ಚಂಡೀಗಢ: ಪಂಜಾಬಿ ಗಾಯಕ, ಸಿಧು ಮೂಸೆವಾಲಾ ಹಂತಕನ ಬಗ್ಗೆ ಮಾಹಿತಿ ನೀಡಿದವರಿಗೆ 5 ಲಕ್ಷ ರೂಪಾಯಿ ಬಹುಮಾನವನ್ನು ನೀಡುವುದಾಗಿ, ಗ್ಯಾಂಗ್‌ಸ್ಟರ್ ಭೂಪ್ಪಿ ರಾಣಾ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಮೂಸೆವಾಲಾರನ್ನು ಹಗಲಿನಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು. ಇದು ಪಂಜಾಬಿ ಜನರ ಆಕ್ರೋಶಕ್ಕೆ ಕಾರಣವಾಗಿತ್ತು.
ಕೊಲೆಗಾರನ ಬಗ್ಗೆ ಮಾಹಿತಿ ನೀಡಿದವರಿಗೆ ಉತ್ತಮ ಹಣ ನೀಡುವ ಜೊತೆಗೆ, ಅವರಿಗೆ ಭದ್ರತೆ ನೀಡಲಾಗುವುದು ಎಂದು ರಾಣಾ ಹೇಳಿದ್ದಾರೆ. ಗುರ್ಲಾಲ್ ಬ್ರಾರ್ ಮತ್ತು ವಿಕ್ಕಿ ಮಿದುಖೇರಾ ಹತ್ಯೆಗೆ ಮೂಸೆವಾಲಾ ಬಾಂಬಿಹಾ ಗುಂಪಿಗೆ ಸಹಾಯ ಮಾಡಿದ್ದರು ಎಂದು ಲಾರೆನ್ಸ್ ಮತ್ತು ಗೋಲ್ಡಿ ಆರೋಪಿಸಿದ್ದರು. ನಂತರ ಇದು ಸುಳ್ಳು ಸುದ್ದಿ ಎಂದು ತಿಳಿದು ಬಂದಿತ್ತು. ಪಂಜಾಬ್ ಮತ್ತು ಹರಿಯಾಣದಲ್ಲಿ ಕೊಲೆಯಂತಹ ಅಪರಾಧಗಳಲ್ಲಿ ರಾಣಾ 25ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.
ಇದನ್ನೂ ಓದಿ: ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಹತ್ಯೆ ಪ್ರಕರಣ: ಮೊದಲ ಆರೋಪಿ ಬಂಧಿಸಿದ ಪೊಲೀಸರು