ನವದೆಹಲಿ: ಉಕ್ರೇನ್ ಬಿಕ್ಕಟ್ಟನ್ನು ಪರಿಹರಿಸಲು ಉಕ್ರೇನ್ ಅಧ್ಯಕ್ಷ ಜೆಲೆನ್ಸ್ಕಿ ಅವರು ಪ್ರಸ್ತಾಪಿಸಿರುವ ಶಾಂತಿ ಸಂಧಾನ ಸೂತ್ರವನ್ನು ನಾವು ಬೆಂಬಲಿಸುತ್ತೇವೆ ಎಂದು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಚಾರ್ಲ್ಸ್ ಮೈಕೆಲ್ ಹೇಳಿದ್ದಾರೆ. ಶುಕ್ರವಾರ ಜಿ 20 ದೆಹಲಿ ಶೃಂಗಸಭೆ 2023 ಕ್ಕೆ ಮುಂಚಿತವಾಗಿ ದೆಹಲಿಯಲ್ಲಿ ಅವರು ಮಾತನಾಡಿದರು.
-
G20 Delhi Summit 2023: India seeking greater voice for developing world, but Ukraine war may overshadow talks https://t.co/lpDbKssuJU
— ETV Bharat (@ETVBharatEng) September 8, 2023 " class="align-text-top noRightClick twitterSection" data="
">G20 Delhi Summit 2023: India seeking greater voice for developing world, but Ukraine war may overshadow talks https://t.co/lpDbKssuJU
— ETV Bharat (@ETVBharatEng) September 8, 2023G20 Delhi Summit 2023: India seeking greater voice for developing world, but Ukraine war may overshadow talks https://t.co/lpDbKssuJU
— ETV Bharat (@ETVBharatEng) September 8, 2023
ನವದೆಹಲಿ ಶೃಂಗಸಭೆಯಲ್ಲಿ ಆಫ್ರಿಕನ್ ಒಕ್ಕೂಟವನ್ನು ಜಿ 20 ಯ ಖಾಯಂ ಸದಸ್ಯರನ್ನಾಗಿ ಮಾಡಿಕೊಳ್ಳಲು ಎದುರು ನೋಡುತ್ತಿರುವುದಾಗಿ ಒಕ್ಕೂಟ ಹೇಳಿದೆ. ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ಬಗ್ಗೆ ಮಾತನಾಡಿದ ಮೈಕೆಲ್, ರಷ್ಯಾ ಉಕ್ರೇನ್ನಲ್ಲಿ ಮುಗ್ಧ ನಾಗರಿಕರ ಮೇಲೆ ದಾಳಿ ಮುಂದುವರಿಸಿದೆ ಮತ್ತು ಯುರೋಪಿಯನ್ ಯುನಿಯನ್ ಉಕ್ರೇನ್ ಅನ್ನು ಬೆಂಬಲಿಸುವುದನ್ನು ಮುಂದುವರಿಸುತ್ತದೆ ಎಂದು ಹೇಳಿದರು.
"ಉಕ್ರೇನ್ ಬಿಕ್ಕಟ್ಟಿನ ಬಗ್ಗೆ ಯುರೋಪಿಯನ್ ಒಕ್ಕೂಟದ ನಿಲುವು ಅತ್ಯಂತ ಸ್ಪಷ್ಟವಾಗಿದೆ. ಉಕ್ರೇನ್ ವಿರುದ್ಧದ ರಷ್ಯಾದ ಆಕ್ರಮಣವನ್ನು ನಾವು ಖಂಡಿಸುತ್ತೇವೆ. ಉಕ್ರೇನ್ ಬಿಕ್ಕಟ್ಟನ್ನು ಪರಿಹರಿಸಲು ಉಕ್ರೇನ್ ಅಧ್ಯಕ್ಷ ಜೆಲೆನ್ಸ್ಕಿ ಅವರ ಶಾಂತಿ ಸೂತ್ರವನ್ನು ನಾವು ಬೆಂಬಲಿಸುತ್ತೇವೆ" ಎಂದು ಅವರು ತಿಳಿಸಿದರು.
"ನಾವು ಇಲ್ಲಿ ಮಾತನಾಡುತ್ತಿರುವ ಸಮಯದಲ್ಲಿಯೂ ಸಾರ್ವಭೌಮ ರಾಷ್ಟ್ರವಾದ ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡುತ್ತಲೇ ಇದೆ, ಮುಗ್ಧ ಜನರನ್ನು ಕೊಲ್ಲುತ್ತಿದೆ ಮತ್ತು ಉಕ್ರೇನ್ನ ನಗರಗಳನ್ನು ನಾಶಪಡಿಸುತ್ತಿದೆ. ಅದಕ್ಕಾಗಿಯೇ ಇಯು ಉಕ್ರೇನ್ ಅನ್ನು ಬಲವಾಗಿ ಬೆಂಬಲಿಸುವುದನ್ನು ಮುಂದುವರಿಸುತ್ತದೆ ಮತ್ತು ರಷ್ಯಾದ ಮೇಲೆ ಒತ್ತಡ ಹೇರುತ್ತದೆ" ಎಂದು ಮೈಕೆಲ್ ಪ್ರತಿಪಾದಿಸಿದರು.
"ಕ್ರೆಮ್ಲಿನ್ ದಕ್ಷಿಣ ಏಷ್ಯಾ ಸೇರಿದಂತೆ ಉಕ್ರೇನ್ ಆಚೆಗೂ ಸುಳ್ಳುಗಳನ್ನು ಹರಡುತ್ತಿದೆ. ವಿಶ್ವಾದ್ಯಂತ 250 ದಶಲಕ್ಷಕ್ಕೂ ಹೆಚ್ಚು ಜನ ತೀವ್ರ ಆಹಾರ ಅಭದ್ರತೆ ಮತ್ತು ಸುರಕ್ಷತಾ ಅಪಾಯವನ್ನು ಎದುರಿಸುತ್ತಿದ್ದಾರೆ. ಉಕ್ರೇನ್ ಮೇಲೆ ದಾಳಿ ಮಾಡುವ ಮೂಲಕ ಕ್ರೆಮ್ಲಿನ್ ಹಸಿದವರಿಗೆ ತೀವ್ರವಾಗಿ ಅಗತ್ಯವಿರುವ ಆಹಾರವನ್ನು ಕಸಿದುಕೊಳ್ಳುತ್ತಿದೆ" ಎಂದು ಅವರು ಹೇಳಿದರು.
ಜೂನ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಿ -20 ನಾಯಕರಿಗೆ ಪತ್ರ ಬರೆದು ನವದೆಹಲಿ ಶೃಂಗಸಭೆಯಲ್ಲಿ ಆಫ್ರಿಕನ್ ಒಕ್ಕೂಟಕ್ಕೆ ಜಿ20 ಗುಂಪಿನ ಪೂರ್ಣ ಸದಸ್ಯತ್ವ ನೀಡುವಂತೆ ಒತ್ತಾಯಿಸಿದ್ದರು. ಅದಾಗಿ ಕೆಲ ವಾರಗಳ ನಂತರ, ಜುಲೈನಲ್ಲಿ ಕರ್ನಾಟಕದ ಹಂಪಿಯಲ್ಲಿ ನಡೆದ ಮೂರನೇ ಜಿ -20 ಷರ್ಪಾಗಳ ಸಭೆಯಲ್ಲಿ ಶೃಂಗಸಭೆಯ ಕರಡು ಪ್ರಕಟಣೆಯಲ್ಲಿ ಈ ಪ್ರಸ್ತಾಪವನ್ನು ಔಪಚಾರಿಕವಾಗಿ ಸೇರಿಸಲಾಯಿತು.
ಜಿ -20 ಶೃಂಗಸಭೆಯಲ್ಲಿ ಈ ಪ್ರಸ್ತಾಪದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಆಫ್ರಿಕನ್ ಯೂನಿಯನ್ (ಎಯು) ಇದು ಆಫ್ರಿಕಾ ಖಂಡದ 55 ಸದಸ್ಯ ರಾಷ್ಟ್ರಗಳನ್ನು ಒಳಗೊಂಡ ಪ್ರಭಾವಶಾಲಿ ಸಂಸ್ಥೆಯಾಗಿದೆ.
ಉಕ್ರೇನ್ ಸಂಘರ್ಷದ ಬಗ್ಗೆ ಭಿನ್ನಾಭಿಪ್ರಾಯಗಳಿರುವುದನ್ನು ನೋಡಿದರೆ ಶೃಂಗಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲು ಸಾಧ್ಯವಾಗಲಿದೆಯೇ ಎಂಬ ಪ್ರಶ್ನೆಗೆ, ಈ ಬಗ್ಗೆ ಮಾತುಕತೆಗಳು ನಡೆಯುತ್ತಿವೆ ಎಂದು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಚಾರ್ಲ್ಸ್ ಮೈಕೆಲ್ ಹೇಳಿದರು.
ಇದನ್ನೂ ಓದಿ : ಕೆನಡಾದಲ್ಲಿ ತೀವ್ರಗೊಂಡ ಕಾಳ್ಗಿಚ್ಚು: ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ