ETV Bharat / bharat

ಯಮುನಾ ಎಕ್ಸ್​ಪ್ರೆಸ್​ ವೇನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ - taxi drivers

ಆಗ್ರಾದ ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಕಾರು ಚಾಲಕರಿಂದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ - ಸಿಸಿಟಿವಿ ಮುಖಾಂತರ ಆರೋಪಿಗಳನ್ನು ಬಂಧಿಸಿದ ಪೊಲೀಸರು.

gangraped-in-agra-woman-gangraped-on-agra-noida-expressway
ಉತ್ತರ ಪ್ರದೇಶ: ಯಮುನಾ ಎಕ್ಸ್​ಪ್ರೆಸ್​ ವೇನಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ
author img

By

Published : Dec 28, 2022, 5:27 PM IST

ಆಗ್ರಾ(ಉತ್ತರ ಪ್ರದೇಶ): ನೋಯ್ಡಾದಿಂದ ಫಿರೋಜಾಬಾದ್‌ಗೆ ಹೋಗುತ್ತಿದ್ದ ಯುವತಿಯನ್ನು ಕಾರು ಚಾಲಕರು ಮಂಗಳವಾರ ತಡರಾತ್ರಿ ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಸಂತ್ರಸ್ತೆ ದೂರಿನ ಮೇರೆಗೆ ಆಗ್ರಾದ ಎತ್ಮಾದಪುರ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಫಿರೋಜಾಬಾದ್‌ನಲ್ಲಿ ತನ್ನ ಚಿಕ್ಕಮ್ಮನ ಮನೆಯಲ್ಲಿ ವಾಸಿಸುತ್ತಿದ್ದ 23 ವರ್ಷದ ಯುವತಿ ನೊಯ್ಡಾದಲ್ಲಿ ಜವಳಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ತಿಂಗಳ ಹಿಂದೆಯಷ್ಟೇ ಕೆಲಸ ಬಿಟ್ಟಿದ್ದು ಬಾಕಿ ಇರುವ ಸಂಬಳವನ್ನು ಪಡೆಯಲು ನೊಯ್ಡಾಕ್ಕೆ ತೆರಳಿದ್ದಳು ಎನ್ನಲಾಗಿದೆ. ಅದೇ ದಿನ ರಾತ್ರಿ ನೋಯ್ಡಾದ ಸೆಕ್ಟರ್ 37ನಿಂದ ಫಿರೋಜಾಬಾದ್ ತಲುಪಲು ಟ್ಯಾಕ್ಸಿ ಏರಿದ್ದಳು.

ಟ್ಯಾಕ್ಸಿ ಚಾಲಕ ಕಾರಿನಲ್ಲಿದ್ದ ಇತರ ಪ್ರಯಾಣಿಕರನ್ನು ಕುಬೇರ್​ಪುರ ಇಂಟರ್​ಚೇಂಜ್​ನಲ್ಲಿ ಬಳಿ ಡ್ರಾಪ್​ ಮಾಡಿದ್ದಾನೆ. ನಂತರ ಸಂತ್ರಸ್ತೆಯನ್ನು ಕಾರಿನಲ್ಲಿ ಯಮುನಾ ಎಕ್ಸಪ್ರೆಸ್​ ವೇ ಬಳಿ ಇರುವ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ತನ್ನ ಇಬ್ಬರು ಸ್ನೇಹಿತರೊಂದಿಗೆ ಸೇರಿ ಸಾಮೂಹಿಕವಾಗಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ.

ಬುಧವಾರ ಮುಂಜಾನೆ ಯುವತಿಯು ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದ್ದು, ಸಂತ್ರಸ್ತೆಯ ದೂರಿನ ಮೇಲೆ ಪ್ರಕರಣದ ವಿಚಾರಣೆ ಆರಂಭಿಸಿದ ಪೊಲೀಸರು ಟೋಲ್​ಗೇಟ್​ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಅತ್ಯಾಚಾರ ಎಸೆಗಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಆರು ಆರೋಪಿಗಳ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.