ETV Bharat / bharat

G-20 ಶೃಂಗಸಭೆ 2023: ದೆಹಲಿಯಲ್ಲಿ ಸಂಚಾರ ನಿರ್ಬಂಧದ ಬಗ್ಗೆ ಕಾಂಗ್ರೆಸ್​ ಪ್ರಶ್ನೆ

ಸಂಚಾರ ನಿರ್ಬಂಧಗಳನ್ನು ವಿಧಿಸುವುದು ಎಲ್ಲೋ ಒಂದು ಕಡೆ ಸರ್ಕಾರ ಹಾಗೂ ನಗರವಾಸಿಗಳ ನಡುವಿನ ನಂಬಿಕೆಯ ಕೊರತೆಯನ್ನು ತೋರಿಸುತ್ತದೆ ಎಂದು ಅಖಿಲ ಭಾರತ ಕಾಂಗ್ರೆಸ್​ ಕಮಿಟಿಯ ಕಾರ್ಯಾಧ್ಯಕ್ಷ ಅಭಿಷೇಕ್ ದತ್​ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

author img

By ETV Bharat Karnataka Team

Published : Sep 7, 2023, 4:10 PM IST

ಕಾಂಗ್ರೆಸ್
ಕಾಂಗ್ರೆಸ್

ನವದೆಹಲಿ : ಸಂಚಾರ ನಿರ್ಬಂಧ ಹಾಗೂ ಬಿಗಿ ಭದ್ರತೆಯ ನಡುವೆ ದೆಹಲಿಯಲ್ಲಿ ಗುರುವಾರ ಜಿ 20 ಶೃಂಗಸಭೆ ಆಯೋಜನೆಗೆ ಸಜ್ಜಾಗುತ್ತಿದೆ. ಹೀಗಾಗಿ ಕಾಂಗ್ರೆಸ್​ ನಾಯಕರು ಇಂತಹ ನಿರ್ಬಂಧಗಳನ್ನು ಪ್ರಶ್ನಿಸಿದ್ದಾರೆ. ಅಲ್ಲದೇ, ರಾಷ್ಟ್ರ ರಾಜಧಾನಿಯಲ್ಲಿ ಇಂತಹ ದೊಡ್ಡಮಟ್ಟದ ಅಂತಾರಾಷ್ಟ್ರೀಯ ಕಾರ್ಯಕ್ರಮ ನಡೆದಾಗ ಈ ರೀತಿಯ ಮಾಡಬೇಕಾದ ಹಾಗೂ ಮಾಡಬಾರದ ನಿರ್ಬಂಧಗಳನ್ನು ಸೂಚಿಸಿಲ್ಲ ಎಂದಿದ್ದಾರೆ.

ದೆಹಲಿಯ ಮಾಜಿ ಲೋಕಸಭಾ ಸಂಸದ ಹಾಗೂ ಕಾಂಗ್ರೆಸ್​ನ ಹಿರಿಯ ನಾಯಕ ಜೆ ಪಿ ಅಗರ್​ವಾಲ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಜಿ 20 ಶೃಂಗಸಭೆಗಾಗಿ ಸಂಚಾರ ನಿರ್ಬಂಧವು ನಿಯಂತ್ರಣ ಹಾಗೂ ನಿರ್ವಹಿಸಿದ ಪ್ರವೃತ್ತಿಯನ್ನು ತೋರಿಸಿದೆ ಎಂದು ತಿಳಿಸಿದ್ದಾರೆ.

''ಇದು ನಿಯಂತ್ರಣಕ್ಕೆ ಆದ್ಯತೆ ತೋರಿಸುತ್ತಿದೆ, ಆಡಳಿತಕ್ಕೆ ಅಲ್ಲ. ನಗರವನ್ನು ಮುಚ್ಚುತ್ತಿರುವುದು ಅಭದ್ರತೆ ತೋರಿಸುತ್ತಿದೆ. ನಾವು ಈ ರೀತಿಯ ಕ್ರಮಗಳನ್ನು ಹಿಂದೆ ನೋಡಿರಲಿಲ್ಲ. ಮೂರು ದಿನಗಳಿಂದ ಕಚೇರಿಗಳು ಮುಚ್ಚಿದ್ದು, ಜನರು ಕೆಲಸಗಳಿಗೆ ತೆರಳಲು ಸಂಕಷ್ಟ ಪಡುತ್ತಿದ್ದಾರೆ. ಸಂಚಾರ ನಿರ್ಬಂಧಗಳಿಂದ ತೊಂದರೆಗೊಳಗಾದ ಜನರು ದೂರು ನೀಡುತ್ತಿದ್ದಾರೆ. ಒಂದು ವೇಳೆ, ಜನರು ದೆಹಲಿಯನ್ನು ಬಿಟ್ಟು ತೆರಳಿದರೆ, ಮತ್ತೆ ರಾಷ್ಟ ರಾಜಧಾನಿಗೆ ಪ್ರವೇಶಿಸುವುದು ಕಷ್ಟಕರವಾಗಲಿದೆ. ನಾನು ಸಂಸದನಾಗಿದ್ದ ವರ್ಷಗಳಲ್ಲಿ ಆಫ್ರಿಕನ್ ರಾಷ್ಟ್ರಗಳ ಸಮಾವೇಶದಂತಹ ಹಲವಾರು ಅಂತಾರಾಷ್ಟ್ರೀಯ ಕಾರ್ಯಕ್ರಮಗಳು ದೆಹಲಿಯಲ್ಲಿ ನಡೆದಿವೆ. ಯುನೈಟೆಡ್​ ಸ್ಟೇಟ್ಸ್​​ನ ಅಧ್ಯಕ್ಷ ಬರಾಕ್ ಒಬಮಾ ಅವರ ಭೇಟಿ, ಅವರಿಗಿಂತಲೂ ಮುಂಚಿತವಾಗಿ ಇದ್ದ ಅಮೆರಿಕ​ ಪ್ರೆಸಿಡೆಂಟ್​ ಬಿಲ್​​ ಕ್ಲಿಂಟನ್​ ಅವರು ಇಲ್ಲಿಗೆ​ ಭೇಟಿ ನೀಡಿದ್ದಾರೆ. 1983ರಲ್ಲಿ NAM ಶೃಂಗಸಭೆಯು ದೆಹಲಿಯಲ್ಲಿ ನಡೆದಿದೆ. ಇದು ಜಿ- 20 ಶೃಂಗಸಭೆಗಿಂತ ದೊಡ್ಡದಾಗಿತ್ತು'' ಎಂದು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಅಖಿಲ ಭಾರತ ಕಾಂಗ್ರೆಸ್​ ಕಮಿಟಿಯ ಕಾರ್ಯಾಧ್ಯಕ್ಷ ಅಭಿಷೇಕ್ ದತ್​ ಅವರ ಪ್ರಕಾರ, ಈ ರೀತಿಯ ಸಂಚಾರ ನಿರ್ಬಂದಗಳನ್ನು ವಿಧಿಸುವುದು ಎಲ್ಲೋ ಒಂದು ಕಡೆ ಸರ್ಕಾರ ಹಾಗೂ ನಗರವಾಸಿಗಳ ನಡುವಿನ ನಂಬಿಕೆಯ ಕೊರತೆ ತೋರಿಸುತ್ತದೆ ಎಂದು ಹೇಳಿದ್ದಾರೆ. ಸರ್ಕಾರ ಏನೇ ನಿರ್ಧಾರಗಳನ್ನು ತೆಗೆದುಕೊಂಡರೂ ಕೂಡಾ ನಾವು ಅವರೊಂದಿಗೆ ಇರಲಿದ್ದೇವೆ. ಇವು ಸಂಚಾರ ನಿರ್ಬಂಧಗಳಾಗಿವೆ. ಆದರೆ, ಕೆಲವು ಕಡೆ ಪಾಸ್​ಗೂ ಅವಕಾಶವಿದೆ. ಆದರೆ ಎಲ್ಲೋ ಒಂದು ಕಡೆ ಜನರು ಸರ್ಕಾರದ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂದೆನಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯಾರೊಬ್ಬರು ಕೂಡಾ ಬಂದು ಸಮಸ್ಯೆ ಸೃಷ್ಠಿಸುವುದಿಲ್ಲ. ಇಂತಹ ವಿಶೇಷ ಕಾರ್ಯಕ್ರಮಗಳಲ್ಲಿ ಜನರು ಸರಿಯಾಗಿ ವರ್ತಿಸುತ್ತಾರೆ. ಉದಾಹರಣೆಗೆ, ಇಂದು ನಾವು ನವದೆಹಲಿಯ ಮುನ್ಸಿಪಾಲ್​ ಕಾರ್ಪೋರೇಷನ್​​ನ ಪ್ರದೇಶದಲ್ಲಿ ಪಾದಯಾತ್ರೆ ಹಮ್ಮಿಕೊಂಡಿದ್ದೆವು. ಆದರೆ, ನಾವು ಈ ಕಾರ್ಯಕ್ರಮವನ್ನು ಮುಂದೂಡಿದ್ದೇವೆ. ಅಲ್ಲದೇ ನಮ್ಮ ರಾಜ್ಯ ಘಟಕದ ಮುಖ್ಯಸ್ಥರು ಇವತ್ತು ತಮ್ಮ ಅಧಿಕಾರವನ್ನು ಪಡೆಯಬೇಕಿತ್ತು. ಆದರೆ, ಇದನ್ನೂ ಕೂಡಾ ಮುಂದೂಡಿದ್ದೇವೆ. ಕಾರಣ, ಈ ಬೃಹತ್​ ಕಾರ್ಯಕ್ರಮಕ್ಕೆ ಗೌರವ ಸಲ್ಲಿಸುವುದಾಗಿದೆ ಎಂದಿದ್ದಾರೆ.

2020ರಲ್ಲಿ ಯುಎಸ್​ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ದೆಹಲಿಗೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡು ಮಾತನಾಡಿದ ಎಐಸಿಸಿ ನಾಯಕ, ಭಾರತಕ್ಕೆ ಟ್ರಂಪ್ ಭೇಟಿ ನೀಡಿದ ಸಂದರ್ಭದಲ್ಲಿ ಈ ರೀತಿಯ ನಿರ್ಬಂಧಗಳಿತ್ತು ಎಂದು ನಾನು ಭಾವಿಸುವುದಿಲ್ಲ. ನಗರದಲ್ಲಿ ಗಲಭೆಗಳು ನಡೆದರೆ ಅದು ಗುಪ್ತಚರದ ವೈಫಲ್ಯಗಳನ್ನು ಸಾಬೀತುಪಡಿಸುತ್ತದೆ. ಸರಿಯಾದ ಮೂಲಸೌಕರ್ಯಗಳಿಲ್ಲದ ಸಣ್ಣ ನಗರದಲ್ಲಿ ಈ ರೀತಿಯ ನಿರ್ಬಂಧ ಅರ್ಥವಾಗುತ್ತದೆ. ಆದರೆ ದೆಹಲಿಯಂತಹ ದೊಡ್ಡ ನಗರದಲ್ಲಿ ಇಂತಹ ನಿಯಂತ್ರಣವನ್ನು ನಾನು ನೋಡಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: G20 Summit: ದೆಹಲಿಯ ಪ್ರಗತಿ ಮೈದಾನದಲ್ಲಿ ಸ್ಥಾಪಿಸಲಾದ ನಟರಾಜ ಪ್ರತಿಮೆ ತಮಿಳುನಾಡು ಕಲೆಯ ಹೆಮ್ಮೆ; ಶಿಲ್ಪಿ ಶ್ರೀಕಂಠ ಸ್ತಪತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.