ETV Bharat / bharat

1 ರೂಪಾಯಿಗೆ ಊಟ: 'ಜನ ರಸೋಯಿ' ಕ್ಯಾಂಟೀನ್​ ಉದ್ಘಾಟಿಸಿದ ಗಂಭೀರ್

ಪೂರ್ವ ದೆಹಲಿಯ ಗಾಂಧಿನಗರ ಮಾರುಕಟ್ಟೆಯಲ್ಲಿ ಒಂದು ರೂಪಾಯಿಗೆ ತಟ್ಟೆ ಊಟ ನೀಡುವ 'ಜನ ರಸೋಯಿ' ಕ್ಯಾಂಟೀನ್ ಅನ್ನು ಸಂಸದ ಗೌತಮ್ ಗಂಭೀರ್ ಉದ್ಘಾಟನೆ ಮಾಡಿದರು.

author img

By

Published : Dec 24, 2020, 5:48 PM IST

Gambhir inaugurates 'Jan Rasoi' canteen in East Delhi
ಕ್ಯಾಂಟೀನ್​ ಉದ್ಘಾಟಿಸಿದ ಗೌತಮ್​ ಗಂಭೀರ್​

ನವದೆಹಲಿ: ಮನೆಯಿಲ್ಲದ ಮತ್ತು ನಿರ್ಗತಿಕರಿಗೆ ಅತ್ಯಂತ ಕಡಿಮೆ ದರದಲ್ಲಿ ಊಟ ಒದಗಿಸುವ ನಿಟ್ಟಿನಲ್ಲಿ ಗಾಂಧಿನಗರ ಮಾರುಕಟ್ಟೆಯಲ್ಲಿ ಒಂದು ರೂಪಾಯಿಗೆ ತಟ್ಟೆ ಊಟ ನೀಡುವ 'ಜನ ರಸೋಯಿ' ಕ್ಯಾಂಟೀನ್ ಅನ್ನು ಪೂರ್ವ ದೆಹಲಿಯ ಬಿಜೆಪಿ ಸಂಸದ ಗೌತಮ್ ಗಂಭೀರ್ ಉದ್ಘಾಟಿಸಿದರು.

ಪೂರ್ವ ದೆಹಲಿಯ ವಿವಿಧ ಭಾಗಗಳಲ್ಲಿ ಈ ರೀತಿಯ ಐದರಿಂದ ಆರು ಕ್ಯಾಂಟೀನ್​ಗಳನ್ನು ಶೀಘ್ರದಲ್ಲೇ ತೆರೆಯಲಾಗುವುದು. ಹಾಗೆಯೇ ಮುಂದಿನ ದಿನಗಳಲ್ಲಿ ಮಯೂರ್ ವಿಹಾರ್ ಜಿಲ್ಲೆಯಲ್ಲಿ 'ಜನ ರಸೋಯಿ' ಕ್ಯಾಂಟೀನ್​ಗಳನ್ನು ತೆರೆಯುವ ಚಿಂತನೆ ಇದೆ ಎಂದರು.

ಒಂದು ರೂಪಾಯಿಗೆ ನೀಡುವ ತಟ್ಟೆ ಊಟವು ಅತ್ಯಂತ ಪೌಷ್ಟಿಕ, ಗುಣಮಟ್ಟ, ಆರೋಗ್ಯಕರ ಮತ್ತು ರುಚಿಕರ ಆಹಾರವಾಗಿರಲಿದೆ. ಪ್ರತಿದಿನ 500 ಜನರಿಗೆ ಆಹಾರ ನೀಡಲಾಗುವುದು. ಎರಡನೇ ಬಾರಿ ಆಹಾರ ಸೇವನೆಗೂ ಅವಕಾಶ ಇರಲಿದೆ. ಅನ್ನ, ದಾಲ್, ತರಕಾರಿ ಸಾಂಬಾರು ಇರಲಿದೆ ಎಂದು ಗಂಭೀರ್ ಹೇಳಿದರು.

ಓದಿ: ಡೇಟಾ ಕಳ್ಳತನ, ಹ್ಯಾಕಿಂಗ್ ತಡೆಗಟ್ಟಲು ಆ್ಯಪ್ ಅಭಿವೃದ್ಧಿಪಡಿಸಿದ ವಿದ್ಯಾರ್ಥಿನಿ

ಊಟ ಸೇವನೆ ಸಂದರ್ಭದಲ್ಲಿ ಕೋವಿಡ್​ ನಿಯಮಾವಳಿಗಳ ಅನುಕರಣೆ ಕಡ್ಡಾಯ. ಒಂದು ಬಾರಿಗೆ 50 ಮಂದಿ ಆಹಾರ ಸೇವಿಸಲು ಮಾತ್ರ ಅವಕಾಶ ಇರುತ್ತದೆ. 1 ರೂ. ಟೋಕನ್​​ ಮೊತ್ತವು ಅಡಿಗೆ ಮಾಡುವ ಸಿಬ್ಬಂದಿಗೆ ವೇತನದ ರೂಪದಲ್ಲಿ ಪಾವತಿಸಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದ ಅವರು, ಒಂದೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಇದೆ. ಅಂತಹವರಿಗಾಗಿ ಕ್ಯಾಂಟೀನ್​ ಆರಂಭಿಸಲಾಗಿದೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.