ಶ್ರೀನಗರ (ಜಮ್ಮು-ಕಾಶ್ಮೀರ) : ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿ ಅಂತ್ಯಕ್ರಿಯೆ ಬಲವಂತವಾಗಿ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಕಾಶ್ಮೀರ ಪೊಲೀಸರು ಗಿಲಾನಿ ಅವರ ಅಂತ್ಯಕ್ರಿಯೆ ವೇಳೆ ಪ್ರಾರ್ಥನೆ ಸೇರಿದಂತೆ ಪ್ರಕ್ರಿಯೆಯ ಕೆಲವು ವಿಡಿಯೋಗಳನ್ನು ಬಿಡುಗಡೆ ಮಾಡಿದ್ದಾರೆ. ಜೊತೆಗೆ ಗಿಲಾನಿ ಅವರ ಅಂತ್ಯಕ್ರಿಯೆಯನ್ನು ಸೂಕ್ತ ಗೌರವಗಳೊಂದಿಗೆ ಹಾಗೂ ಅವರ ಸಂಬಂಧಿಕರ ಸಮ್ಮುಖದಲ್ಲಿ ನಡೆಸಲಾಯಿತು ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
-
Visuals from the graveyard during burial of SAS Geelani. pic.twitter.com/ndvcHx5xtG
— Kashmir Zone Police (@KashmirPolice) September 6, 2021 " class="align-text-top noRightClick twitterSection" data="
">Visuals from the graveyard during burial of SAS Geelani. pic.twitter.com/ndvcHx5xtG
— Kashmir Zone Police (@KashmirPolice) September 6, 2021Visuals from the graveyard during burial of SAS Geelani. pic.twitter.com/ndvcHx5xtG
— Kashmir Zone Police (@KashmirPolice) September 6, 2021
ಅಗಲಿದ ತಂದೆಯ ಅಂತಿಮ ವಿಧಿವಿಧಾನಗಳನ್ನು ಮಾಡಲು ಅವಕಾಶ ನೀಡಿಲ್ಲ ಎಂದು ಗಿಲಾನಿ ಅವರ ಪುತ್ರರು ಮಾಡಿದ್ದ ಆರೋಪವನ್ನು ಪೊಲೀಸರು ನಿರಾಕರಿಸಿದ್ದಾರೆ. ಸದ್ಯ ಪ್ರತ್ಯೇಕತಾವಾದಿ ನಾಯಕನ ಅಂತಿಮ ವಿಧಿ-ವಿಧಾನಗಳಿಗೆ ಸಂಬಂಧಿಸಿದ ವಿಡಿಯೋಗಳ ಸರಣಿಯನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಅಲ್ಲಿ ಅವರ ಅಂತ್ಯಕ್ರಿಯೆಯನ್ನು ನಡೆಸುವಾಗ ಅವರ ದೇಹವನ್ನು ಗುಸುಲ್‌ಗೆ ನೀಡಲಾಯಿತು. ಕಾಶ್ಮೀರ ಪೊಲೀಸ್ ವಲಯವು ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಅದಕ್ಕೆ ಸಂಬಂಧಿಸಿದ ಸರಣಿ ಟ್ವೀಟ್‌ಗಳನ್ನು ಮಾಡಿದೆ.
-
Visuals from the graveyard during burial of SAS Geelani. pic.twitter.com/ndvcHx5xtG
— Kashmir Zone Police (@KashmirPolice) September 6, 2021 " class="align-text-top noRightClick twitterSection" data="
">Visuals from the graveyard during burial of SAS Geelani. pic.twitter.com/ndvcHx5xtG
— Kashmir Zone Police (@KashmirPolice) September 6, 2021Visuals from the graveyard during burial of SAS Geelani. pic.twitter.com/ndvcHx5xtG
— Kashmir Zone Police (@KashmirPolice) September 6, 2021
ಸೈಯದ್ ಅಲಿ ಶಾ ಗಿಲಾನಿ ಅವರ ನಿಧನದ ಬಳಿಕ ಕಾಶ್ಮೀರದ ಐಜಿಪಿ ವಿಜಯ್ ಕುಮಾರ್, ಎಸ್‌ಪಿ ಹಾಗೂ ಎಎಸ್‌ಪಿ ಅವರು ರಾತ್ರಿ 11 ಗಂಟೆಗೆ ಗಿಲಾನಿಯವರ ಪುತ್ರರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಪ್ರತ್ಯೇಕತಾವಾದಿ ನಾಯಕನ ಸಾವಿಗೆ ಸಂತಾಪ ಸೂಚಿಸಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರು ಅಂತ್ಯಕ್ರಿಯೆ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಬಾರದು ಎಂದು ವಿನಂತಿಸಿದ್ದರು. ಇದಕ್ಕೆ ಇಬ್ಬರೂ ಪುತ್ರರು ಒಪ್ಪಿದರು ಎಂದು ಕಾಶೀರ ಪೊಲೀಸರು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿ ಆರೋಪ: ದಿವಂಗತ ಗಿಲಾನಿ ಕುಟುಂಬದ ವಿರುದ್ಧ FIR