ETV Bharat / bharat

ಸಿಧು ಮೂಸೆ ವಾಲಾ ಕೊಲೆ ಕೇಸ್​: ಪೊಲೀಸ್​ ಕಸ್ಟಡಿಯಿಂದ ಆರೋಪಿ ಪರಾರಿ - ವಿಚಾರಣಾಧೀನ ಆರೋಪಿ ಎಸ್ಕೇಪ್​

ಪಂಜಾಬ್​ ಗಾಯಕ ಸಿಧು ಮೂಸೆ ವಾಲಾ ಪ್ರಕರಣದ ಆರೋಪಿಯೊಬ್ಬ ಪೊಲೀಸ್​ ಕಸ್ಟಡಿಯಿಂದ ಇಂದು ತಪ್ಪಿಸಿಕೊಂಡ ಬಗ್ಗೆ ವರದಿಯಾಗಿದೆ.

escaped-from-police-custody
ಪೊಲೀಸ್​ ಕಸ್ಟಡಿಯಿಂದ ಆರೋಪಿ ಪರಾರಿ
author img

By

Published : Oct 2, 2022, 12:54 PM IST

ನವದೆಹಲಿ: ಪಂಜಾಬ್​ ಗಾಯಕ ಸಿಧು ಮೂಸೆ ವಾಲಾ ಕೊಲೆ ಕೇಸ್​ ಪ್ರಕರಣದ ಆರೋಪಿಯೋರ್ವ ಪೊಲೀಸ್​ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದಾನೆ. ಗ್ಯಾಂಗ್​ಸ್ಟರ್​ ಬಿಷ್ಣೋಯ್​ ಆಪ್ತ ದೀಪಕ್​ ಟಿನು ಪರಾರಿಯಾದ ಆರೋಪಿ.

ಸಿಧು ಮೂಸೆ ವಾಲಾ ಹತ್ಯೆ ಪ್ರಕರಣದಲ್ಲಿ ದೀಪಕ್​ ಟಿನು ಬಂಧಿತನಾಗಿ, ದೆಹಲಿಯ ತಿಹಾರ್​ ಜೈಲು ಪಾಲಾಗಿದ್ದ. ವಿಚರಣೆಗಾಗಿ ಆತನನ್ನು ಜುಲೈ 4 ರಂದು ಪಂಜಾಬ್​ಗೆ ಕರೆತಂದು ಟ್ರಾನ್ಸಿಟ್​​ ರಿಮಾಂಡ್​ಗೆ ಹಾಕಲಾಗಿತ್ತು. ಇಂದು ಆತ ಪೊಲೀಸ್​ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದಾನೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಅಧಿಕೃತವಾಗಿ ಮಾಹಿತಿ ನೀಡಿಲ್ಲ.

ಜನಪ್ರಿಯ ಗಾಯಕ ಮತ್ತು ಕಾಂಗ್ರೆಸ್​ ಪಕ್ಷದ ರಾಜಕಾರಣಿ ಸಿಧು ಮೂಸೆ ವಾಲಾ ಅವರನ್ನು ಮೇ ತಿಂಗಳಲ್ಲಿ ಅವರ ಮನೆಯ ಬಳಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಪ್ರಕರಣದಲ್ಲಿ ಇದುವರೆಗೂ 30 ಕ್ಕೂ ಹೆಚ್ಚು ಆರೋಪಿಗಳನ್ನು ಗುರುತಿಸಲಾಗಿದೆ. ಗ್ಯಾಂಗ್​ಸ್ಟರ್​ ಲಾರೆನ್​ ಬಿಷ್ಣೋಯ್‌ ಬಳಗದ ಆಪ್ತರನ್ನು ಸೇರಿದಂತೆ 24 ಮಂದಿಯನ್ನು ಬಂಧಿಸಲಾಗಿದೆ.

ಪಂಜಾಬ್​ ಗಾಯಕನ ಹತ್ಯೆ ಬಳಿಕ ಬಾಲಿವುಡ್​ ನಟ ಸಲ್ಮಾನ್​ ಖಾನ್​ರನ್ನು ಹತ್ಯೆ ಮಾಡಲೂ ಈ ಗ್ಯಾಂಗ್​ ಸಂಚು ರೂಪಿಸಿತ್ತು ಎಂದು ಪೊಲೀಸರು ಇತ್ತೀಚೆಗಷ್ಟೇ ಬಹಿರಂಗಪಡಿಸಿದ್ದರು.

ಓದಿ: ಜಮ್ಮು- ಕಾಶ್ಮೀರದಲ್ಲಿ ಎನ್​ಕೌಂಟರ್​.. ಸೇನೆಯ ಗುಂಡಿಗೆ ಓರ್ವ ಉಗ್ರ ಖತಂ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.