ETV Bharat / bharat

Watch - ಹುತಾತ್ಮ ಯೋಧ ಆಂಧ್ರದ ಸಾಯಿ ತೇಜಾ ಅಂತ್ಯಕ್ರಿಯೆಯಲ್ಲಿ ಸಹಸ್ರಾರು ಮಂದಿ..

author img

By

Published : Dec 12, 2021, 7:27 PM IST

ಹೆಲಿಕಾಪ್ಟರ್ ಅಪಘಾತದಲ್ಲಿ ಹುತಾತ್ಮರಾದ ಲ್ಯಾನ್ಸ್ ನಾಯಕ್ ಸಾಯಿ ತೇಜಾ ಅವರ ಅಂತ್ಯಕ್ರಿಯೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಈಗುವ ರೇಗಡ ಗ್ರಾಮದಲ್ಲಿ ನೆರವೇರಿದೆ. ಅವರ ಅಂತಿಮ ದರ್ಶನ ಪಡೆಯಲು ವಿವಿಧ ಸ್ಥಳಗಳಿಂದ ಸಾವಿರಾರು ಜನರು ಆಗಮಿಸಿದ್ದರು..

Funeral of  Lance Naik Saiteja held in Chittoor
ಸಾಯಿ ತೇಜಾ ಅಂತ್ಯಕ್ರಿಯೆಯಲ್ಲಿ ಸಹಸ್ರಾರು ಮಂದಿ

ಚಿತ್ತೂರು (ಆಂಧ್ರಪ್ರದೇಶ): ಕೂನೂರು ಹೆಲಿಕಾಪ್ಟರ್ ಅಪಘಾತದಲ್ಲಿ ಹುತಾತ್ಮರಾದ ಲ್ಯಾನ್ಸ್ ನಾಯಕ್ ಸಾಯಿ ತೇಜಾ ಅವರ ಅಂತ್ಯಕ್ರಿಯೆ ಇಂದು ಅವರ ಸ್ವಗ್ರಾಮವಾದ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಈಗುವ ರೇಗಡ ಗ್ರಾಮದಲ್ಲಿ ನೆರವೇರಿದೆ.

ಸಾಯಿ ತೇಜಾ ಅವರಿಗೆ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಸೇನಾಧಿಕಾರಿಗಳು ಅಂತಿಮ ನಮನ ಸಲ್ಲಿಸಿ ಪಾರ್ಥಿವ ಶರೀರವನ್ನು ಇಂದು ಬೆಳಗ್ಗೆ ಚಿತ್ತೂರಿಗೆ ರವಾನಿಸಿದ್ದರು. ಸಾಯಿ ತೇಜಾರ ಅಂತಿಮ ದರ್ಶನ ಪಡೆಯಲು ವಿವಿಧ ಸ್ಥಳಗಳಿಂದ ಸಾವಿರಾರು ಜನರು ಆಗಮಿಸಿದ್ದರು. ಸಕಲ ಸೇನಾ ಗೌರವಗಳೊಂದಿಗೆ ತೇಜಾ​ರ ಅಂತಿಮ ವಿಧಿವಿಧಾನಗಳನ್ನು ನಡೆಸಲಾಯಿತು.

ಕೂನೂರು ಹೆಲಿಕಾಪ್ಟರ್​ ಅಪಘಾತ

ಡಿಸೆಂಬರ್ 8ರಂದು ತಮಿಳುನಾಡಿನ ಕೂನೂರಿನಲ್ಲಿ ಹೆಲಿಕಾಪ್ಟರ್ ಪತನಗೊಂಡು ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್​ ರಾವತ್, ಅವರ ಪತ್ನಿ ಮಧುಲಿಕಾ ಹಾಗೂ ಇತರ 11 ಮಂದಿ ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದರು.

ಇದನ್ನೂ ಓದಿ: ಕಾಪ್ಟರ್ ದುರಂತದಲ್ಲಿ ಹುತಾತ್ಮರಾದ ನಾಯಕ್ ಗುರುಸೇವಕ್ ಸಿಂಗ್​​ಗೆ ನೋವಿನ ವಿದಾಯ..

ಕೇವಲ 27 ವರ್ಷದ ಸಾಯಿ ತೇಜಾ ಅವರು ಬಿಪಿನ್​ ರಾವತ್ ಅವರ ವೈಯಕ್ತಿಕ ಭದ್ರತಾ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. 2012ರಲ್ಲಿ ಭಾರತೀಯ ಸೇನೆಯ ಬೆಂಗಳೂರು ರೆಜಿಮೆಂಟ್​​ಗೆ ಸೇರಿದ್ದ ಇವರಿಗೆ ಪತ್ನಿ ಹಾಗೂ ಮೂರು ಹಾಗೂ ಎರಡು ವರ್ಷದ ಇಬ್ಬರು ಮಕ್ಕಳಿದ್ದಾರೆ. ಇವರ ಕುಟುಂಬಕ್ಕೆ ಆಂಧ್ರ ಸರ್ಕಾರ 50 ಲಕ್ಷ ರೂ. ಪರಿಹಾರ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.