ಅಮೃತಸರ: ನಗರದ ಟ್ರಿಲಿಯಂ ಮಾಲ್‌ನ ಮೇಲ್ಛಾವಣಿ ಏರಿ 23 ವರ್ಷದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಸುಮಾರು 2 ಗಂಟೆಗಳ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆಕೆಯನ್ನು ಛಾವಣಿಯಿಂದ ಕೆಳಗಿಳಿಸಿದ್ದಾರೆ. ಯುವತಿ ಆತ್ಮಹತ್ಯೆಗೆ ಯತ್ನಿಸಿದ ಕಾರಣವನ್ನು ಪತ್ತೆ ಹಚ್ಚಲಾಗುತ್ತಿದೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಎಸಿಪಿ ವೀರೇಂದ್ರ ಖೋಸಾ ಪ್ರಕಾರ, "ಶನಿವಾರ ತಡರಾತ್ರಿ ಘಟನೆ ನಡೆದಿದೆ. 10 ಗಂಟೆಯ ಸುಮಾರಿಗೆ ಟ್ರಿಲಿಯಂ ಮಾಲ್‌ನ ಮೇಲ್ಛಾವಣಿಯ ಮೇಲೆ ಯುವತಿಯೊಬ್ಬಳು ಹತ್ತಿದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಕೂಡಲೇ ನಾವು ಸ್ಥಳಕ್ಕೆ ಭೇಟಿ ನೀಡಿ ಆತ್ಮಹತ್ಯೆ ಮಾಡಿಕೊಳ್ಳಬೇಡ ಎಂದು ಆಕೆಗೆ ಬುದ್ಧಿಮಾತು ಹೇಳಿದೆವು. ಪೊಲೀಸರು ಬುದ್ಧಿವಂತಿಕೆಯಿಂದ ಹುಷಾರಾಗಿ ಮಾಳಿಗೆ ಮೇಲೆ ಹೋಗಿ ಆಕೆಯನ್ನು ಹಿಡಿದು ಕೆಳಗಿಳಿಸಿದರು. ಈಗಾಗಲೇ ಈ ಕುರಿತಾದ ಮಾಹಿತಿಯನ್ನು ಅಮೃತಸರ ಪೊಲೀಸ್ ಕಮಿಷನರ್ ಮತ್ತು ಡಿಸಿಗೆ ನೀಡಲಾಗಿದೆ" ಎಂದರು.
"ಪ್ರಾಥಮಿಕ ತನಿಖೆಯಲ್ಲಿ ಯುವತಿಯು ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದು, ಆತನನ್ನು ಮದುವೆಯಾಗಲು ಮನೆಯವರು ಒಪ್ಪದ ಕಾರಣ ಆತ್ಮಹತ್ಯೆ ಮಾಡಿಕೊಳ್ಳಲು ಮಾಲ್‌ನ ಕಟ್ಟಡ ಏರಿ ಸಾಯುವ ನಿರ್ಧಾರ ತೆಗೆದುಕೊಂಡಿದ್ದಾಳೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಈ ಕುರಿತು ಹೆಚ್ಚಿನ ವಿಚಾರಣೆ ನಡೆಸಿ ಮಾಹಿತಿ ನೀಡಲಾಗುವುದು. ಯುವತಿಯ ಕುರಿತಾದ ವೈಯಕ್ತಿಯ ಮಾಹಿತಿ ರಹಸ್ಯವಾಗಿಡಲಾಗಿದೆ" ಎಂದು ಖೋಸಾ ಹೇಳಿದರು.
ಇದನ್ನೂ ಓದಿ: ದೇವಸ್ಥಾನದ ಗೋಪುರದ ಮೇಲೇರಿ ಯುವಕನ ಹೈಡ್ರಾಮ: ಸ್ಥಳಕ್ಕೆ ಬಂದ ಡಿಸಿ - ಎಸ್ಪಿಗೆ ಶಾಕ್
"ಯುವತಿಯನ್ನು ಸದ್ಯಕ್ಕೆ ನಾರಿ ನಿಕೇತನಕ್ಕೆ ಕಳುಹಿಸಲಾಗಿದೆ. ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಯುವತಿಗೆ 23 ವರ್ಷ ವಯಸ್ಸಾಗಿರುವುದರಿಂದ ಆಕೆ ಮದುವೆಯಾಗಲು ಹುಡುಗನನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕಿದೆ. ಯಾರೊಂದಿಗೆ ಆಕೆಯನ್ನು ಕಳುಹಿಸಬೇಕೆಂದು ನ್ಯಾಯಾಲಯ ನಿರ್ಧರಿಸುತ್ತದೆ" ಎಂದರು.
ಇದನ್ನೂ ಓದಿ: ಎಣ್ಣೆ ಇಲ್ಲಾಂದ್ರೆ ಸಾಯ್ತೀನಿ ಅಂದಿದ್ದವ ಯುಟರ್ನ್... ಸರ್ಕಾರಕ್ಕೆ ಕ್ಷಮೆ ಕೇಳಿದ ತುರುವೇಕೆರೆ ವ್ಯಕ್ತಿ
ದೇವಸ್ಥಾನದ ಗೋಪುರದ ಮೇಲೇರಿದ್ದ ಯುವಕ: ಕಳೆದ ವರ್ಷದ ಅಂದ್ರೆ ನವೆಂಬರ್ 1,2022 ರಂದು ಜಾರ್ಖಂಡ್ನ ಲೋಹರ್ಡಗಾ ಜಿಲ್ಲೆಯ ಹನುಮಾನ್ ದೇವಸ್ಥಾನದ ಗೋಪುರದ ಮೇಲೇರಿ ಹೈಡ್ರಾಮಾ ಸೃಷ್ಟಿಸಿದ್ದ. ಗ್ರಾಮದ ಎಲ್ಲರಿಗೆ ಉತ್ತಮವಾದ ಮನೆ ಮತ್ತು ರಸ್ತೆ ಒದಗಿಸಬೇಕು ಹಾಗೂ ಗ್ರಾಮಕ್ಕೆ ಎರಡು ಹೆಲಿಕಾಪ್ಟರ್ಗಳು ಬೇಕು ಎಂದು ಹಲವು ಬೇಡಿಕೆಗಳನ್ನು ಮುಂದಿಟ್ಟು ಎಲ್ಲರಲ್ಲೂ ದಿಗ್ಭ್ರಾಂತಿ ಮೂಡಿಸಿದ್ದ. ನಂತರ ಸ್ಥಳಕ್ಕಾಮಿಸಿದ್ದ ಪೊಲೀಸರು ಹರಸಾಹಸ ಪಟ್ಟು ಯುವಕನನ್ನು ಕೆಳಗೆ ಇಳಿಸಿದ್ದರು.