ಅಲಿಗಢ(ಉತ್ತರ ಪ್ರದೇಶ): ಮಾಂಸದ ಕಾರ್ಖಾನೆಯಲ್ಲಿ ಗ್ಯಾಸ್ ಸೋರಿಕೆ ಉಂಟಾಗಿ 50 ಜನರ ಸ್ಥಿತಿ ಗಂಭೀರವಾಗಿದೆ. ಅಸ್ವಸ್ಥಗೊಂಡವರನ್ನು ಇಲ್ಲಿನ ಜೈನ್ ಮೆಡಿಕಲ್ ಕಾಲೇಜಿಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಅಲಿಘರ್‌ನ ರೋರಾವರ್ ಪೊಲೀಸ್ ಠಾಣೆ ವ್ಯಾಪ್ತಿಯ ಅಲ್ ದುವಾ ಮಾಂಸ ಕಾರ್ಖಾನೆಯಲ್ಲಿ ಅನಿಲ ಸೋರಿಕೆಯಿಂದ ಅವಘಡ ಸಂಭವಿಸಿದೆ.
ಕಾರ್ಖಾನೆಯಲ್ಲಿ ಪ್ಯಾಕೇಜಿಂಗ್ ಕೆಲಸ ಮಾಡುತ್ತಿರುವ ಸುಮಾರು 50 ಮಂದಿ ಅಸ್ವಸ್ಥರಾಗಿದ್ದಾರೆ. 'ಕಾರ್ಖಾನೆಯಲ್ಲಿ ಅಮೋನಿಯಾ ಅನಿಲ ಸೋರಿಕೆಯಾಗಿದೆ. ಇದರಿಂದ ಕೆಲ ಕಾರ್ಮಿಕರು ಉಸಿರಾಟದ ತೊಂದರೆ ಅನುಭವಿಸಿದ್ದಾರೆ. ಅಲ್ಲದೆ, ಕೆಲವರು ಮೂರ್ಛೆ ಹೋಗಿದ್ದರು. ಚಿಕಿತ್ಸೆಗಾಗಿ ಜೈನ್ ಮೆಡಿಕಲ್ ಕಾಲೇಜಿಗೆ ಚಿಕಿತ್ಸೆಗಾಗಿ ಕರೆತರಲಾಗಿದೆ. ಸದ್ಯಕ್ಕೆ ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ಅಲಿಘರ್ ಡಿಎಂ ಇಂದರ್ ವಿಕ್ರಮ್ ಸಿಂಗ್ ಹೇಳಿದ್ದಾರೆ.
ಪ್ಯಾಕೇಜಿಂಗ್ ಕೆಲಸ ಮಾಡುತ್ತಿದ್ದವರಲ್ಲಿ ಮಹಿಳೆಯರೂ ಇದ್ದರು. ಘಟನೆ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ನಡೆಸಿದ್ದಾರೆ.
ಅಲಿಗಢದಲ್ಲಿ 10ಕ್ಕೂ ಹೆಚ್ಚು ಮಾಂಸದ ಕಾರ್ಖಾನೆಗಳಿವೆ. ಇಲ್ಲಿಂದ ಮಾಂಸವನ್ನು ವಿದೇಶಕ್ಕೆ ರಫ್ತು ಮಾಡಲಾಗುತ್ತದೆ. ಹೆಚ್ಚಿನ ಸಂಖ್ಯೆಯ ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಾರೆ. ಈ ಹಿಂದೆಯೂ ಕೂಡ ಹಲವು ಬಾರಿ ಗ್ಯಾಸ್ ಸೋರಿಕೆ ಘಟನೆಗಳು ನಡೆದಿವೆ. ಕೆಲವು ವರ್ಷಗಳ ಹಿಂದೆ, ಅಲ್ಲಾನ ಮಾಂಸದ ಕಾರ್ಖಾನೆಯು ಭಾರಿ ಬೆಂಕಿಯಿಂದ ಹಾನಿಗೊಳಗಾಗಿತ್ತು. ವಿಶೇಷವೆಂದರೆ ಈ ಮಾಂಸದ ಕಾರ್ಖಾನೆಗಳ ಸುತ್ತ ವಸತಿ ಪ್ರದೇಶವೂ ಇದೆ.
ಇದನ್ನೂ ಓದಿ: ಗೋದಾಮುವಿನಲ್ಲಿ ಅಗ್ನಿ ಅವಘಡ .. ಗ್ಯಾಸ್ ಸಿಲಿಂಡರ್ಗಳು ಸ್ಫೋಟ, ಬೈಕ್ ಬಿಡಿಭಾಗಗಳು ಭಸ್ಮ