ETV Bharat / bharat

ಕೀಚಕರ ದುಷ್ಕೃತ್ಯ.. ಲಿಫ್ಟ್​ ಕೊಡುವುದಾಗಿ ಕಾರಿನಲ್ಲಿ ತಾಯಿ-ಮಗಳ ಮೇಲೆ ಗ್ಯಾಂಗ್​ರೇಪ್​

author img

By

Published : Jun 25, 2022, 8:47 PM IST

ಲಿಫ್ಟ್​ ಕೊಡುವ ನೆಪದಲ್ಲಿ ತಾಯಿ ಮತ್ತು 6 ವರ್ಷದ ಮಗಳ ಮೇಲೆ ಕೀಚಕರು ಸಾಮೂಹಿಕ ಅತ್ಯಾಚಾರ ಮಾಡಿದ ಹೃದಯವಿದ್ರಾವಕ ಘಟನೆ ಉತ್ತರಾಖಂಡದಲ್ಲಿ ನಿನ್ನೆ ರಾತ್ರಿ ನಡೆದಿದೆ.

ಲಿಫ್ಟ್​ ಕೊಡುವುದಾಗಿ ಕಾರಿನಲ್ಲಿ ತಾಯಿ- ಮಗಳ ಮೇಲೆ ಗ್ಯಾಂಗ್​ರೇಪ್​

ರೂರ್ಕಿ: ಉತ್ತರಾಖಂಡದಲ್ಲಿ ಬೆಚ್ಚಿಬೀಳಿಸುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ರಾತ್ರಿ ವೇಳೆ ಲಿಫ್ಟ್​ ಕೊಡುವ ನೆಪದಲ್ಲಿ ತಾಯಿ ಮತ್ತು 6 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ. ಈ ಬಗ್ಗೆ ಮಹಿಳೆ ನೀಡಿದ ದೂರಿನ ಮೇರೆಗೆ ಪೊಲೀಸರು 4 ತಂಡಗಳನ್ನು ರಚಿಸಿ ಕಾಮುಕರ ಹೆಡೆಮುರಿ ಕಟ್ಟಲು ಪೊಲೀಸರು ಬಲೆ ಬೀಸಿದ್ದಾರೆ.

ಘಟನೆ ಏನು?: ಉತ್ತರಾಖಂಡದ ಮಹಿಳೆಯೊಬ್ಬರು ತನ್ನ 6 ವರ್ಷದ ಮಗಳೊಂದಿಗೆ ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ತಮ್ಮ ಊರಿಗೆ ಪಯಣಿಸುತ್ತಿದ್ದರು. ಈ ವೇಳೆ ಕಾರೊಂದು ಬಂದಿದ್ದು, ಲಿಫ್ಟ್ ಕೇಳಿದ್ದಾರೆ. ತಾವೂ ಅಲ್ಲಿಗೇ ಹೋಗುತ್ತಿರುವುದಾಗಿ ತಿಳಿಸಿದ ಕಾರು ಚಲಾಯಿಸುತ್ತಿದ್ದ ಯುವಕನೊಬ್ಬ, ಸಹಾಯ ಮಾಡುವುದಾಗಿ ಹೇಳಿ ಕಾರಿನಲ್ಲಿ ಹತ್ತಿಸಿಕೊಂಡಿದ್ದಾನೆ. ಕಾರಿನಲ್ಲಿ ಅವರ ಸ್ನೇಹಿತರೂ ಇದ್ದರು.

ಬಳಿಕ ಚಲಿಸುತ್ತಿದ್ದ ಕಾರಿನಲ್ಲಿಯೇ ತಾಯಿ-ಮಗಳ ಮೇಲೆ ಅಟ್ಟಹಾಸ ಮೆರೆದಿದ್ದಾರೆ. ಈ ವೇಳೆ ವಿರೋಧಿಸಿದ ಮಹಿಳೆಯನ್ನು ಹೆದರಿಸಿ ಸಾಮೂಹಿಕ ಅತ್ಯಾಚಾರ ಮಾಡಿ, ರೈಲ್ವೆ ಹಳಿಯ ಮೇಲೆ ಬಿಟ್ಟು ಪರಾರಿಯಾಗಿದ್ದಾರೆ. ಈ ಘಟನೆ ಇದೀಗ ಸಂಚಲನ ಮೂಡಿಸಿದೆ. ರಕ್ತಸಿಕ್ತ ಸ್ಥಿತಿಯಲ್ಲಿ ಮಹಿಳೆ ತನ್ನ ಮಗಳೊಂದಿಗೆ ಪೊಲೀಸ್​ ಠಾಣೆಗೆ ಬಂದು ದೂರು ನೀಡಿದ್ದಾರೆ. ನಿತ್ರಾಣಗೊಂಡಿದ್ದ ಬಾಲಕಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆಗೂ ವೈದ್ಯಕೀಯ ಚಿಕಿತ್ಸೆ ಕೊಡಿಸಲಾಗಿದೆ.

ಮಹಿಳೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಯುವಕ ಮತ್ತು ಆತನ ಗೆಳೆಯರ ಪತ್ತೆಗಾಗಿ 4 ತಂಡಗಳನ್ನು ರಚಿಸಿದ್ದಾರೆ. ಮಹಿಳೆಯನ್ನು ಬಿಟ್ಟು ಪರಾರಿಯಾದ ಪ್ರದೇಶದಲ್ಲಿನ ಸಿಸಿಟಿವಿ ಕ್ಯಾಮರಾಗಳನ್ನು ಶೋಧಿಸಿದ್ದು, ಈ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆಸ್ಪತ್ರೆಯಲ್ಲಿ ದಾಖಲಾದ ಬಾಲಕಿಯ ಸ್ಥಿತಿ ಗಂಭೀರವಾಗಿದ್ದು, ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಓದಿ: ತೀಸ್ತಾ ಸೆಟಲ್ವಾಟ್​ರನ್ನು ವಶಕ್ಕೆ ಪಡೆದ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.