ಮುಂಬೈ: ಇಲ್ಲಿನ ಬಿಎಂಸಿ ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಯೊಬ್ಬರ ಕೆನ್ನೆಗೆ ಇಲಿ ಕಚ್ಚಿದೆ. ಇನ್ನು ಘಟನೆಯಿಂದ ಆಕ್ರೋಶಗೊಂಡ ರೋಗಿಯ ಕುಟುಂಬಸ್ಥರು ಆ್ಪತ್ರೆಯ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ. 24 ವರ್ಷದ ಶ್ರೀನಿವಾಸ್ ಯಲ್ಲಪ್ಪ ಎಂಬವರು ಮೂರು ದಿನಗಳ ಹಿಂದೆ ಯಕೃತ್ತಿನ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದೆ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ಅವರಿಗೆ ಇಲಿ ಕಚ್ಚಿದೆ.
ಮಂಗಳವಾರದಂದು ಶ್ರೀನಿವಾಸ್ ಅವರ ಸಹೋದರಿ ಎಡಗಣ್ಣಿನ ಕೆಳಗೆ ಬ್ಯಾಂಡೇಜ್ ನೋಡಿದ್ದಾರೆ. ಈ ವೇಳೆ ಇಲಿ ಕಚ್ಚಿರುವ ಬಗ್ಗೆ ಕುಟುಂಬಕ್ಕೆ ಮಾಹಿತಿ ಲಭಿಸಿದೆ. ತಕ್ಷಣವೇ ಆಕ್ರೋಶಗೊಂಡ ಸಂಬಂಧಿಕರು ಆಕ್ರೋಶ ಹೊರಹಾಕಿದ್ದಾರೆ. ಬಳಿಕ ವೈದ್ಯರು, ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮಾತುಕತೆ ನಡೆಸಿದರೂ ಪ್ರಯೋಜನವಾಗಲಿಲ್ಲ. ಇನ್ನು ಐಸಿಯು ವಿಭಾಗ ನೆಲ ಮಹಡಿಯಲ್ಲಿರುವುದರಿಂದ ಸಿಬ್ಬಂದಿಯೊಬ್ಬರು ಬಾಗಿಲು ತೆರೆದಾಗ ಇಲಿ ಒಳಗೆ ನುಸುಳಿರಬಹುದು ಎಂದು ಮೇಯರ್ ಕಿಶೋರಿ ಪೆಡ್ನೆಕರ್ ಹೇಳಿದ್ದಾರೆ.
ಇದನ್ನು ಓದಿ: ಸರ್ಕಾರಿ ಸಿಬ್ಬಂದಿ ಲಸಿಕೆ ಪಡೆಯದಿದ್ದರೆ No Salary: ಡಿಸಿ ಖಡಕ್ ವಾರ್ನಿಂಗ್
ಮುಂಬೈನ ಆಮ್ ಆದ್ಮಿ ಪಕ್ಷ ಘಟನೆಯನ್ನು ಖಂಡಿಸಿದ್ದು, ರೋಗಿಗಳನ್ನು ರಕ್ಷಿಸುವಲ್ಲಿ ಬಿಎಂಸಿ ವಿಫಲವಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಎಂದು ಒತ್ತಾಯಿಸಿದೆ.