ನವದೆಹಲಿ: ಪೂರ್ವ ಮತ್ತು ಲಡಾಖ್‌ನ ಚುಶುಲ್‌ನಲ್ಲಿ ಇರುವ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಭಾರತದ ಬದಿಯಲ್ಲಿ ಇಂದು ಬೆಳಗ್ಗೆ 10: 30ರಿಂದ ಪ್ರಾರಂಭವಾಗಲಿರುವ ಹನ್ನೊಂದನೇ ಭಾರತೀಯ ಮತ್ತು ಚೀನಾದ ಉನ್ನತ ಮಟ್ಟದ ಹಿರಿಯ ಕಮಾಂಡರ್ ಮಾತುಕತೆಯಲ್ಲಿ ಕೆಲವು ಸಕರಾತ್ಮಕ 'ಪ್ರಗತಿ'ಯ ಬೆಳವಣಿಗೆಗಳನ್ನು ನಿರೀಕ್ಷಿಸಲಾಗಿದೆ ಎಂದು ಅಧಿಕೃತ ಮೂಲವೊಂದು ಈಟಿವಿ ಭಾರತಗೆ ತಿಳಿಸಿದೆ.
ಚರ್ಚಿತ ಪ್ರದೇಶಗಳು
ಪ್ಯಾಂಗೊಂಗ್ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಯಲ್ಲಿ ಒಪ್ಪಿತ ನಿಯಮಗಳಿಗೆ ಅನುಸಾರವಾಗಿ ಸೈನ್ಯ ನಿಷ್ಕ್ರಿಯಗೊಳಿಸುವಿಕೆ ಈಗಾಗಲೇ ಜಾರಿಗೆ ಬಂದಿದೆ. ಇತರ ಮಿಲಿಟರಿ ಮುಖಾಮುಖಿ ಪ್ರದೇಶಗಳ ಪರಿಸ್ಥಿತಿ ಬದಲಾಗದೆ ಉಳಿದಿದೆ. ಶುಕ್ರವಾರದ ಮಾತುಕತೆಗಳು ಅದನ್ನು ಬದಲಾಯಿಸಲು ಪ್ರಯತ್ನಿಸಲಿವೆ. ಈಗಾಗಲೇ ಕೆಲವು ಸಾಮಾನ್ಯವಾದ ಉತ್ತಮ ನಿರೀಕ್ಷೆಗಳನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ಮೂಲಗಳು ಹೇಳಿವೆ.
ಏಷ್ಯಾದ ಎರಡು ದೊಡ್ಡ ರಾಷ್ಟ್ರಗಳ ನಡುವೆ ಸೈನ್ಯದ ಮುಖಾಮುಖಿ ಎದುರಾಗುವಿಕೆಯು ಪರಸ್ಪರ ಮಾತುಕತೆಯ ಮೂಲಕ ಕೊನಗೊಂಡರೇ ಭಾರತ ಮತ್ತು ಚೀನಾ ನಡುವಿನ ಉದ್ವಿಗ್ನತೆ ಗಣನೀಯವಾಗಿ ತಗ್ಗಿದಂತಾಗುತ್ತದೆ. ಗೋಗ್ರಾ ಕಣಿವೆ, ಹಾಟ್ ಸ್ಪ್ರಿಂಗ್ಸ್ ಮತ್ತು ಡೆಮ್‌ಚಾಕ್ ಪ್ರದೇಶಗಳ ಸಂಬಂಧ ಚರ್ಚೆಯಲ್ಲಿ 'ಪ್ರಗತಿ' ಸಾಧಿಸಿದರೆ ಉಭಯ ರಾಷ್ಟ್ರಗಳಿಗೆ ಒಳಿತು.
ಗೋಪ್ರಾ ಮತ್ತು ಹಾಟ್ ಸ್ಪ್ರಿಂಗ್ಸ್‌ನಲ್ಲಿ ಸೇನೆಯನ್ನು ಶೀಘ್ರವಾಗಿ ಹಿಂತೆಗೆದುಕೊಳ್ಳುವಂತೆ ಭಾರತ ಒತ್ತಾಯಿಸಲಿದೆ. ಡೆಪ್ಸಾಂಗ್ ಬಯಲು ಪ್ರದೇಶಗಳಲ್ಲಿ ಬಾಕಿ ಇರುವ ಸಮಸ್ಯೆಗಳನ್ನು ಪರಿಹರಿಸಲು ಚರ್ಚೆಯೂ ನಡೆಯಲಿದೆ.
ಇದನ್ನೂ ಓದಿ: ಈಟಿವಿ ಭಾರತ್ ಇಂಪ್ಯಾಕ್ಟ್: ಚಾಮರಾಜನಗರದಲ್ಲಿ ಸಿರಿಂಜ್ನಲ್ಲಿ ಚಾಕೋಲೆಟ್ ಮಾರಾಟ-ಆರೋಗ್ಯಾಧಿಕಾರಿಗಳ ದಾಳಿ, ಪರಿಶೀಲನೆ
ಪ್ರಸ್ತುತ ಮಿಲಿಟರಿ, ರಾಜತಾಂತ್ರಿಕ ಮತ್ತು ರಾಜಕೀಯ ಮಟ್ಟದಲ್ಲಿ ಮಾತುಕತೆ ತೊಡಗಿಸಿಕೊಳ್ಳಲಾಗಿದೆ. ಕಳೆದ ವರ್ಷ ಮೇ 4-5ರಂದು ಗಡಿ ಖ್ಯಾತೆಯಿಂದಾಗಿ ಪ್ಯಾಂಗೊಂಗ್ ತ್ಸೊದ ಉತ್ತರ ದಂಡೆಯ ಎಲ್‌ಎಸಿ ಬಳಿ ಭಾರತ-ಚೀನಾ ನಡುವೆ ಯುದ್ಧದಂತಹ ವಾತಾವರಣ ಸೃಷ್ಟಿಯಾಯಿತು.
ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆಗಳ ಪರಿಣಾಮವಾಗಿ ಉಭಯ ರಾಷ್ಟ್ರಗಳು ಫೆಬ್ರವರಿಯಲ್ಲಿ ಪ್ಯಾಂಗೊಂಗ್ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಯಿಂದ ಸೈನ್ಯ ಮತ್ತು ಶಸ್ತ್ರಾಸ್ತ್ರಗಳನ್ನು ಹಿಂತೆಗೆದುಕೊಳ್ಳುವ ಪ್ರಕ್ರಿಯೆ ಪೂರ್ಣಗೊಳಿಸಿವೆ.
10 ಸುತ್ತಿನ ಮಾತುಕತೆಗಳು:
ಈ ಹಿಂದಿನ 10 ಸುತ್ತಿನ ಮಾತುಕತೆಗಳು ಜೂನ್ 6, ಜೂನ್ 22, ಜೂನ್ 30, ಜುಲೈ 14, ಆಗಸ್ಟ್ 2, ಸೆಪ್ಟೆಂಬರ್ 21, ಅಕ್ಟೋಬರ್ 12, ನವೆಂಬರ್ 6, ಜನವರಿ 24 ಮತ್ತು ಫೆಬ್ರವರಿ 20ರಂದು ಚುಶುಲ್ನಲ್ಲಿನ ಎಲ್ಎಸಿಯ ಭಾರತದ ಗಡಿಯಲ್ಲಿ ಮತ್ತು ಚೀನಾ ವ್ಯಾಪ್ತಿಯ ಮೊಲ್ಡೊ ಗ್ಯಾರಿಸನ್‌ನಲ್ಲಿ ನಡೆದವು.
ಜನರಲ್ ರಾವತ್ ಮಾತುಕತೆ:
ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಅವರು ಬುಧವಾರ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಥಿಂಕ್-ಟ್ಯಾಂಕ್ ಕಾರ್ಯಕ್ರಮವೊಂದರಲ್ಲಿ ತಮ್ಮ ಭಾಷಣದಲ್ಲಿ ಶಾಂತಿಯುತ ಸ್ವರ ಅಳವಡಿಸಿಕೊಳ್ಳುವಂತೆ ಕರೆ ನೀಡಿದ್ದರು.
ಪ್ರಾದೇಶಿಕ ನೆರೆಹೊರೆಯ ಬಗ್ಗೆ ಮಾತನಾಡಿದ ರಾವತ್, ಈ ಪ್ರದೇಶದ ಉತ್ತಮ ದೃಷ್ಟಿಕೋನ ಬೆಳೆಸುವ ಅವಶ್ಯಕತೆಯಿದೆ. ನಾವು ಅಗಿಯುವುದಕ್ಕಿಂತ ಹೆಚ್ಚಿನದನ್ನು ಮತ್ತೊಬ್ಬರನ್ನು ಕಚ್ಚದಂತೆ ಎಚ್ಚರಿಕೆ ವಹಿಸಬೇಕು ಎಂದರು.
ರಷ್ಯಾ ವಿದೇಶಾಂಗ ಸಚಿವರ ಭೇಟಿ:
ಕುತೂಹಲಕಾರಿ ಸಂಗತಿಯೆಂದರೆ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲವ್ರೊವ್ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು, ಭಯೋತ್ಪಾದನಾ ನಿಗ್ರಹ ಸಾಮರ್ಥ್ಯಗಳನ್ನು ಬಲಪಡಿಸಲು ವಿಶೇಷ ಮಿಲಿಟರಿ ಉಪಕರಣಗಳನ್ನು ಪೂರೈಸಲು ಒಪ್ಪಿಕೊಂಡಿದ್ದಾರೆ. ಪಾಕಿಸ್ತಾನದೊಂದಿಗೆ ಹೆಚ್ಚಿನ ಮಿಲಿಟರಿ ಮತ್ತು ನೌಕಾಪಡೆ ಸಮರಭ್ಯಾಸ ನಡೆಸಲು ಯೋಜಿಸಿದ ದಿನವೇ ಈ ಬೆಳವಣಿಗೆಗಳು ನಡೆಯುತ್ತಿವೆ.
ಸಾಂಪ್ರದಾಯಿಕವಾಗಿ ಭಾರತಕ್ಕೆ ಹತ್ತಿರವಾದ ರಷ್ಯಾ, ಪಾಕಿಸ್ತಾನದ ಜತೆ ಸಹಕಾರ ಹೆಚ್ಚಿಸಿದೆ. ವಿಶೇಷವಾಗಿ ಭಾರತ ಮತ್ತು ಅಮೆರಿಕ ನಡುವೆ ಬಾಂಧವ್ಯ ಹೆಚ್ಚುತ್ತಿದ್ದು, ಚೀನಾವನ್ನು ಎದುರಿಸುವ ಪ್ರಯತ್ನದಲ್ಲಿ ಬಹಳ ಹತ್ತಿರದಲ್ಲಿದೆ. ಪಾಕಿಸ್ತಾನಕ್ಕೆ ರಷ್ಯಾ ಮಿಲಿಟರಿ ಉಪಕರಣಗಳನ್ನು ಪೂರೈಸಬಹುದೆಂಬ ಅಂಶವು ಭಾರತದ ಇಚ್ಛೆಯಂತೆ ನಡೆಯುವುದಿಲ್ಲ.