ETV Bharat / bharat

ಪ್ಲಾನ್​ ಪ್ರಕಾರವೇ ವಿದ್ಯಾರ್ಥಿನಿ ಕಿಡ್ನ್ಯಾಪ್​.. ನಾಲ್ವರು ಆಟೋ ಚಾಲಕರಿಂದ ನಡೀತು ಸಾಮೂಹಿಕ ಅತ್ಯಾಚಾರ! - ಹೈದರಾಬಾದ್​ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣ ಸುದ್ದಿ

ಬಿಫಾರ್ಮಿಸಿ ವಿದ್ಯಾರ್ಥಿನಿಯನ್ನು ಪ್ಲಾನ್​ ಪ್ರಕಾರವೇ ಕಿಡ್ನ್ಯಾಪ್​ ಮಾಡಿ ಆಕೆಯ ಮೇಲೆ ನಾಲ್ವರು ಅತ್ಯಾಚಾರ ಎಸಗಿರುವ ಘಟನೆ ತೆಲಂಗಾಣದ ಮೆಡ್ಚಲ್​ ಜಿಲ್ಲೆಯಲ್ಲಿ ನಡೆದಿದೆ..

Gangrape on b pharmacy student, Gangrape on b pharmacy student in Hyderabad, Hyderabad student rape, Hyderabad student rape case, Hyderabad student rape case update, Hyderabad student rape news, ಬಿ ಫಾರ್ಮಸಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ, ಹೈದರಾಬಾದ್​ನಲ್ಲಿ ಬಿ ಫಾರ್ಮಸಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ, ಹೈದರಾಬಾದ್​ ವಿದ್ಯಾರ್ಥಿನಿ ಅತ್ಯಾಚಾರ, ಹೈದರಾಬಾದ್​ ವಿದ್ಯಾರ್ಥಿನಿ ಅತ್ಯಾಚಾರ ಸುದ್ದಿ, ಹೈದರಾಬಾದ್​ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣ, ಹೈದರಾಬಾದ್​ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣ ಸುದ್ದಿ,
ಪ್ಲಾನ್​ ಪ್ರಕಾರವೇ ವಿದ್ಯಾರ್ಥಿನಿ ಕಿಡ್ನ್ಯಾಪ್
author img

By

Published : Feb 12, 2021, 7:48 AM IST

Updated : Feb 12, 2021, 8:29 AM IST

ಮೆಡ್ಚಲ್​​ : ನಿನ್ನೆ ನಡೆದ ಘಟನೆ ಕಿಡ್ನ್ಯಾಪ್​ ಮತ್ತು ಹತ್ಯೆ ಯತ್ನ ಎನ್ನಲಾಗಿತ್ತು. ಆದ್ರೆ, ಪ್ಲಾನ್​ ಪ್ರಕಾರವೇ ಯುವತಿಯನ್ನು ಕಿಡ್ನ್ಯಾಪ್​ ಮಾಡಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವುದು ಬೆಳಕಿಗೆ ಬಂದಿದೆ.

ನಿತ್ಯ ಆಟೋದಲ್ಲಿ ಪ್ರಯಾಣ..

ಸಂತ್ರಸ್ತೆ ಕಾಲೇಜ್​ ಮುಗಿದ ಬಳಿಕ ಬಸ್​ನಿಂದ ರಾಂಪಲ್ಲಿಯಲ್ಲಿ ಇಳಿದು ತನ್ನ ಮನೆಗೆ ನಿತ್ಯ ಆಟೋದಲ್ಲಿ ಪ್ರಯಾಣಿಸುತ್ತಿದ್ದಳು. ಇದನ್ನು ಗಮನಿಸಿದ ಕೆಲ ಆಟೋ ಡ್ರೈವರ್​ಗಳು ಆಕೆಯ ಮೇಲೆ ಒಂದು ಕಣ್ಣಿಟ್ಟಿದ್ದರು.

ಕಿಡ್ನ್ಯಾಪ್​ ಮಿಸ್​..

ನಿತ್ಯ ಆಟೋದಲ್ಲಿ ಪ್ರಯಾಣಿಸುತ್ತಿರುವುದರಿಂದ ಯುವತಿ ಜೊತೆ ಆಟೋ ಡ್ರೈವರ್​ವೊಬ್ಬ ಪರಿಚಯ ಬೆಳಸಿಕೊಂಡಿದ್ದಾನೆ. ವಾರ ಪೂರ್ತಿ ಆಕೆಯನ್ನು ಅಪಹರಿಸಲು ಪ್ರಯತ್ನಿಸಿದ್ದಾನೆ. ಆದ್ರೆ, ಆಟೋದಲ್ಲಿ ಪ್ರಯಾಣಿಕರು ಇರುವುದರಿಂದ ಅವರಿಗೆ ಸಾಧ್ಯವಾಗಿರಲಿಲ್ಲ.

ಮೂವರು ಆರೋಪಿಗಳು ಎಂಟ್ರಿ..

ಕಾಲೇಜ್​ ಮುಗಿಸಿಕೊಂಡು ಬುಧವಾರ ಸಂಜೆ ತನ್ನ ಸೀನಿಯರ್​ ಮತ್ತು ಮತ್ತಿಬ್ಬರು ಪ್ರಯಾಣಿಕರ ಜೊತೆ 7 ಸೀಟರ್​ ಆಟೋದಲ್ಲಿ ಯುವತಿ ಮನೆಗೆ ತೆರಳುತ್ತಿದ್ದಳು. ಆಕೆಯ ಸೀನಿಯರ್​ ಮತ್ತು ಮತ್ತಿಬ್ಬರು ಪ್ರಯಾಣಿಕರು ತಮ್ಮ-ತಮ್ಮ ಸ್ಟಾಪ್​ನಲ್ಲಿ ಇಳಿದುಕೊಂಡಿದ್ದಾರೆ. ಆರ್​ಎಲ್​ಎನ್​ ನಗರದ ಬಳಿ ಮೂವರು ಆರೋಪಿಗಳು ಆಟೋದಲ್ಲಿ ಹತ್ತಿದ್ದಾರೆ.

ಕಿಡ್ನ್ಯಾಪ್​ ಮಾಡಿದ ಆಟೋ ಡ್ರೈವರ್​..

ಆಟೋವನ್ನು ವೇಗವಾಗಿ ಹೋಗುತ್ತಿರೋದನ್ನು ಗಮನಿಸಿದ ಯುವತಿ ತನ್ನ ತಾಯಿಗೆ ಸಂದೇಶ ರವಾನಿಸಿದ್ದಾಳೆ. ಇದನ್ನು ಗಮನಿಸಿದ ಆರೋಪಿಗಳು ಆಕೆಯ ಬಳಿಯಿದ್ದ ಫೋನ್​ ಕಸಿದುಕೊಂಡು ಸ್ವಿಚ್​ ಆಫ್​ ಮಾಡಿ ಕಿಡ್ನ್ಯಾಪ್​ ಮಾಡಿದ್ದಾರೆ.

ಸಾಮೂಹಿಕ ಅತ್ಯಾಚಾರ..

ಕಿಡ್ನ್ಯಾಪ್​ ಮಾಡಿದ ಬಳಿಕ ಯುವತಿಯನ್ನು ಹೆದ್ದಾರಿ ಪಕ್ಕದಲ್ಲಿರುವ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ನಾಲ್ವರು ಆಟೋ ಡ್ರೈವರ್​ಗಳು ಸೇರಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ಪೊಲೀಸರಿಗೆ ಮಾಹಿತಿ ರವಾನೆ..

ಮಗಳ ಸಂದೇಶವನ್ನು ನೋಡಿದ ತಾಯಿ ಸಂಜೆ 6.50ರ ಸುಮಾರಿಗೆ ಅಪಹರಣದ ಬಗ್ಗೆ100ಗೆ ಕರೆ ಮಾಡಿ ದೂರು ನೀಡಿದ್ದಾರೆ. ಕೂಡಲೇ ಎಚ್ಚೆತ್ತ ಪೊಲೀಸರು ಯುವತಿಯ ಫೋನ್​ ನಂಬರ್​ ಟ್ರ್ಯಾಕ್​​ ಮಾಡಿ ಪತ್ತೆಗಿಳಿದರು.

ಸೈರನ್​ ಸೌಂಡ್​..

ಯುವತಿಯ ಫೋನ್​ ನೆಟ್​ವರ್ಕ್​ ಆಧಾರದ ಮೇಲೆ ಪೊಲೀಸರು ರಾಂಪಲ್ಲಿ ಚೌರಾಸ್ತದಿಂದ ವರಂಗಲ್​ ರಾಷ್ಟ್ರೀಯ ಹೆದ್ದಾರಿವರೆಗೆ ನಿಗಾವಹಿಸಿದ್ದರು. ಈ ವೇಳೆ ಸೈರನ್​ ಸೌಂಡ್​ ಕೇಳಿದ ಆರೋಪಿಗಳು ಯುವತಿಯನ್ನು ಅಲ್ಲಿಂದ ಐದು ಕಿ.ಮೀ ದೂರದವರೆಗೆ ಕರೆದೊಯ್ದು ಬಿಟ್ಟಿದ್ದಾರೆ.

ಯುವತಿ ಪತ್ತೆ..

ರಸ್ತೆಯ ಬದಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನು ಪೊಲೀಸರು ಗುರುತಿಸಿದ್ದಾರೆ. ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿಸಿದ್ದಾರೆ.

ವೈದ್ಯರು ಹೇಳಿದ್ದೇನು?

ಹೈದರಾಬಾದ್​ನ ಗಾಂಧಿ ಆಸ್ಪತ್ರೆಯಲ್ಲಿ ಯುವತಿಯ ವೈದ್ಯಕೀಯ ಪರೀಕ್ಷೆ ನಡೆಸಿದ ವೈದ್ಯರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವುದಾಗಿ ಹೇಳಿದ್ದಾರೆ. ವೈದ್ಯಕೀಯ ಪರೀಕ್ಷೆಯಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ ಎಂದು ಪೊಲೀಸರಿಗೆ ವೈದ್ಯರು ಮಾಹಿತಿ ನೀಡಿದ್ದಾರೆ.

24 ಗಂಟೆಯೊಳಗೆ ಆರೋಪಿಗಳು ಅರೆಸ್ಟ್​..

ಆರೋಪಿಗಳ ಪತ್ತೆಗಾಗಿ ಪೊಲೀಸರು 10 ತಂಡಗಳನ್ನು ರಚಿಸಿದ್ದರು. ಸಿಸಿ ಟಿವಿ ದೃಶ್ಯ ಪರಿಶೀಲಿಸಿ ತಾಂತ್ರಿಕ ಆಧಾರಗಳ ಮೇಲೆ ಪೊಲೀಸರು ಅತ್ಯಾಚಾರ ಎಸಗಿದ ನಾಲ್ವರನ್ನು 24 ಗಂಟೆಯೊಳಗೆ ಬಂಧಿಸಿದ್ದಾರೆ.

ಆರೋಪಿಗಳು ಆಟೋ ಡ್ರೈವರ್ಸ್​..

ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪಿಗಳೆಲ್ಲರೂ ಆಟೋ ಚಾಲಕರಾಗಿದ್ದಾರೆ. ಆರೋಪಿಗಳು ರಾಂಪಲ್ಲಿ, ಯಮ್ನನ್​ಪೇಟ್​ ಗ್ರಾಮದ ನಿವಾಸಿಗಳು ಎಂದು ಪೊಲೀಸರು ಗುರುತಿಸಿದ್ದಾರೆ.

ಈ ಮೊದಲೇ ಆರೋಪಿಯೊಬ್ಬನ ಮೇಲೆ ಎರಡು ಅತ್ಯಾಚಾರ ಪ್ರಕರಣ..

ಈ ನಾಲ್ವರು ಆರೋಪಿಗಳ ಪೈಕಿ ಓರ್ವನ ಮೇಲೆ ಈ ಮೊದಲೇ ಎರಡು ಅತ್ಯಾಚಾರ ಪ್ರಕರಣ ದಾಖಲಾಗಿವೆ. ಪೊಲೀಸರ ತನಿಖೆ ವೇಳೆ ಈ ವಿಷಯ ಬೆಳಕಿಗೆ ಬಂದಿದೆ.

ಪ್ರಿ ಪ್ಲಾನ್​..

ಬಿಫಾರ್ಮಿಸಿ ವಿದ್ಯಾರ್ಥಿನಿಯನ್ನು ಅಪಹರಿಸಿ ಅತ್ಯಾಚಾರ ಎಸಗಲು ಈ ನಾಲ್ವರು ಆಟೋ ಡ್ರೈವರ್​ಗಳು ಮೊದಲೇ ಸ್ಕೆಚ್​ ಹಾಕಿದ್ದರು. ಕಳೆದ ಕೆಲವು ದಿನಗಳಿಂದಲೂ ಆಕೆಯನ್ನು ಅಪಹರಿಸಲು ಯತ್ನಿಸಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದು, ನಡೆದ ಘಟನೆ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ.

ಪ್ರಕರಣ ದಾಖಲು..

ಈ ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Last Updated : Feb 12, 2021, 8:29 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.