ನವದೆಹಲಿ: ಕೋವಿಡ್ ಪ್ರಕರಣಗಳ ಭಾರಿ ಏರಿಕೆ ಮಧ್ಯೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಾಗ್ದಾಳಿ ಮಾಡಿದ್ದಾರೆ.
ಕೆಲವು ಆಸ್ಪತ್ರೆಗಳು ಹಾಸಿಗೆಗಳು ಮತ್ತು ವೆಂಟಿಲೇಟರ್‌ಗಳ ಕೊರತೆ ವರದಿ ಮಾಡಿದ ನಂತರ ರಾಹುಲ್ ಗಾಂಧಿ ಗುರುವಾರದಿಂದ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿದ್ದು, "ಯಾವುದೇ ಪರೀಕ್ಷೆ ಇಲ್ಲ, ಆಸ್ಪತ್ರೆಯಲ್ಲಿ ಹಾಸಿಗೆ ಇಲ್ಲ, ವೆಂಟಿಲೇಟರ್ ಇಲ್ಲ, ಆಮ್ಲಜನಕವಿಲ್ಲ, ಲಸಿಕೆ ಇಲ್ಲ, ಕೇವಲ ಹಬ್ಬದ ನೆಪ. ಈ ಬಗ್ಗೆ ಪ್ರಧಾನಿ ಕಾಳಜಿ ವಹಿಸುತ್ತಾರೆಯೇ?" ಎಂದು ಕಾಲೆಳೆದಿದ್ದಾರೆ.
ದೇಶವು ಸತತ ಮೂರನೇ ದಿನ ಎರಡು ಲಕ್ಷ ಪ್ರಕರಣಗಳನ್ನು ದಾಖಲಿಸಿದೆ. ಏತನ್ಮಧ್ಯೆ, ಶುಕ್ರವಾರ ದೈನಂದಿನ ಸಕ್ರಿಯ ಪ್ರಕರಣಗಳು 16,79,740 ಕ್ಕೆ ಏರಿದೆ.