ETV Bharat / bharat

G20 ಶೃಂಗಸಭೆ: ವಿದೇಶಿ ಪ್ರತಿನಿಧಿಗಳಿಗೆ ಯುಪಿಐ ವ್ಯವಸ್ಥೆ ಪರಿಚಯಿಸಲಿದೆ ಭಾರತ - ದೇಶದ ಡಿಜಿಟಲ್ ಆರ್ಥಿಕತೆಯ ಸಾಧನೆಗಳನ್ನು

ಜಿ20 ಶೃಂಗಸಭೆಗೆ ಆಗಮಿಸಲಿರುವ ವಿದೇಶಿ ಪ್ರತಿನಿಧಿಗಳ ಮುಂದೆ ಭಾರತದ ಯುಪಿಐ ಪಾವತಿ ವ್ಯವಸ್ಥೆಯನ್ನು ಪರಿಚಯಿಸಲು ಕೇಂದ್ರ ಸರ್ಕಾರ ಸಿದ್ಧತೆಗಳನ್ನು ಮಾಡಿಕೊಂಡಿದೆ.

G20 summit: India to introduce UPI system for foreign delegates

author img

By ETV Bharat Karnataka Team

Published : Sep 6, 2023, 6:57 PM IST

ನವದೆಹಲಿ: ದೇಶದ ಡಿಜಿಟಲ್ ಆರ್ಥಿಕತೆಯ ಸಾಧನೆಗಳನ್ನು ಮತ್ತು 'ಡಿಜಿಟಲ್ ಇಂಡಿಯಾ' ಉಪಕ್ರಮವನ್ನು ಜಗತ್ತಿಗೆ ಪ್ರದರ್ಶಿಸಲು ಜಿ 20 ಅಧ್ಯಕ್ಷತೆಯನ್ನು ಒಂದು ಸದವಕಾಶವಾಗಿ ಬಳಸಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ. ಜಿ20 ಶೃಂಗ ಸಭೆಗಾಗಿ ಸುಮಾರು 1,000 ವಿವಿಧ ದೇಶಗಳ ವಿದೇಶಿ ಪ್ರತಿನಿಧಿಗಳು ಭಾರತಕ್ಕೆ ಭೇಟಿ ನೀಡಲಿದ್ದು, ಅವರಿಗೆ ಯುಪಿಐ ವ್ಯಾಲೆಟ್ ತಂತ್ರಜ್ಞಾನ ಹಾಗೂ ದೇಶದಲ್ಲಿನ ನಗದು ಪಾವತಿಯಲ್ಲಾದ ಸರಳತೆಯ ಕ್ರಮಗಳನ್ನು ವಿವರವಾಗಿ ಪ್ರದರ್ಶಿಸಲಿದೆ.

"ವಿದೇಶಿ ಪ್ರತಿನಿಧಿಗಳು ಅಥವಾ ಗಣ್ಯರು ಯುಪಿಐ ವಹಿವಾಟುಗಳನ್ನು ಪರಿಶೀಲಿಸಲು ಸಾಧ್ಯವಾಗುವಂತೆ ಅವರ ಯುಪಿಐ ವ್ಯಾಲೆಟ್​ಗಳಿಗೆ 500 ರಿಂದ 1,000 ರೂ. ವರ್ಗಾಯಿಸಲಾಗುವುದು" ಎಂದು ಸರ್ಕಾರಿ ಅಧಿಕಾರಿಯೊಬ್ಬರು ಎಎನ್ಐಗೆ ತಿಳಿಸಿದ್ದಾರೆ. ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಎಂಬುದು ಭಾರತದ ಮೊಬೈಲ್ ಆಧಾರಿತ ವೇಗದ ಪಾವತಿ ವ್ಯವಸ್ಥೆಯಾಗಿದ್ದು, ಗ್ರಾಹಕರ ವರ್ಚುವಲ್ ಪಾವತಿ ವಿಳಾಸವನ್ನು (ವಿಪಿಎ) ಬಳಸಿಕೊಂಡು ದಿನದ 24 ಗಂಟೆಯೂ ನಗದು ಪಾವತಿ ಮಾಡಲು ಗ್ರಾಹಕರಿಗೆ ಅವಕಾಶ ಮಾಡಿಕೊಡುತ್ತದೆ.

ಯುಪಿಐ ಪಾವತಿ ವ್ಯವಸ್ಥೆಯು ಭಾರತದಲ್ಲಿ ರಿಟೇಲ್​ ಡಿಜಿಟಲ್ ಪಾವತಿಗಳ ವಿಷಯದಲ್ಲಿ ಸಾಕಷ್ಟು ಜನಪ್ರಿಯವಾಗಿದೆ ಮತ್ತು ಅದರ ಅಳವಡಿಕೆ ದಿನದಿಂದ ದಿನಕ್ಕೆ ವೇಗವಾಗಿ ಹೆಚ್ಚುತ್ತಿದೆ. ಫಿನ್​ಟೆಕ್​ ತಂತ್ರಜ್ಞಾನದಲ್ಲಿ ಭಾರತವು ವೇಗವಾಗಿ ಬೆಳೆಯುತ್ತಿರುವ ವ್ಯವಸ್ಥೆಗಳಲ್ಲಿ ಒಂದಾಗಿದೆ ಮತ್ತು ಭಾರತದ ಡಿಜಿಟಲ್ ಪಾವತಿ ಮೂಲಸೌಕರ್ಯದ ಜಾಗತೀಕರಣವನ್ನು ಹೆಚ್ಚಿಸುವಲ್ಲಿ ಸರ್ಕಾರ ಮತ್ತು ಆರ್​ಬಿಐ ಪ್ರಮುಖ ಪಾತ್ರ ವಹಿಸಿವೆ.

ಯುಪಿಐನ ಪ್ರಯೋಜನಗಳು ಪ್ರಸ್ತುತ ಭಾರತಕ್ಕೆ ಮಾತ್ರ ಸೀಮಿತವಾಗಿರದೆ ಇತರ ದೇಶಗಳು ಸಹ ಇದರಿಂದ ಪ್ರಯೋಜನ ಪಡೆಯುವಂತೆ ಭಾರತ ಸರ್ಕಾರ ಹಲವಾರು ಉಪಕ್ರಮಗಳನ್ನು ಕೈಗೊಳ್ಳುತ್ತಿದೆ. ಇಲ್ಲಿಯವರೆಗೆ, ಶ್ರೀಲಂಕಾ, ಫ್ರಾನ್ಸ್, ಯುಎಇ ಮತ್ತು ಸಿಂಗಾಪುರ್ ಉದಯೋನ್ಮುಖ ಫಿನ್​ಟೆಕ್​ ಮತ್ತು ಪಾವತಿ ಯೋಜನೆಗಳಲ್ಲಿ ಭಾರತದೊಂದಿಗೆ ಪಾಲುದಾರಿಕೆ ಹೊಂದಿವೆ.

ಅಲ್ಲದೆ ಆರ್​ಬಿಐ ಈ ವರ್ಷದ ಆರಂಭದಲ್ಲಿ ಜಿ 20 ರಾಷ್ಟ್ರಗಳಿಂದ ಬರುವ ಪ್ರಯಾಣಿಕರು ಭಾರತದಲ್ಲಿದ್ದಾಗ ಅವರು ಯುಪಿಐ ಮೂಲಕ ಸ್ಥಳೀಯವಾಗಿ ನಗದು ಪಾವತಿ ಮಾಡುವ ಅವಕಾಶ ಕಲ್ಪಿಸಿದೆ. ಏಪ್ರಿಲ್​ನಿಂದ ಈ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಇನ್ನೆರಡು ದಿನಗಳಲ್ಲಿ ನವದೆಹಲಿಯಲ್ಲಿ ಜಿ 20 ಶೃಂಗಸಭೆ ನಡೆಯಲಿದ್ದು, ಶೃಂಗಸಭೆಯಲ್ಲಿ ಭಾಗವಹಿಸಲು ವಿಶ್ವನಾಯಕರು ನವದೆಹಲಿಗೆ ಆಗಮಿಸಲಿದ್ದಾರೆ.

ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (ಯುಪಿಐ) ಇದು ಜನಪ್ರಿಯ ಮೊಬೈಲ್ ಪಾವತಿ ವಿಧಾನವಾಗಿದ್ದು, ಇದು ಒಂದು ಬ್ಯಾಂಕ್ ಖಾತೆಯಿಂದ ಇನ್ನೊಂದಕ್ಕೆ ತಕ್ಷಣ ಮತ್ತು ಉಚಿತವಾಗಿ ಹಣ ವರ್ಗಾಯಿಸಲು ಅವಕಾಶ ನೀಡುತ್ತದೆ. ಯುಪಿಐ ಮೂಲಕ ಹಣ ವರ್ಗಾಯಿಸಲು ಪ್ರತಿಯೊಬ್ಬ ಬಳಕೆದಾರರು ಯುಪಿಐ ಐಡಿ ಎಂದು ಕರೆಯಲ್ಪಡುವ ಐಡಿಯನ್ನು ಹೊಂದಿರಬೇಕು. ಯುಪಿಐ ಐಡಿ ಎಂಬುದು ಬ್ಯಾಂಕ್ ಖಾತೆಯ ವಿಶಿಷ್ಟ ಗುರುತಿನ ಸಂಕೇತವಾಗಿದ್ದು, ಇದನ್ನು ಒಂದು ಬ್ಯಾಂಕಿನಿಂದ ಇನ್ನೊಂದಕ್ಕೆ ಹಣ ಕಳುಹಿಸಲು ಮತ್ತು ಸ್ವೀಕರಿಸಲು ಬಳಸಲಾಗುತ್ತದೆ. (ಎಎನ್​ಐ)

ಇದನ್ನೂ ಓದಿ : ಬ್ಯಾಂಕ್ ಅಥವಾ ಪೋಸ್ಟ್​ ಆಫೀಸ್​ ಎಫ್​ಡಿ; ಅಲ್ಪಾವಧಿ ಹೂಡಿಕೆಗಾಗಿ ಯಾವುದು ಬೆಸ್ಟ್​?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.