ETV Bharat / bharat

ಚೇತರಿಕೆಯತ್ತ ಜಿಡಿಪಿ ದರ: 2ನೇ ತ್ರೈಮಾಸಿಕದಲ್ಲಿ ಸುಧಾರಣೆ ನಿರೀಕ್ಷೆ ಎಂದ ತಜ್ಞರು

ಭಾರತದ ಜಿಡಿಪಿ ಬೆಳವಣಿಗೆಯ ದರವು 2ನೇ ತ್ರೈಮಾಸಿಕದಲ್ಲಿ ಚೇತರಿಕೆ ಕಾಣುವ ನಿರೀಕ್ಷೆ ಇದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಈಗಾಗಲೇ ಖುಣಾತ್ಮಕ ಬೆಳವಣಿಗೆ ದರ ಹೊಂದಿರುವ ಜಿಡಿಪಿ ಬೆಳವಣಿಗೆಯು ಚೇತರಿಸಿಕೊಳ್ಳುವ ಸಾಧ್ಯತೆ ಇದ್ದರೂ ಖುಣಾತ್ಮಕ ದರದಲ್ಲಿಯೇ ಮುಂದುವರಿಯಲಿದೆ ಎನ್ನಲಾಗಿದೆ.

GDP data release
ಚೇತರಿಕೆಯತ್ತಾ ಜಿಡಿಪಿ ದರ
author img

By

Published : Nov 26, 2020, 2:15 PM IST

ಹೈದರಾಬಾದ್​: ಭಾರತದ ಜಿಡಿಪಿ ಬೆಳವಣಿಗೆಯ ದರ ಮೊದಲ ತ್ರೈಮಾಸಿಕದಲ್ಲಿ -23.9 ರಷ್ಟು ಇಳಿಕೆ ಕಂಡಿದ್ದ ಬಳಿಕ ಎರಡನೇ ತ್ರೈಮಾಸಿಕದಲ್ಲಿ ಪುಟಿದೇಳುವ ನಿರೀಕ್ಷೆ ಇದೆ ಎನ್ನಲಾಗಿದೆ. ಅಲ್ಲದೇ ಈ ನಡುವೆ ಬೆಳವಣಿಗೆಯ ದರ ಯಥಾಸ್ಥಿತಿಯಲ್ಲಿದ್ದರು ಖುಣಾತ್ಮಕ ದರ ಕಡಿಮೆಯಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಸರ್ಕಾರ ಈ ಸೆಪ್ಟೆಂಬರ್​​ನಲ್ಲಿ ಅಂತ್ಯಗೊಂಡಿರುವ 2ನೇ ತ್ರೈಮಾಸಿಕ ಜಿಡಿಪಿ ಬೆಳವಣಿಗೆ ದರದ ದತ್ತಾಂಶವನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದ್ದು, ಈ ತ್ರೈಮಾಸಿಕದಲ್ಲಿ ಆರ್ಥಿಕತೆಯೂ 8ರಿಂದ 11 ಪ್ರತಿಶತದಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಹೆಚ್​ಡಿಎಫ್​​ಸಿ ಬ್ಯಾಂಕ್​​​ನ ಆರ್ಥಿಕ ತಜ್ಞೆ ಸಾಕ್ಷಿ ಗುಪ್ತಾ ಈ ಕುರಿತು ಮಾತನಾಡಿ, 2021 ಹಣಕಾಸು ವರ್ಷದ 2ನೇ ತ್ರೈಮಾಸಿಕದ ಜಿಡಿಪಿ ಬೆಳವಣಿಗೆ ದರದ ದತ್ತಾಂಶ ಸದ್ಯದಲ್ಲೇ ಬಿಡುಗಡೆಯಾಗುವ ನಿರೀಕ್ಷೆ ಇದ್ದು, ಇಳಿಕೆಯ ಪ್ರಮಾಣದಲ್ಲಿ ಚೇತರಿಕೆ ಕಾಣಲಿದೆ ಎಂದಿದ್ದಾರೆ. ಅಲ್ಲದೇ ಡಿಸೆಂಬರ್​ನಲ್ಲಿ ಬೆಳವಣಿಯ ದರವು ಸಕಾರಾತ್ಮಕವಾಗಿರಲಿದೆ ಎಂಬ ನಿರೀಕ್ಷೆ ಇದೆ. 3ನೇ ತ್ರೈಮಾಸಿಕದಲ್ಲಿ ಇನ್ನಷ್ಟು ಚೇತರಿಸಿಕೊಳ್ಳಲಿದ್ದು, ಬೆಳವಣಿಗೆಯ ದರ ಶೇ.1ರಷ್ಟು ಏರಿಕೆ ಕಾಣಲಿದೆ. ಮತ್ತು 4ನೇ ತ್ರೈಮಾಸಿಕದಲ್ಲಿ ಶೇ2.5ರಷ್ಟು ಬೆಳವಣಿಗೆ ಕಾಣುವ ನಿರೀಕ್ಷೆ ಇದೆ ಎಂದಿದ್ದಾರೆ.

ಇದಲ್ಲದೇ 2ನೇ ತ್ರೈಮಾಸಿಕದಲ್ಲಿ ಕೃಷಿ ವಲಯ ಸಹ ಚೇತರಿಸಿಕೊಳ್ಳಲಿದ್ದು, ಉತ್ತಮ ಬೆಳವಣಿಗೆ ದರ ಕಾಣುವ ನಿರೀಕ್ಷೆ ಇದೆ ಎಂದಿದ್ದಾರೆ.

ಈ ಕುರಿತು ಆ್ಯಕ್ಷಿಸ್ ಬ್ಯಾಂಕ್​ನ ಆರ್ಥಿಕ ತಜ್ಞ ಪೃಥ್ವಿರಾಜ್ ಶ್ರೀನಿವಾಸ್ ಮಾತನಾಡಿ, ನಾವು 2ನೇ ತ್ರೈಮಾಸಿಕದ ಜಿಡಿಪಿ ಬೆಳವಣಿಗೆಯ ದರವೂ -8.4ಕ್ಕೆ ಇಳಿಯಬಹುದು ಎಂದು ಅಂದಾಜಿಸಿದ್ದೇವೆ ಎಂದಿದ್ದಾರೆ.

ಇದಕ್ಕೂ ಮೊದಲು 2020ರ ಜುಲೈ- ಸೆಪ್ಟೆಂಬರ್ ಅವಧಿಯಲ್ಲಿ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಶೇಕಡಾ 8.6 ರಷ್ಟು ಕುಸಿದಿರುವ ಸಾಧ್ಯತೆ ಇದೆ. ಕೋವಿಡ್‌-19 ನಿಂದಾಗಿ ಎರಡು ತ್ರೈಮಾಸಿಕಗಳಲ್ಲಿ ಇಷ್ಟೊಂದು ನಕಾರಾತ್ಮಕ ಬೆಳವಣಿಗೆ ಕಂಡಿರುವುದು ದೇಶದ ಇತಿಹಾಸದಲ್ಲೇ ಇದೇ ಮೊದಲು ಎಂದು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ - ಆರ್‌ಬಿಐನ ಮೂಲಗಳು ತಿಳಿಸಿದ್ದವು.

ಇದನ್ನೂ ಓದಿ: ಜಿಡಿಪಿ ಕುಸಿದು ಬ್ಯಾಂಕ್​ಗಳು ಸಂಕಷ್ಟದಲ್ಲಿವೆ, ಇದು ಅಭಿವೃದ್ಧಿಯೋ ನಾಶವೋ?: ನಮೋ ಸರ್ಕಾರಕ್ಕೆ ರಾಗಾ ಪ್ರಶ್ನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.