ETV Bharat / bharat

ಇಸುದನ್ ಗಧ್ವಿ.. ನ್ಯೂಸ್​ ಚಾನೆಲ್​ನ ಜನಪ್ರಿಯತೆಯಿಂದ ಗುಜರಾತ್​ ಸಿಎಂ ಅಭ್ಯರ್ಥಿಯವರೆಗೆ...

ಆಮ್​ ಆದ್ಮಿ ಪಕ್ಷದ ಗುಜರಾತ್​ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ಇಸುದನ್ ಗಧ್ವಿ ಮೂಲತಃ ಒಬ್ಬ ಪತ್ರಕರ್ತರು. ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಖ್ಯಾತಿ ಪಡೆದು, ಗುಜರಾತಿ ಚಾನೆಲ್​ನ ಜನಪ್ರಿಯ ನಿರೂಪಕರಾಗಿದ್ದರು.

from-scribe-to-aaps-gujarat-cm-candidate-isudan-man-of-the-moment
ಇಸುದನ್ ಗಧ್ವಿ.. ನ್ಯೂಸ್​ ಚಾನೆಲ್​ನ ಜನಪ್ರಿಯತೆಯಿಂದ ಗುಜರಾತ್​ ಸಿಎಂ ಅಭ್ಯರ್ಥಿಯವರೆಗೆ
author img

By

Published : Nov 4, 2022, 6:30 PM IST

ಅಹಮದಾಬಾದ್​ (ಗುಜರಾತ್​): ದೆಹಲಿ, ಪಂಜಾಬ್​ನಲ್ಲಿ ಅಧಿಕಾರ ಗದ್ದುಗೆ ಹಿಡಿರುವ ಆಮ್​ ಆದ್ಮಿ ಪಕ್ಷವು ಈಗ ಗುಜರಾತ್​ನ ಮೇಲೂ ಕಣ್ಣಿಟ್ಟಿದೆ. ಎರಡೂವರೆ ದಶಕಗಳಿಂದಲೂ ಬಿಜೆಪಿ ಆಡಳಿತ ನಡೆಸುತ್ತಿರುವ ಗುಜರಾತ್​ನಲ್ಲಿ ಕಮಾಲ್​ ಮಾಡುವ ಹುಮಸ್ಸಿನಲ್ಲಿದೆ. ಇದೇ ಹುಮ್ಮಸ್ಸಿನಲ್ಲಿ ಇಂದು ಪಕ್ಷದ ರಾಷ್ಟ್ರೀಯ ಸಂಚಾಲಕರಾದ ಅರವಿಂದ್​ ಕೇಜ್ರಿವಾಲ್​ ಗುಜರಾತ್​ನ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಇಸುದನ್​ ಗಧ್ವಿ ಅವರನ್ನು ಘೋಷಿಸಿದ್ದಾರೆ.

ಗುಜರಾತ್​ನಲ್ಲಿ ಆಮ್​ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ರೇಸ್‌ನಲ್ಲಿ ಪ್ರಮುಖ ಮೂವರು ಇದ್ದರು. ಗುಜರಾತ್​ ರಾಜ್ಯ ಘಟಕದ ಅಧ್ಯಕ್ಷ ಗೋಪಾಲ್ ಇಟಾಲಿಯಾ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಸುದನ್ ಗಧ್ವಿ ಮತ್ತು ಪ್ರಧಾನ ಕಾರ್ಯದರ್ಶಿ ಮನೋಜ್ ಸೊರತಿಹ್ಯ ಹೆಸರು ಮುಂಚೂಣಿಯಲ್ಲಿದ್ದವು. ಇದರಲ್ಲಿ ಕೊನೆಗೆ ಇಸುದನ್ ಗಧ್ವಿ ಅವರನ್ನು ಪಕ್ಷದ ಸಿಎಂ ಅಭ್ಯರ್ಥಿ ಎಂದು ಕೇಜ್ರಿವಾಲ್​ ಪ್ರಕಟಿಸಿದ್ದಾರೆ.

ಯಾರು ಇಸುದನ್​ ಗಧ್ವಿ?: ಆಮ್​ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ಇಸುದನ್ ಗಧ್ವಿ ಮೂಲತಃ ಒಬ್ಬ ಪತ್ರಕರ್ತರು. ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಖ್ಯಾತಿ ಪಡೆದು, ಗುಜರಾತಿ ಚಾನೆಲ್​ನ ಜನಪ್ರಿಯ ನಿರೂಪಕರಾಗಿದ್ದರು. ಇದೀಗ ಇಸುದನ್ ಗಧ್ವಿ ಪತ್ರಿಕೋದ್ಯಮ ತ್ಯಜಿಸಿ ರಾಜಕೀಯಕ್ಕೆ ಧುಮುಕಿದ್ದಾರೆ.

ಯೋಜನಾ ಎಂಬ ಟಿವಿ ಕಾರ್ಯಕ್ರಮದಲ್ಲಿ ಗುಜರಾತಿನ ಡ್ಯಾಂಗ್ ಮತ್ತು ಕಪರಡಾ ತಾಲೂಕುಗಳಲ್ಲಿ ನಡೆದಿದ್ದ ಅಕ್ರಮ ಅರಣ್ಯನಾಶದ 150 ಕೋಟಿ ರೂ.ಗಳ ಹಗರಣವನ್ನು ಇಸುದನ್ ಗಧ್ವಿ ಹೊರಹಾಕಿದ್ದರು. 2015ರಲ್ಲಿ ವಿಟಿವಿ ಗುಜರಾತಿ ಚಾನೆಲ್​ನಲ್ಲಿ ಮಹಮಂತನ್ ಎಂಬ ಒಂದು ಗಂಟೆಯ ಪ್ರೈಮ್‌ಟೈಮ್‌ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. ಈ ಕಾರ್ಯಕ್ರಮ ಭಾರೀ ಜನಪ್ರಿಯತೆಯನ್ನು ಗಳಿಸಿತ್ತು.

ಇದನ್ನೂ ಓದಿ: ಗುಜರಾತ್ ವಿಧಾನಸಭೆ ಚುನಾವಣೆ: ಎಎಪಿ ಸಿಎಂ ಅಭ್ಯರ್ಥಿ ಘೋಷಿಸಿದ ಕೇಜ್ರಿವಾಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.