಷ್ಟ್ರೀಯ ಗಡಿಯಿಂದ ಕೇವಲ ಎರಡು ಕಿಲೋಮೀಟರ್ ದೂರದಲ್ಲಿದೆ. ಈ ಕಾರ್ಯಕ್ರಮವು ದೇಶಾದ್ಯಂತ 350 ವಿದ್ಯಾರ್ಥಿಗಳಿಗೆ ಡೆಹ್ರಾಡೂನ್‌ನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ರಿಮೋಟ್ ಸೆನ್ಸಿಂಗ್‌ಗೆ ಭೇಟಿ ನೀಡಲು ಅನುವು ಮಾಡಿಕೊಟ್ಟಿತ್ತು.
ಇದನ್ನೂ ಓದಿ: ಚಂದ್ರಯಾನ 3 ಯಶಸ್ವಿ ಉಡಾವಣೆ ಹಿಂದೆ ಕಾರವಾರದ ಜಗದೀಶಚಂದ್ರ.. ಜಿಲ್ಲೆಗೆ ಹೆಮ್ಮೆ