ETV Bharat / bharat

ಕೋವಿಡ್‌ ಜೊತೆ ಕಪ್ಪು, ಬಿಳಿ, ಹಳದಿ ಈ ಮೂರೂ ಫಂಗಸ್​ಗೆ ತುತ್ತಾಗಿದ್ದ ವ್ಯಕ್ತಿ ಸಾವು

ಕೋವಿಡ್​ನೊಂದಿಗೆ ಕಪ್ಪು, ಹಳದಿ ಮತ್ತು ಬಿಳಿ ಫಂಗಸ್​ಗೆ ತುತ್ತಾಗಿದ್ದ ವ್ಯಕ್ತಿ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಮೃತಪಟ್ಟಿದ್ದಾರೆ

Ghaziabad man with yellow, black and white fungus dies
ಗಾಝಿಯಾಬಾದ್ ಕೋವಿಡ್ ಸಾವು
author img

By

Published : May 30, 2021, 12:17 PM IST

ಗಾಝಿಯಾಬಾದ್ (ಉತ್ತರ ಪ್ರದೇಶ): ಕಪ್ಪು, ಬಿಳಿ ಮತ್ತು ಹಳದಿ ಫಂಗಸ್‌ ರೋಗದಿಂದ ಬಳಲುತ್ತಿದ್ದ 59 ವರ್ಷದ ಕೋವಿಡ್ ಸೋಂಕಿತ ವ್ಯಕ್ತಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕುನ್ವರ್ ಸಿಂಗ್ ಎಂಬ ವ್ಯಕ್ತಿ ಶುಕ್ರವಾರ ರಾತ್ರಿ 7:30 ರ ಸುಮಾರಿಗೆ ಟಾಕ್ಸಿಮಿಯಾ (ಟಾಕ್ಸಿನ್​​ನಿಂದ ರಕ್ತ ವಿಷಪೂರಿತವಾಗುವುದು) ಕಾರಣ ನಿಧನರಾಗಿದ್ದಾರೆ ಎಂದು ಗಾಜಿಯಾಬಾದ್​ನ ರಾಜ್ ನಗರದ ಹರ್ಷ್ ಆಸ್ಪತ್ರೆಯ ಇಎನ್​ಟಿ (ಕಿವಿ, ಮೂಗು, ಗಂಟಲು) ತಜ್ಞ ಡಾ.ಬಿ.ಪಿ ತ್ಯಾಗಿ ಮಾಹಿತಿ ನೀಡಿದರು.

ವಕೀಲರಾಗಿದ್ದ ನಗರದ ಸಂಜಯ್ ನಗರದ ಕುನ್ವರ್ ಸಿಂಗ್, ಕೋವಿಡ್ ಸೋಂಕಿನಿಂದ ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಮೇ 24 ರಂದು ಎಂಡೋಸ್ಕೊಪಿ ಮಾಡುವ ವೇಳೆ ಅವರಲ್ಲಿ ಕಪ್ಪು, ಬಿಳಿ ಮತ್ತು ಹಳದಿ ಫಂಗಸ್​ ಕೂಡ ಪತ್ತೆಯಾಗಿತ್ತು ಎಂದು ಡಾ.ತ್ಯಾಗಿ ಹೇಳಿದ್ದಾರೆ.

ಇದನ್ನೂ ಓದಿ: ಅಲಿಗಢ ಮದ್ಯ ದುರಂತ: ಮೃತರ ಸಂಖ್ಯೆ 55ಕ್ಕೆ ಏರಿಕೆ

ಈ ನಡುವೆ ಮುರಾದ್​ನಗರದ ಇನ್ನೋರ್ವ 59 ವರ್ಷದ ವ್ಯಕ್ತಿ ರಾಜೇಶ್ ಕುಮಾರ್​ ಎಂಬವರು ಕೂಡ ಚಿಕಿತ್ಸೆ ಪಡೆಯುತ್ತಿದ್ದು, ಅವರಲ್ಲೂ ಹಳದಿ ಫಂಗಸ್​ ಪತ್ತೆಯಾಗಿದೆ. ಇವರಿಗೂ ಟಾಕ್ಸಿಮಿಯಾ ಆಗಿದೆ, ಆದರೆ, ಮೃತ ಕುನ್ವರ್ ಸಿಂಗ್​ಗಿಂತ ಪ್ರಮಾಣ ಕಡಿಮೆಯಿದೆ. ಆ್ಯಂಟಿ ಫಂಗಲ್ ಚಿಕಿತ್ಸೆಯನ್ನು ಅವರಿಗೆ ನೀಡಲಾಗ್ತಿದೆ ಎಂದು ಡಾ. ತ್ಯಾಗಿ ಮಾಹಿತಿ ನೀಡಿದ್ದಾರೆ.

ದೆಹಲಿಯ ಸಮೀಪದ ಪಶ್ಚಿಮ ಉತ್ತರ ಪ್ರದೇಶದ ನಗರ ಗಾಜಿಯಾಬಾದ್​ನಲ್ಲಿ ಇದುವರೆಗೆ 434 ಕೋವಿಡ್ ಸಂಬಂಧಿತ ಸಾವುಗಳು ಸಂಭವಿಸಿವೆ. ಪ್ರಸ್ತುತ 1,779 ಸಕ್ರಿಯ ಕೊರೊನಾ ಪ್ರಕರಣಗಳು ಇದೆ ಎಂದು ಅಧಿಕೃತ ಅಂಕಿ ಅಂಶಗಳು ತಿಳಿಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.