ETV Bharat / bharat

ಪ್ರೀತಿಸಿದವಳ ಪಡೆಯಲು ಲಿಂಗ ಬದಲಿಸಿಕೊಂಡು ಪುರುಷನಾಗಲು ಹೊರಟ ಯುವತಿ! - girl change her gender for love

ನಾಲ್ಕು ತಿಂಗಳ ಹಿಂದೆ ಎಸ್‌ಆರ್‌ಎನ್‌ ಆಸ್ಪತ್ರೆಯಲ್ಲಿ ಯುವತಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ದೇಹದ ಮೇಲ್ಭಾಗವನ್ನು ಬದಲಾಯಿಸಿಕೊಂಡಿದ್ದಾಳೆ. ಇತ್ತೀಚೆಗೆ ಮಹಿಳಾ ಮತ್ತು ಪ್ರಸೂತಿ ವಿಭಾಗದಲ್ಲಿ ನಡೆದ ಶಸ್ತ್ರಚಿಕಿತ್ಸೆಯಲ್ಲಿ ಆಕೆಯ ಗರ್ಭಕೋಶವನ್ನೂ ತೆಗೆಯಲಾಗಿದೆಯಂತೆ.

ಯುವತಿಯನ್ನು ಮದುವೆಯಾಗಲು ಲಿಂಗ ಬದಲಾವಣೆ ಮಾಡಿಸಿಕೊಂಡ ಪ್ರಯಾಗ್‌ರಾಜ್ ಯುವತಿ

author img

By

Published : Jun 27, 2022, 6:28 PM IST

ಪ್ರಯಾಗ್‌ರಾಜ್(ಉತ್ತರಪ್ರದೇಶ): ಪ್ರೀತಿ ಅಂದ್ರೆನೇ ಹಾಗೆ, ಏನೂ ಬೇಕಾದರೂ ಮಾಡಿಸಿಬಿಡುತ್ತದೆ. ಆದರೆ ಈ ಪರಿಯನ್ನು ಯಾರೂ ಊಹಿಸಲಸಾಧ್ಯ. ಇಲ್ಲೊಬ್ಬಳು ಯುವತಿ ಪ್ರೀತಿಸಿದವಳನ್ನು ಮದುವೆಯಾಗಲು ತನ್ನ ಲಿಂಗವನ್ನೇ ಬದಲಾಯಿಸಿಕೊಂಡಿದ್ದಾಳೆ.!

ಪ್ರಕರಣದ ವಿವರ: ನಾಲ್ಕು ತಿಂಗಳ ಹಿಂದೆ ಎಸ್‌ಆರ್‌ಎನ್‌ ಆಸ್ಪತ್ರೆಯಲ್ಲಿ ಯುವತಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ದೇಹದ ಮೇಲ್ಭಾಗವನ್ನು ಬದಲಾಯಿಸಿಕೊಂಡಿದ್ದಾಳೆ. ಇತ್ತೀಚೆಗೆ ಮಹಿಳಾ ಮತ್ತು ಪ್ರಸೂತಿ ವಿಭಾಗದಲ್ಲಿ ನಡೆದ ಶಸ್ತ್ರಚಿಕಿತ್ಸೆಯಲ್ಲಿ ಆಕೆಯ ಗರ್ಭಕೋಶವನ್ನೂ ತೆಗೆಯಲಾಗಿದೆಯಂತೆ. ಕೆಲವು ತಿಂಗಳ ನಂತರ ಆಕೆಗೆ ಅಂತಿಮ ಶಸ್ತ್ರಚಿಕಿತ್ಸೆ ಮಾಡಲಾಗುವುದು, ಇದರಲ್ಲಿ ಆಕೆಯ ದೇಹದ ಲೈಂಗಿಕ ಭಾಗವೂ ಬದಲಾಗಲಿದೆ ಎಂದು ವೈದ್ಯರು ಹೇಳಿದ್ದಾರೆ. ಒಂದೂವರೆ ವರ್ಷಗಳ ನಂತರ ಆಕೆ ಸಂಪೂರ್ಣವಾಗಿ ಪುರುಷಳಾಗುತ್ತಾಳೆ ಎಂದು ಅವರು ವಿವರಿಸಿದ್ದಾರೆ. ಈ ರೀತಿಯ ಲಿಂಗ ಬದಲಾವಣೆ ರಾಜ್ಯದಲ್ಲಿ ಇದು ಎರಡನೇ ಪ್ರಕರಣ. ಇದಕ್ಕೂ ಮುನ್ನ ಮೀರತ್‌ನಲ್ಲಿ ಬಾಲಕಿಯೊಬ್ಬಳು ಲಿಂಗ ಬದಲಾಯಿಸಿಕೊಂಡಿದ್ದಳು.

ಫಾಫಮೌ ನಿವಾಸಿಯಾಗಿರುವ 20 ವರ್ಷದ ಬಿಎ ವಿದ್ಯಾರ್ಥಿನಿ ಆಕೆಯ ಸ್ನೇಹಿತೆಯನ್ನು ಪ್ರೀತಿಸುತ್ತಿದ್ದಳು. ಈ ಬಗ್ಗೆ ಪೋಷಕರಿಗೆ ತಿಳಿಸಿ ಮದುವೆಯಾಗಿ ಜೀವನ ಕಳೆಯುವ ಆಸೆ ವ್ಯಕ್ತಪಡಿಸಿದ್ದಾಳೆ. ಆದರೆ, ಪೋಷಕರು ಯುವತಿಯ ಮನವೊಲಿಸಲು ಕಷ್ಟಪಟ್ಟಿದ್ದಾರೆ. ಕೊನೆಗೆ ವಿದ್ಯಾರ್ಥಿನಿ ಸ್ವರೂಪರಾಣಿ ನೆಹರು ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಡಾ.ಮೋಹಿತ್ ಜೈನ್ ಅವರನ್ನು ಭೇಟಿ ಮಾಡಿ ತನ್ನ ಲಿಂಗವನ್ನು ಬದಲಾಯಿಸುವ ಬಯಕೆ ವ್ಯಕ್ತಪಡಿಸಿದ್ದಾಳೆ.

ವೈದ್ಯರು ಮೊದಲು ವಿದ್ಯಾರ್ಥಿನಿಯನ್ನು ಮನೋವೈದ್ಯರ ಬಳಿಗೆ ಕಳುಹಿಸಿ ಕೌನ್ಸಿಲಿಂಗ್ ಮಾಡಿಸಿದ್ದಾರೆ. ಅಲ್ಲಿ ಯುವತಿ ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಂತರಾಗಿದ್ದಾರೆ ಎಂದು ಕಂಡುಕೊಂಡಿದ್ದಾರೆ. ಹಾಗೆಯೇ ವಯಸ್ಕಳಾದ ಕಾರಣ ವಿದ್ಯಾರ್ಥಿನಿಯಿಂದ ಅಫಿಡವಿಟ್ ಪಡೆದು ಶಸ್ತ್ರಚಿಕಿತ್ಸೆಗೆ ಸಿದ್ಧತೆ ನಡೆಸಿದ್ದಾರೆ.

ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ ಮೋಹಿತ್ ಜೈನ್, ಹುಡುಗಿ ಪುರುಷನಾಗುವ ಪ್ರಕ್ರಿಯೆಯಲ್ಲಿ ದೈಹಿಕ ಬದಲಾವಣೆಗಳು ಮಾತ್ರವಲ್ಲ, ಹಾವಭಾವವೂ ಬದಲಾಗಲಿದೆ. ಗಡ್ಡ, ಮೀಸೆಯೂ ಬೆಳೆಯುತ್ತದೆ. ಇದಕ್ಕಾಗಿ ಅವರಿಗೆ ಟೆಸ್ಟೋಸ್ಟೆರಾನ್ ಹಾರ್ಮೋನ್ ಚಿಕಿತ್ಸೆ ನೀಡಲಾಗುವುದು. ಹೀಗೆ ಅವನೊಳಗಿನ ಪುರುಷತ್ವ ಜಾಗೃತಗೊಂಡು ಅವಳಲ್ಲಿ ಸಂಪೂರ್ಣ ಬದಲಾವಣೆ ಬರಲು ಶುರುವಾಗುತ್ತದೆ. ಪ್ರಸ್ತುತ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮರದಿಂದ ತೊರೆಯಂತೆ ಹರಿದು ಬರುತ್ತಿದೆಯಂತೆ ನೀರು : ಪವಾಡವೆಂದು ಭಾವಿಸಿ ನೂರಾರು ಜನ ಬಂದರು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.