ಗಾಜಿಯಾಬಾದ್: ಸಾಹಿಬಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿಚಿತ್ರ ಸುಲಿಗೆ ಪ್ರಕರಣವೊಂದು ಬೆಳಕಿಗೆ ಬಂದಿದೆ. 11 ವರ್ಷದ ಬಾಲಕಿಯೇ ತನ್ನ ಕುಟುಂಬದ ಸದಸ್ಯರಿಗೆ 1 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಅಚ್ಚರಿ ಘಟನೆ ನಡೆದಿದೆ. ಈ ಸಂಬಂಧ ಸಾಹಿಬಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಜುಲೈ 26 ರಂದು ವ್ಯಕ್ತಿಯೊಬ್ಬರು ತಮ್ಮ ವಾಟ್ಸಪ್ ನಲ್ಲಿ ನಿರಂತರವಾಗಿ ಸಂದೇಶಗಳನ್ನು ಕಳುಹಿಸಿ 1 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದಾಳೆ. ಮಗನನ್ನು ಅಪಹರಿಸುವ ಬೆದರಿಕೆ ಹಾಕುತ್ತಿದ್ದಾರೆ ಎಂದು ಲಿಖಿತ ದೂರು ನೀಡಿದ್ದರು. ಪೊಲೀಸರು ಪ್ರಕರಣ ಕೈಗೆತ್ತಿಕೊಂಡು ತನಿಖೆ ನಡೆಸಿದ ಸೈಬರ್ ಸೆಲ್‌ಗೆ ಶಾಕ್ ಕಾದಿತ್ತು. ದೂರು ನೀಡಿದ್ದ ವ್ಯಕ್ತಿಯ 11 ವರ್ಷದ ಪುತ್ರಿಯೇ 1 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿರುವುದು ಕಂಡುಬಂದಿದೆ.
ಆಕೆ ತನ್ನ ಪೋಷಕರ ವಾಟ್ಸಾಪ್ ಅನ್ನು ವೆಬ್‌ಗೆ ಸೇರಿಸಿ ಆ ಮೂಲಕ ತನ್ನ ಹೆತ್ತವರಿಗೆ ಬೆದರಿಕೆಯ ವೆಬ್ ಸಂದೇಶಗಳನ್ನು ಕಳುಹಿಸಲು ಆರಂಭಿಸಿದ್ದಳು ಎಂಬುದು ಗೊತ್ತಾಗಿದೆ. ಮಾತ್ರವಲ್ಲ, ಯಾವುದೇ ಸಂಬಂಧಿ ಅಥವಾ ನೆರೆ ಹೊರೆಯವರು ಅವರಿಗೆ ಸಹಾಯ ಮಾಡಲು ಮುಂದೆ ಬರುತ್ತಿದ್ದರೆ, ಆಕೆ ಮಾತ್ರ ಬೆದರಿಕೆ ಸಂದೇಶಗಳನ್ನು ಕಳುಹಿಸುತ್ತಿದ್ದಳು ಎಂಬುದು ತಿಳಿದುಬಂದಿದೆ.
ಈ ಇಡೀ ವಿಷಯ ಬೆಳಕಿಗೆ ಬಂದಾಗ, ಕೋವಿಡ್ ಅವಧಿಯಲ್ಲಿ ತಾನು ಮನೆಯೊಳಗೆ ಬಂಧಿಯಾಗಿದ್ದಾಗಿ ಭಾವಿಸಿದ್ದೇನೆ ಎಂದು ವಿಚಾರಣೆ ನಂತರ ಬಾಲಕಿ ಹೇಳಿದಳು ಎಂದು ಪೊಲೀಸ್ ಅಧಿಕಾರಿ ಅಭಯ್ ಕುಮಾರ್ ಮಿಶ್ರಾ ಹೇಳಿದ್ದಾರೆ.
ಈ ಸಮಯದಲ್ಲಿ, ಆಕೆ ಮೊಬೈಲ್ ಬಳಸುವುದನ್ನು ಪೋಷಕರು ವಿರೋಧಿಸುತ್ತಿದ್ದರು. ಹಾಗಾಗಿ ಕೋಪದಲ್ಲಿ ಹೀಗೆ ಮಾಡಲು ಆರಂಭಿಸಿದೆ. ಹುಡುಗಿ ಅಪ್ರಾಪ್ತ ವಯಸ್ಕಳಾಗಿದ್ದರಿಂದ, ಮನವೊಲಿಸಿದ ಬಳಿಕ ಆಕೆಯನ್ನು ಮನೆಗೆ ಕಳುಹಿಸಲಾಗಿದೆ. ಬಾಲಕಿಗೆ ಕೌನ್ಸೆಲಿಂಗ್ ಮಾಡಲು ಆಕೆಯ ಕುಟುಂಬ ಸದಸ್ಯರನ್ನು ಕೂಡ ಕೇಳಲಾಗಿದೆ ಎನ್ನಲಾಗಿದೆ.