ETV Bharat / bharat

ಏಮ್ಸ್ ಆಸ್ಪತ್ರೆಯಿಂದ ಭೂಗತ ಪಾತಕಿ ಛೋಟಾ ರಾಜನ್ ಡಿಸ್ಚಾರ್ಜ್.. ಮರಳಿ ಜೈಲಿಗೆ

ಗ್ಯಾಂಗ್​ಸ್ಟರ್​ ಛೋಟಾ ರಾಜನ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಏಮ್ಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.

ಛೋಟಾ ರಾಜನ್ ಡಿಸ್ಚಾರ್ಜ್
ಛೋಟಾ ರಾಜನ್ ಡಿಸ್ಚಾರ್ಜ್
author img

By

Published : Jul 31, 2021, 2:06 PM IST

ನವದೆಹಲಿ: ಅನಾರೋಗ್ಯ ಹಿನ್ನೆಲೆಯಲ್ಲಿ ಏಮ್ಸ್​ಗೆ ದಾಖಲಾಗಿದ್ದ ಭೂಗತ ಪಾತಕಿ​ ಛೋಟಾ ರಾಜನ್‌ನನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದ್ದು, ತಿಹಾರ್​ ಜೈಲಿಗೆ ಕರೆ ತರಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಜುಲೈ 27 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈತನಿಗೆ ಈ ಮೊದಲು ಕೋವಿಡ್​ ಪಾಸಿಟಿವ್​ ಆಗಿದ್ದು ಅಡ್ಮಿಟ್ ಆಗಿದ್ದ.

ಛೋಟಾ ರಾಜನ್‌ನನ್ನು ಇಂಡೋನೇಷ್ಯಾದ ಬಾಲಿಯಲ್ಲಿ 2015ರಲ್ಲಿ ಬಂಧಿಸಲಾಗಿತ್ತು. ಅದಾದ ಬಳಿಕ ಭಾರತಕ್ಕೆ ಕರೆತಂದು ತಿಹಾರ್ ಜೈಲಿನಲ್ಲಿ ಇಡಲಾಗಿತ್ತು. 2011ರಲ್ಲಿ ನಡೆದಿದ್ದ ಪತ್ರಕರ್ತ ಜೆ.ಡೇ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2018ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಇದನ್ನೂ ಓದಿ: ಕುಖ್ಯಾತ ರೌಡಿ ಸಂದೀಪ್​ ಜೊತೆ ಲೇಡಿ ಡಾನ್​ ಅರೆಸ್ಟ್​..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.