ಗಾಜಿಯಾಬಾದ್(ನವದೆಹಲಿ): ಊಟದ ವಿಚಾರದಲ್ಲಿ ಪತಿ-ಪತ್ನಿಯ ನಡುವೆ ಏರ್ಪಟ್ಟ ಜಗಳದಲ್ಲಿ ಗುಂಡಿನ ಸದ್ದು ಮೊಳಗಿದೆ. ಸಾಹಿಲ್ ಎಂಬಾತ ತನ್ನ ಪತ್ನಿ ತಯಾರಿಸಿದ ಊಟದ ವಿಚಾರವಾಗಿ ಜಗಳ ಗೆತೆದಿದ್ದು, ಬಳಿಕ ಆ ಜಗಳ ತಾರಕಕ್ಕೇರಿದೆ. ಈ ವೇಳೆ ಪತ್ನಿ ಸಂಬಂಧಿಕರು ಮನೆ ಬಳಿ ಧಾವಿಸಿ ಸಾಹಿಲ್ನ ತಡೆಯುವ ಯತ್ನ ಮಾಡಿದ್ದಾರೆ.
ಆದರೆ, ಪತ್ನಿ ಕುಟುಂಬಸ್ಥರ ಜೊತೆ ಬಂದಿದ್ದ ಕೆಲವರು ತನ್ನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪತಿ ಸಾಹಿಲ್ ಆರೋಪಿಸಿದ್ದಾನೆ. ಕತ್ತಲೆಯಲ್ಲಿ ಗುಂಡಿನ ಸದ್ದು ಕೇಳಿ ಬಂದಿದ್ದು, ಅದೃಷ್ಟವಶಾತ್ ಯಾರೊಬ್ಬರೂ ಗಾಯಗೊಂಡಿಲ್ಲ. ಗುಂಡಿನ ಸದ್ದು ಕೇಳುತ್ತಿದ್ದಂತೆ ಕುಟುಂಬಸ್ಥರು ಹಾಗೂ ಸ್ಥಳದಲ್ಲಿ ನೆರೆದಿದ್ದ ಮಂದಿ ಆತಂಕದಿಂದ ಮನೆಯೊಳಗೆ ಓಡಿದ್ದಾರೆ.
ಈ ಘಟನೆ ಸಂಬಂಧ ವಿಡಿಯೋ ಹರಿದಾಡುತ್ತಿದ್ದು, ವಿಡಿಯೋದಲ್ಲಿ ಗುಂಡಿನ ಸುದ್ದು ಕೇಳಿ ಬರುತ್ತದೆ. ಈ ಸಂಬಂಧ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಸ್ಥಳದಲ್ಲಿ ಪಿಸ್ತೂಲ್ನ ಗುಂಡುಗಳು ಪತ್ತೆಯಾಗಿವೆ.