ಮಂಡಿ: ಐಐಟಿ-ಮಂಡಿಯ ವಿಜ್ಞಾನಿಗಳು ಮನೆಗಳಲ್ಲಿನ ಸಿಎಫ್‌ಎಲ್ ಮತ್ತು ಎಲ್‌ಇಡಿ ಬಲ್ಬ್‌ಗಳ ಬೆಳಕಿನಿಂದ ವಿದ್ಯುತ್ ಉತ್ಪಾದಿಸಲು ಸಹಾಯ ಮಾಡುವ ಹೊಸ ಸಾಧನವೊಂದನ್ನು ಕಂಡುಹಿಡಿದಿದ್ದಾರೆ.
ಇಂಟರ್ನೆಟ್ ಆಫ್ ಥಿಂಗ್ಸ್ (IoT) ಸಾಧನಗಳು ಪ್ರಸ್ತುತ ಬ್ಯಾಟರಿಗಳಿಂದ ಚಾಲಿತವಾಗಿವೆ. ಹೀಗಾಗಿ ಐಐಟಿ ಸಂಶೋಧಕರು ಎಂಡ್ - ಆಫ್ - ಲೈಫ್ (ಹಾಳಾಗುವ) ಬ್ಯಾಟರಿಗಳಿಂದ ಉಂಟಾಗುವ ಪರಿಸರ ಹಾನಿಯ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಿದ್ದಾರೆ. ಅದಕ್ಕಾಗಿ ಈಗ ಸಂಶೋಧಕರು thin-film efficient photovoltaic cells ವಿನ್ಯಾಸಗೊಳಿಸಿದ್ದಾರೆ.
ಸಂವೇದಕಗಳು, ವೈ-ಫೈ ರೂಟರ್‌ಗಳು ಮತ್ತು ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ ರೀಡರ್‌ಗಳಂತಹ IoT ಸಾಧನಗಳು ಇವುಗಳೊಂದಿಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ ಎಂದು ಸಂಶೋಧಕರು ಹೇಳಿದ್ದಾರೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸೋಲಾರ್ ಎನರ್ಜಿ, ಯೂನಿವರ್ಸಿಟಿ ಆಫ್ ನಾರ್ತ್ ಟೆಕ್ಸಾಸ್ ಮತ್ತು ಗೌತಮ್ ಬುದ್ಧ ವಿಶ್ವವಿದ್ಯಾಲಯದ ತಜ್ಞರು ಸಹ ಈ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಇದನ್ನೂ ಓದಿ: Make in India ಯೋಜನೆ: ಎಸಿ, ಎಲ್‌ಇಡಿ ಲೈಟ್ ತಯಾರಿಕೆಗೆ ಮುಂದಾದ ಬಹುರಾಷ್ಟ್ರೀಯ ಕಂಪನಿಗಳು