ETV Bharat / bharat

ಪ್ರಾಕೃತಿಕ ಬಿಕ್ಕಟ್ಟು ನಿರ್ವಹಣೆಗೆ ಬೇಕಿದೆ ಮತ್ತಷ್ಟು ಸಿದ್ಧತೆ: ಸಿಲ್ಕ್ಯಾರಾ ದುರಂತದಿಂದ ಕಲಿಯಬೇಕಿದೆ ಪಾಠ - ಪ್ರಾಕೃತಿಕ ವಿಪತ್ತು ನಿರ್ವಹಣಾ

ಸಿಲ್ಕ್ಯಾರಾ ದುರಂತವು ಪ್ರಾಕೃತಿಕ ದುರಂತಗಳನ್ನು ನಿರ್ವಹಿಸಲು ದೇಶ ಎಷ್ಟು ಸನ್ನದ್ಧವಾಗಿದೆ ಎಂಬ ಬಗ್ಗೆ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

Uttarkashi tunnel disaster  raises many questions

author img

By ETV Bharat Karnataka Team

Published : Nov 28, 2023, 7:46 PM IST

ಹೈದರಾಬಾದ್​: ಎತ್ತರದ ಉಪ ಹಿಮಾಲಯನ್ ಜಿಲ್ಲೆಯಲ್ಲಿ ಸುರಂಗದಲ್ಲಿ ಸಿಕ್ಕಿಬಿದ್ದಿರುವ ಕಾರ್ಮಿಕರ ರಕ್ಷಣೆಗೆ ತಜ್ಞರು ಹರಸಾಹಸ ಪಡುತ್ತಿರುವ ಈ ಸಮಯದಲ್ಲಿ ಈ ರೀತಿಯ ಬಿಕ್ಕಟ್ಟು ನಿಭಾಯಿಸಲು ದೇಶದ ಪ್ರಸ್ತುತ ವಿಪತ್ತು ನಿರ್ವಹಣಾ ವ್ಯವಸ್ಥೆ ಎಷ್ಟು ಸುಸಜ್ಜಿತವಾಗಿದೆ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಏಳು ರಾಜ್ಯಗಳ ಸುಮಾರು ನಲವತ್ತೊಂದು ಸುರಂಗ ಕಾರ್ಮಿಕರ ಜೀವ ಉಳಿಸಲು ಹದಿಮೂರು ದಿನಗಳಿಂದ ಪ್ರಯತ್ನಗಳು ನಡೆಯುತ್ತಿರುವುದು ಇಲ್ಲಿ ಗಮನಾರ್ಹ.

ಉನ್ನತ ತಜ್ಞರು, ಕೇಂದ್ರ ಸಚಿವರು ಮತ್ತು ರಾಜ್ಯದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ನವೆಂಬರ್ 12 ರಿಂದ ಕಾರ್ಮಿಕರು ಭಾರಿ ಅವಶೇಷಗಳ ಅಡಿ ಸಿಲುಕಿರುವ ಸಿಲ್ಕ್ಯಾರಾ ತಿರುವು ಸುರಂಗವನ್ನು ಎಂಜಿನ್ ಸಂಗ್ರಹಣೆ ಮತ್ತು ನಿರ್ಮಾಣ (ಇಪಿಸಿ) ಮೋಡ್ ಅಡಿ ನಿರ್ಮಿಸಲಾಗುತ್ತಿದೆ ಹಾಗೂ ಇದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಧನಸಹಾಯದ ಮಹತ್ವಾಕಾಂಕ್ಷೆಯ ಚಾರ್ ಧಾಮ್ ಯೋಜನೆಯ ಭಾಗವಾಗಿದೆ. ಇಡೀ ದೇಶವೇ ಈಗ ಸಂಕಷ್ಟದಲ್ಲಿರುವ ಬಡ ಕಾರ್ಮಿಕರನ್ನು ರಕ್ಷಿಸಲು ಕಾತರದಿಂದ ಕಾಯುತ್ತಿದೆ.

ಏತನ್ಮಧ್ಯೆ ಈ ಅವಘಡವು ಮಾನವ ನಿರ್ಮಿತ ಮತ್ತು ನೈಸರ್ಗಿಕ ವಿಪತ್ತುಗಳು ಮತ್ತು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಪ್ರತ್ಯೇಕವಾಗಿ ನಿರ್ವಹಿಸುವ ಪ್ರಾಕೃತಿಕ ವಿಪತ್ತು ನಿರ್ವಹಣಾ ಸಂಸ್ಥೆಯೊಂದನ್ನು ಸ್ಥಾಪಿಸುವ ತುರ್ತು ಅಗತ್ಯವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಪ್ರಸ್ತುತ ರಾಜ್ಯಗಳಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಇಲಾಖೆಗಳು ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್​ಡಿಆರ್​ಎಫ್) ನಂಥ ಮಾನವಶಕ್ತಿ ಪಡೆಗಳಿವೆ.

ಆದರೆ ಈ ಪಡೆಗಳು ಅಗತ್ಯವಿದ್ದಾಗ ಮಾತ್ರ ಕಾರ್ಯಾಚರಣೆ ಪ್ರಾರಂಭಿಸುತ್ತವೆ ಮತ್ತು ಸಂಬಂಧಿತ ಇಲಾಖೆಗಳ ಕಾರ್ಯನಿರ್ವಹಣೆಯು ವಿವಿಧ ಅಂಶಗಳಿಂದ ಅಡೆತಡೆಗಳನ್ನು ಎದುರಿಸುವಂತಾಗುತ್ತದೆ. ಗರ್ವಾಲ್ ಹಿಮಾಲಯ ಪ್ರದೇಶಗಳು ತುಂಬಾ ದುರ್ಬಲವಾಗಿದ್ದು, ದೇಶದ ಭೂಕಂಪನ ನಕ್ಷೆಯ ಐದನೇ ವಲಯದ ಅಡಿ ಬರುತ್ತವೆ ಎಂಬುದು ತಿಳಿದಿದೆ. ಆದ್ದರಿಂದ ಈ ಹಿಂದೆ ದೊಡ್ಡ ಮತ್ತು ಸಣ್ಣ ಪ್ರಮಾಣದ ಭೂಕಂಪಗಳು ಈ ಪ್ರದೇಶಕ್ಕೆ ಅಪ್ಪಳಿಸಿವೆ. ವಿಶೇಷವಾಗಿ ಮಳೆಗಾಲದಲ್ಲಿ ಸಂಭವಿಸುವ ಭೂಕುಸಿತಗಳು ಇಡೀ ಪ್ರದೇಶದ ಜನಸಾಮಾನ್ಯರ ಜೀವನ ಅಸ್ತವ್ಯಸ್ತಗೊಳಿಸಿವೆ. ಕಳೆದ ಶತಮಾನದಲ್ಲಿ ಕನಿಷ್ಠ ಮೂರು ಪ್ರಮುಖ ಭೂಕಂಪಗಳು ಮತ್ತು ಹಲವಾರು ದೊಡ್ಡ ಭೂಕುಸಿತಗಳು ಇಡೀ ಪ್ರದೇಶದಲ್ಲಿ ಜೀವ ಮತ್ತು ಆಸ್ತಿಪಾಸ್ತಿಗೆ ಅಪಾರ ಹಾನಿಯನ್ನುಂಟು ಮಾಡಿವೆ. ಇತ್ತೀಚಿನ ಅಕ್ಟೋಬರ್ 1991 ಮತ್ತು 1998 ರ ಭೂಕಂಪಗಳಲ್ಲಿ ನೂರಾರು ಜನ ಪ್ರಾಣ ಕಳೆದುಕೊಂಡರು ಮತ್ತು ಸಾವಿರಾರು ಜನ ನಿರಾಶ್ರಿತರಾದರು.

ಈ ಎಲ್ಲದರ ಮಧ್ಯೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲೇಬೇಕಾಗಿರುವುದು ಪರಿಸ್ಥಿತಿಯ ಗಂಭೀರತೆ ಮತ್ತಷ್ಟು ಹೆಚ್ಚಿಸಿದೆ ಎಂಬುದು ಸತ್ಯ. ಗರ್ವಾಲ್ ಹಿಮಾಲಯದಿಂದ ಹೊರಹೊಮ್ಮುವ ಎರಡು ಪ್ರಮುಖ ನದಿಗಳಾದ ಗಂಗಾ ಮತ್ತು ಯಮುನಾ ಜಲವಿದ್ಯುತ್ ಉತ್ಪಾದನೆಗೆ ಬಳಸಿಕೊಳ್ಳಲು ಯೋಜನೆ ರೂಪಿಸಲಾಗಿದೆ. ದಶಕಗಳಿಂದ, ಜಲವಿದ್ಯುತ್ ಅಣೆಕಟ್ಟುಗಳನ್ನು ಸ್ಥಾಪಿಸಲು ದುರ್ಬಲವಾದ ಬೆಟ್ಟದ ಇಳಿಜಾರುಗಳನ್ನು ಕತ್ತರಿಸಲು ನೂರಾರು ಸುರಂಗಗಳನ್ನು ನಿರ್ಮಿಸಲಾಗಿದೆ. ದಶಕಗಳ ಹಿಂದೆ ಕೇಂದ್ರ ಸರ್ಕಾರ ಪ್ರಾರಂಭಿಸಿದ 2400 ಮೆಗಾವ್ಯಾಟ್ ತೆಹ್ರಿ ಅಣೆಕಟ್ಟು ಯೋಜನೆಯ ಕಾರಣದಿಂದ ಸಾವಿರಾರು ಜನ ಸ್ಥಳಾಂತರಗೊಳ್ಳಬೇಕಾಯಿತು ಮತ್ತು ಇಡೀ ಗಿರಿಧಾಮ ನೀರಿನಲ್ಲಿ ಮುಳುಗುವಂತಾಯಿತು.

ಇದಲ್ಲದೇ ಕೇಂದ್ರ ರೈಲ್ವೆ ಸಚಿವಾಲಯ ಕೈಗೊಂಡಿರುವ ಚಾರ್ಧಾಮ್ ರೈಲು ಯೋಜನೆಯಡಿ ಈ ಹಿಂದೆ 61 ಸುರಂಗಗಳು ಮತ್ತು ಹೊಸದಾಗಿ 59 ಸೇತುವೆಗಳನ್ನು ಸಹ ನಿರ್ಮಿಸಲಾಗಿದೆ. ಇದಲ್ಲದೇ, ಗರ್ವಾಲ್ ನ ದುರ್ಬಲ ಪರ್ವತಗಳಲ್ಲಿ ಬಂಡೆ ಕತ್ತರಿಸುವ ಕೆಲಸವೂ ಪ್ರಗತಿಯಲ್ಲಿದೆ. ರೈಲ್ವೆ ಸುರಂಗಗಳ ಜೊತೆಗೆ, ಬೆಟ್ಟಗಳನ್ನು ಕೊರೆಯುವ ಮೂಲಕ ಸುಮಾರು 750 ಕಿ.ಮೀ ಉದ್ದದ ಸುರಂಗಗಳು ಸಹ ಆ ಪ್ರದೇಶದಲ್ಲಿ ಅಸ್ತಿತ್ವಕ್ಕೆ ಬಂದಿವೆ ಎಂದು ಹೇಳಲಾಗಿದೆ.

ಜೋಶಿಮಠ ಮುಳುಗಲು ಕಾರಣ ಏನು?: ಕೆಲ ತಿಂಗಳ ಹಿಂದೆ ಚಮೋಲಿ ಜಿಲ್ಲೆಯ ಜೋಶಿಮಠ ಪಟ್ಟಣ ಮುಳುಗಲು ರಾಷ್ಟ್ರೀಯ ಥರ್ಮಲ್ ಪವರ್ ಕಾರ್ಪೊರೇಷನ್ (ಎನ್​ಟಿಪಿಸಿ) ಪ್ರಾರಂಭಿಸಿದ 300 ಮೆಗಾವ್ಯಾಟ್ ವಿಷ್ಣುಪ್ರಯಾಗ್ ಜಲವಿದ್ಯುತ್ ಯೋಜನೆಗಾಗಿ 12 ಕಿ.ಮೀ ಉದ್ದದ ಸುರಂಗವೇ ಕಾರಣವಾಗಿತ್ತು ಎಂಬುದು ಗಮನಾರ್ಹ. ಇಲ್ಲಿನ ವಾಡಿಯಾ ಇನ್​ಸ್ಟಿಟ್ಯೂಟ್ ಆಫ್ ಹಿಮಾಲಯನ್ ಜಿಯಾಲಜಿಯ (ಡಬ್ಲ್ಯುಐಎಚ್​ಜಿ) ಮಾಜಿ ವಿಜ್ಞಾನಿಗಳಾದ ಡಾ.ಎನ್.ಎಸ್. ವಿರ್ಡಿ ಮತ್ತು ಡಾ.ಎ.ಕೆ. ಮಹಾಜನ್ ಅವರು ಗಂಗಾ ಜಲಾನಯನ ಪ್ರದೇಶವೊಂದರಲ್ಲೇ ಜಲವಿದ್ಯುತ್ ಯೋಜನೆಗಳಿಗಾಗಿ ಸುಮಾರು 150 ಕಿ.ಮೀ ಸುರಂಗ ನಿರ್ಮಾಣ ಪ್ರಸ್ತಾವನೆಯಲ್ಲಿವೆ ಎಂದು ಹೇಳಿದರು. ಇವುಗಳಲ್ಲಿ ಕೆಲವು ಈಗಾಗಲೇ ನಿರ್ಮಿಸಲ್ಪಟ್ಟಿವೆ ಮತ್ತು ಕೆಲವು ನಿರ್ಮಾಣ ಹಂತದಲ್ಲಿವೆ.

ಹೀಗಾಗಿ ಇಂತಹ ವಿವೇಚನಾರಹಿತ ಸ್ಫೋಟಗಳು ಎಷ್ಟರ ಮಟ್ಟಿಗೆ ಸರಿ ಮತ್ತು ಅಂಥ ಚಟುವಟಿಕೆಗಳು ಉಪ ಹಿಮಾಲಯ ಪ್ರದೇಶದ ಪರಿಸರ ವ್ಯವಸ್ಥೆಯ ಮೇಲೆ ಯಾವೆಲ್ಲ ಪರಿಣಾಮಗಳನ್ನು ಬೀರುತ್ತದೆ ಎಂಬುದರ ಪರಿಶೀಲನೆ ಅಗತ್ಯವಾಗಿದೆ. ಈಗಾಗಲೇ ಸ್ಥಳೀಯ ಭೌಗೋಳಿಕ ವಿನ್ಯಾಸ, ಅರಣ್ಯಗಳು ಮತ್ತು ಸ್ಥಳೀಯ ವನ್ಯಜೀವಿಗಳಿಗೆ ಅತ್ಯಧಿಕ ಹಾನಿಯಾಗಿದೆ ಎಂದು ಐಯುಸಿಎನ್ (ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್) ವರದಿ ತಿಳಿಸಿದೆ. ಇಂಥ ಬೆಳವಣಿಗೆಗಳನ್ನು ಹಗುರವಾಗಿ ತೆಗೆದುಕೊಳ್ಳಲಾಗುವುದಿಲ್ಲ ಮತ್ತು ಹದಗೆಡುತ್ತಿರುವ ಪರಿಸ್ಥಿತಿಯ ಗಂಭೀರತೆಯ ಬಗ್ಗೆ ಯೋಚಿಸುವ ತುರ್ತು ಅವಶ್ಯಕತೆಯಿದೆ.

ತಾಂತ್ರಿಕ ಸಮೀಕ್ಷೆಗೆ ಇದು ಸೂಕ್ತ ಕಾಲ: ಎಂಜಿನಿಯರ್​ಗಳು ಮತ್ತು ಭೂಕಂಪ ವಿಜ್ಞಾನಿಗಳನ್ನು ಒಳಗೊಂಡ ತಜ್ಞರ ತಂಡವು ಇಡೀ ಉತ್ತರಾಖಂಡದ ತಾಂತ್ರಿಕ ಸಮೀಕ್ಷೆ ಕೈಗೊಳ್ಳಲು ಇದು ಸೂಕ್ತ ಸಮಯ. 1991 ರ ಅಕ್ಟೋಬರ್ 22 ರಂದು ಉತ್ತರಕಾಶಿ ಜಿಲ್ಲೆಯಲ್ಲಿ ಸಂಭವಿಸಿದ ಮೆಗಾ ಭೂಕಂಪದ ನಂತರ, ಆಗಿನ ಪ್ರಧಾನಿ ನರಸಿಂಹ ರಾವ್ ಅವರು ಪ್ರಾಕೃತಿಕ ಸಮಸ್ಯೆ ಅರ್ಥಮಾಡಿಕೊಳ್ಳಲು ಇಡೀ ಪ್ರದೇಶದಲ್ಲಿ ಇಂಥ ಸಮೀಕ್ಷೆ ನಡೆಸಲಾಗುವುದು ಎಂದು ಭರವಸೆ ನೀಡಿದ್ದರು. ಆದಾಗ್ಯೂ, 3 ದಶಕಗಳ ನಂತರವೂ ಅಂಥ ಯಾವುದೇ ಸಮೀಕ್ಷೆ ನಡೆದಿಲ್ಲ.

ಲೇಖನ : ಆರ್ ಪಿ ನೈಲ್ವಾಲ್

ಇದನ್ನೂ ಓದಿ : ಸ್ಪೀಚ್ ರೆಕಗ್ನಿಷನ್ ಸಾಫ್ಟ್​ವೇರ್ ಅಳವಡಿಸಿಕೊಳ್ಳಲಿದೆ ಯುಪಿ ವಿಧಾನಸಭೆ: ಟೆಂಡರ್ ಜಾರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.