ಪೆನ್ (ಮಹಾರಾಷ್ಟ್ರ): ಬ್ಲ್ಯಾಕ್ಮೇಲ್ ಮಾಡಿ ಹೆದರಿಸಿ, ಬೆದರಿಸಿ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನ ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೂ ಮೂವರು ತಲೆಮರೆಸಿಕೊಂಡಿದ್ದಾರೆ.
ಕಾಮುಕರ ವಿರುದ್ಧ ಪೋಕ್ಸೊ ಕಾಯ್ದೆ ಸೆಕ್ಷನ್ 376, 4, 8, 7, 12 ರ ಅಡಿಯಲ್ಲಿ ವಡ್ಖಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಏಳು ಜನ ಆರೋಪಿಗಳು ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿ ಇರಲಿದ್ದಾರೆ. ಪೆನ್ನ ತಹಶಿಲ್ ವ್ಯಾಪ್ತಿಯ ನಿವಾಸಿಯಾಗಿದ್ದ 17 ವರ್ಷದ ಬಾಲಕಿ ಯಾವುದೋ ಕಾರ್ಯಕ್ರಮ ನಿಮಿತ್ತ ಪಕ್ಕದ ಹಳ್ಳಿಗೆ ಹೋಗಿದ್ದಳು. ಅಲ್ಲಿ ಆಕೆಗೆ ಇಬ್ಬರು ಹುಡುಗರ ಪರಿಚಯವಾಗಿತ್ತು.
ಇದನ್ನೂ ಓದಿ: ಪುಲ್ವಾಮಾ ಎನ್ಕೌಂಟರ್ : ನಾಲ್ವರು ಭಯೋತ್ಪಾದಕರನ್ನ ಸದೆಬಡಿದ ಐಎಎಫ್ ವಿಶೇಷ ಪಡೆ
ಅವರ ಸ್ನೇಹ ಪ್ರೀತಿಗೆ ತಿರುಗಿ, ಅದರಲ್ಲಿ ಒಬ್ಬನನ್ನು ಪ್ರೀತಿಸಲು ಪ್ರಾರಂಭಿಸುತ್ತಾಳೆ. ಇದನ್ನೇ ಬಂಡವಾಳ ಮಾಡಿಕೊಂಡ ಹುಡುಗ ಮತ್ತು ಆತನ ಕೆಲವು ಸ್ನೇಹಿತರು ಆಕೆಯನ್ನು ಹೆದರಿಸಿ, ಬ್ಲ್ಯಾಕ್ಮೇಲ್ ಮಾಡಿ ಕಳೆದ ಹಲವು ತಿಂಗಳುಗಳಿಂದ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಹೇಳಲಾಗ್ತಿದೆ.
ಈ ಕುರಿತು ತನಿಖೆ ನಡೆಸಲು ಜಿಲ್ಲಾ ಎಸ್ಪಿ, ಅಲಿಬಾಗ್ನ ಡಿವೈಎಸ್ಪಿ ಸೋನಾಲಿ ಕದಮ್ ಅವರನ್ನು ನೇಮಿಸಿದ್ದಾರೆ. ಬಾಲಕಿಗೆ ಪದೇ ಪದೇ ಕರೆಗಳು ಬರುತ್ತಿದ್ದವು. ಆಗ ಆಕೆಯ ಪೋಷಕರು ಅವಳನ್ನು ಕೇಳಿದಾಗ ಈ ಪ್ರಕರಣವು ಬೆಳಕಿಗೆ ಬಂದಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ