ಗುರುದಾಸ್‌ಪುರ: ಪಂಜಾಬ್ನಲ್ಲಿ ದರೋಡೆಕೋರರ ವಿರುದ್ಧ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಅಚ್ಚಲ್ ಸಾಹಿಬ್ ಪಟ್ಟಣದ ಕೋಟ್ಲಾ ಬೋಜಾ ಗ್ರಾಮದಲ್ಲಿ ಅಡಗಿ ಕುಳಿತಿದ್ದ ಗ್ಯಾಂಗ್‌ಸ್ಟರ್ ಬಬ್ಲುನನ್ನು ಬಂಧಿಸಲು ಸುಮಾರು ನಾಲ್ಕುಗಂಟೆಗಳ ಕಾರ್ಯಾಚರಣೆ ನಡೆಸಿದರು. ಪೊಲೀಸರು ಮತ್ತು ಗ್ಯಾಂಸ್ಟರ್ನಡುವೆ ಗುಂಡಿನ ಚಕಮಕಿ ನಡೆಯಿತು. ಗುಂಡಿನಿಂದ ಗಾಯಗೊಂಡ ಬಬ್ಲುನನ್ನು ಪೊಲೀಸರು ಸದ್ಯ ಬಂಧಿಸದ್ದಾರೆ.
ಬೋಜಾ ಗ್ರಾಮದ ಅರಣ್ಯ ಪ್ರದೇಶದ ಜಾಗದಲ್ಲಿ ಅಡಗಿ ಕುಳಿತಿದ್ದ ಬಬ್ಲುನನ್ನು ಪತ್ತೆ ಹಚ್ಚಲು ಪೊಲೀಸರು ಆಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿದರು. ಬಬ್ಲುನ ಜಾಗವನ್ನು ಕಂಡು ಹಿಡಿಯುವ ಸಲುವಾಗಿ ಡ್ರೋನ್ ಬಳಕೆಯನ್ನು ಪೊಲೀಸರು ಮಾಡಿದ್ದಾರೆ. ಜಾಗ ಪತ್ತೆ ಹಚ್ಚಿದ ನಂತರ ಗ್ಯಾಂಗ್‌ಸ್ಟರ್ ಮತ್ತು ಪೊಲೀಸರ ನಡುವೆ ನಡೆದ ಸುಮಾರು ಗುಂಡಿನ ಚಕಮಕಿಯಲ್ಲಿ 100ಕ್ಕೂ ಹೆಚ್ಚು ಬುಲೆಟ್ಗಳು ಬಳಸಲಾಗಿತ್ತು.
ಪೊಲೀಸರ ದಾಳಿ ವೇಳೆ, ಬಬ್ಲು ತನ್ನ ಮಡದಿ ಮತ್ತು ಮಕ್ಕಳೊಂದಿಗೆ ಇದ್ದ ಎಂದು ಹೇಳಲಾಗಿದೆ. ಗಾಯಗೊಂಡ ಬಬ್ಲುನನ್ನು ಪೊಲೀಸರು ಆಸ್ಪತ್ರೆಗೆ ಸೇರಿಸಿದ್ದಾರೆ. ಹೆಂಡತಿ ಮತ್ತು ಮಗುವನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ : ಗೆಳತಿ, ಆಕೆಯ ತಾಯಿಯೊಂದಿಗೂ ಸಂಬಂಧ: ನಶೆಯಲ್ಲಿ ಮನೆಗೆ ತೆರಳಿ ಶವವಾದ ಯುವಕ