ಕೋಲ್ಕತ್ತಾ (ಪಶ್ಚಿಮ ಬಂಗಾಳ): ಮೊಬೈಲ್ ಗೇಮಿಂಗ್ ಆ್ಯಪ್ ಹಗರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಪಶ್ಚಿಮ ಬಂಗಾಳದ ಉದ್ಯಮಿ ಅಮೀರ್ ಖಾನ್ರನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಶುಕ್ರವಾರ ತಡರಾತ್ರಿ ಉದ್ಯಮಿಯನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ.
ಮೊಬೈಲ್ ಗೇಮಿಂಗ್ ಅಪ್ಲಿಕೇಶನ್ ಹಗರಣ ಸಂಬಂಧ ಸೆಪ್ಟೆಂಬರ್ 10ರಂದು ಉದ್ಯಮಿ ಅಮೀರ್ ಖಾನ್ ಅವರ ಕೋಲ್ಕತ್ತಾ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ಮಾಡಿದ್ದರು. ಈ ದಾಳಿ ವೇಳೆ 18 ಕೋಟಿ ರೂ. ನಗದು ಮನೆಯಲ್ಲಿ ಪತ್ತೆಯಾಗಿತ್ತು. ಇಡಿ ದಾಳಿ ನಡೆಸಿದ ನಂತರ ಅಮೀರ್ ಖಾನ್ ಪರಾರಿಯಾಗಿದ್ದರು.
ಇದೀಗ ಗಾಜಿಯಾಬಾದ್‌ನಲ್ಲಿ ಅಮೀರ್ ಖಾನ್ ತಲೆ ಮರೆಸಿಕೊಂಡಿದ್ದಾರೆ ಎಂಬ ಮಾಹಿತಿ ಮೇರೆಗೆ ಕೋಲ್ಕತ್ತಾ ಗುಪ್ತಚರ ಇಲಾಖೆಯ ತಂಡ ಗಾಜಿಯಾಬಾದ್‌ಗೆ ತೆರಳಿ ಬಂಧಿಸಿದೆ. ಅಮೀರ್ ಖಾನ್ ವಿರುದ್ಧ ಕೋಲ್ಕತ್ತಾದ ಪಾರ್ಕ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಗೇಮಿಂಗ್ ಆ್ಯಪ್ ಹಗರಣ: ಕೋಲ್ಕತ್ತಾ ಉದ್ಯಮಿ ಮನೆಯಲ್ಲಿ ಇಡಿಗೆ ಸಿಕ್ತು 17 ಕೋಟಿ ರೂಪಾಯಿ!