ETV Bharat / bharat

1998ರಿಂದಲೂ ಮಳೆಗಾಲದ 4 ತಿಂಗಳು ಗಿಳಿಗಳಿಗೆ ಆಹಾರ ನೀಡುತ್ತಿರುವ ಪಕ್ಷಿಪ್ರೇಮಿ ಕುಟುಂಬ

ಮಳೆಗಾಲದಲ್ಲಿ 4 ತಿಂಗಳು ಪಕ್ಷಿಗಳಿಗೆ ಆಹಾರ ಧಾನ್ಯಗಳ ಕೊರತೆ ಉಂಟಾಗುತ್ತದೆ. ಇದನ್ನು ಅರಿತುಕೊಂಡ ಗುಜರಾತ್​ನ ಪಕ್ಷಿ ಪ್ರೇಮಿ ಹರ್ಷುಖ್ ದೋಬ್ರಿಯಾ ಕುಟುಂಬವು 1998ರಿಂದಲೂ ಗಿಳಿಗಳಿಗೆ ಆಹಾರ ಧಾನ್ಯಗಳ ಒದಗಿಸುವ ವಿಶಿಷ್ಟ ಕಾರ್ಯದಲ್ಲಿ ತೊಡಗಿದೆ.

from-1998-a-bird-lover-giving-exceptional-service-to-indian-parrots
1998ರಿಂದಲೂ ಮಳೆಗಾಲದ 4 ತಿಂಗಳು ಗಿಳಿಗಳಿಗೆ ಆಹಾರ ನೀಡುತ್ತಿರುವ ಪಕ್ಷಿಪ್ರೇಮಿ ಕುಟುಂಬ...
author img

By

Published : Jul 22, 2022, 5:11 PM IST

ಜುನಾಗಢ (ಗುಜರಾತ್​): ಜುನಾಗಢದ ಕೇಶೋಡ್‌ನಲ್ಲಿ ಪಕ್ಷಿ ಪ್ರೇಮಿಯೊಬ್ಬರು 1998ರಿಂದಲೂ ಮಳೆಗಾಲದಲ್ಲಿ ಗಿಳಿಗಳಿಗೆ ವಿಶಿಷ್ಟ ಸೇವೆ ಸಲ್ಲಿಸುತ್ತಿದ್ದು, ಇಂದು ಅವರ ಮೂರನೇ ತಲೆಮಾರಿನವರು ಕೂಡ ಈ ಸೇವಾ ಕಾರ್ಯಕ್ಕೆ ಕೈಜೋಡಿಸಿದ್ದಾರೆ.

ಪಕ್ಷಿ ಪ್ರೇಮಿ ಹರ್ಷುಖ್ ದೋಬ್ರಿಯಾ ಎಂಬುವವರೇ ಮಳೆಗಾಲದ ನಾಲ್ಕು ತಿಂಗಳು ಕೂಡ ಗಿಳಿಗಳ ಆರೈಕೆಯಲ್ಲಿ ತೊಡಗಿರುತ್ತಾರೆ. ರೈತನ ಮಗನಾಗಿರುವ ಹರ್ಸುಖ್ ಸ್ವಲ್ಪ ಕೃಷಿ ಭೂಮಿ ಹೊಂದಿದ್ದಾರೆ. ಕಳೆದ 25 ವರ್ಷಗಳಿಂದ ಗಿಳಿಗಳ ಆಹಾರಕ್ಕಾಗಿಯೇ ಇಂತಿಷ್ಟು ಕಾಳುಗಳನ್ನು ಮೀಸಲಿಡುತ್ತಾರೆ.

ಮಳೆಗಾಲದ 4 ತಿಂಗಳ ಅವಧಿಯಲ್ಲಿ ಭಾರತೀಯ ಗಿಳಿಗಳಿಗೆ ಆಹಾರದ ಕೊರತೆ ಉಂಟಾಗದಂತೆ ನೋಡಿಕೊಳ್ಳುವ ಏಕೈಕೆ ಉದ್ದೇಶದಿಂದಲೇ ಈ ವಿಶಿಷ್ಟ ಸೇವೆ ಮಾಡುತ್ತಿದ್ದು, ಆಶ್ಚರ್ಯವೆಂದರೆ ಇವು ಸಾಕು ಗಿಳಿಗಳಲ್ಲ.

1998ರಿಂದಲೂ ಮಳೆಗಾಲದ 4 ತಿಂಗಳು ಗಿಳಿಗಳಿಗೆ ಆಹಾರ ನೀಡುತ್ತಿರುವ ಪಕ್ಷಿಪ್ರೇಮಿ ಕುಟುಂಬ...

ಎಲ್ಲವೂ ಕಾಡಿನ ಗಿಳಿಗಳು. ಮತ್ತೊಂದು ವಿಶೇಷ ಎಂದರೆ ಗಿಳಿಗಳ ಬಗ್ಗೆ ಸಾಕಷ್ಟು ಕಾಳಜಿ ಹೊಂದಿರುವ ಹರ್ಷುಖ್ ಕುಟುಂಬದವರು ಯಾವ ಗಿಣಿಯೊಂದಿಗೆ ಒಂದು ಫೋಟೋವನ್ನು ತೆಗೆಸಿಕೊಂಡಿಲ್ಲ. ಏಕೆಂದರೆ, ಗಿಳಿಗಳ ಹತ್ತಿರ ಹೋಗಾದ ಹಾಗೂ ಫೋಟೋ, ವಿಡಿಯೋ ತೆಗೆಯಲು ಯತ್ನಿಸುವಾಗ ಅವು ಹಾರಿಹೋಗುತ್ತವೆ. ಇದರಿಂದ ಆಹಾರದಿಂದ ವಂಚಿತವಾಗುತ್ತವೆ ಎಂಬ ಕಾಳಜಿ ಇವರದ್ದು.

ಮಳೆಗಾಲದಲ್ಲಿ 4 ತಿಂಗಳು ಪಕ್ಷಿಗಳಿಗೆ ಆಹಾರವನ್ನು ಹುಡುಕಲು ಮತ್ತು ಸೇವಿಸಲು ತುಂಬಾ ಕಷ್ಟವಾಗುತ್ತದೆ. ಜೊತೆಗೆ ಆಗ ತಾನೇ ಹೊಲಗಳಲ್ಲಿ ಬಿತ್ತನೆ ಮಾಡಲಾಗಿರುತ್ತದೆ. ಇದರಿಂದ ಪಕ್ಷಗಳಿಗೆ ಆಹಾರ ಧಾನ್ಯಗಳ ಮತ್ತು ಇತರ ಆಹಾರದ ತೀವ್ರ ಕೊರತೆ ಉಂಟಾಗುತ್ತದೆ. ಇದನ್ನು ಅರಿತುಕೊಂಡ ಹರ್ಷುಖ್ ದೋಬ್ರಿಯಾ ಕುಟುಂಬವು 1998ರಿಂದ ಗಿಳಿಗಳಿಗೆ ಆಹಾರ ಒದಗಿಸುವ ಕಾರ್ಯವನ್ನು ಆರಂಭಿಸಿದೆ.

ಆರಂಭದಲ್ಲಿ ಕೇವಲ 2 ಗಿಳಿಗಳು ಮಾತ್ರ ಬಂದು ರಾಗಿ ತಿನ್ನಲು ಪ್ರಾರಂಭಿಸಿದವು. ಇಂದು ಸಾವಿರಾರು ಗಿಳಿಗಳು ಆಹಾರಕ್ಕಾಗಿ ಇವರ ಮನೆಗೆ ಭೇಟಿ ನೀಡುತ್ತವೆ. ಪ್ರತಿ ಮಳೆಗಾಲದಲ್ಲಿ ಮುಂಜಾನೆ ಗಿಳಿಗಳೇ ಈ ಕುಟುಂಬದ ಅತಿಥಿಯಾಗುತ್ತವೆ.

ಮಳೆಗಾಲ ಮುಗಿದ ನಂತರ ಈ ಗಿಳಿಗಳು ಕ್ರಮೇಣ ತಾವೇ ಬರುವುದನ್ನು ನಿಲ್ಲಿಸುತ್ತವೆ. ಮತ್ತೆ ಮುಂಗಾರು ಆರಂಭವಾದಾಗ ಬೆಳಗಿನ ಜಾವ 5ರಿಂದ 6 ಗಂಟೆಗೆ ಹರ್ಷುಖ್ ದೋಬ್ರಿಯಾ ಮನೆಗೆ ಗಿಳಿಗಳು ಬಂದು ಬಿಡುತ್ತವೆ.

ಈ ಪದ್ಧತಿ ಆರಂಭವಾಗಿದ್ದು ಹೇಗೆ?: 1998ರಲ್ಲಿ ಹರ್ಷುಖ್ ಅಪಘಾತಕ್ಕೀಡಾಗಿದ್ದರು. ಆಗ ಸ್ನೇಹಿತಯೊಬ್ಬರು ರಾಗಿಗಳನ್ನು ನೀಡಿದ್ದರು. ಅಪಘಾತದಿಂದ ಮನೆಯಲ್ಲಿದ್ದ ಹರ್ಷುಖ್ ಮನೆಯಲ್ಲೇ ರಾಗಿ ತೆನೆಗಳನ್ನು ದಾರದಿಂದ ಕಟ್ಟಿ ಇಟ್ಟಿದ್ದರು. ಆಗ ಒಂದು ದಿನ ಗಿಳಿಯೊಂದು ಬಂದು ಅದನ್ನು ತಿನ್ನಲು ಬಯಸಿತ್ತು. ಹೀಗೆ ಅಂದಿನಿಂದ ಆರಂಭವಾದ ಗಿಳಿಗಳಿಗೆ ಆಹಾರ ನೀಡುವ ಪದ್ಧತಿ ಇಂದಿಗೂ ಮುಂದುವೆರೆದುಕೊಂಡು ಬಂದಿದೆ.

ಹರ್ಷುಖ್ ದೋಬ್ರಿಯಾ 25 ವರ್ಷಗಳ ಹಿಂದೆ ಪ್ರಾರಂಭಿಸಿದ ಈ ಗಿಳಿಗಳ ಆರೈಕೆಯನ್ನು ಮನೆಯ ಸದಸ್ಯರೆಲ್ಲರೂ ತುಂಬಾ ಉತ್ಸಾಹದಿಂದಲೇ ಕೈ ಜೋಡಿಸಿಕೊಂಡು ಬಂದಿದ್ದಾರೆ. ಹೀಗಾಗಿಯೇ 10 ಸಾವಿರಕ್ಕೂ ಹೆಚ್ಚು ಜೋಡಿ ಗಿಳಿಗಳು ಮತ್ತು ಮೈನಾಗಳು ಬೆಳಗಿನ ಉಪಾಹಾರಕ್ಕಾಗಿ ಇವರ ಮನೆಗೆ ಆಗಮಿಸುತ್ತವೆ. ಅಲ್ಲದೇ, ಗಿಳಿಗಳಿಗೆ ಮುಂಜಾನೆ ಆಹಾರ ನೀಡುತ್ತಿರುವುದನ್ನು ನೋಡಲೆಂದೇ ಸಾಕಷ್ಟು ಜನ ಕಿಕ್ಕಿರಿದು ಸೇರುತ್ತಾರೆ.

ಗಿಳಿಗಳಿಗೆ ದಿನಕ್ಕೆ 10 ಕೆಜಿಯಷ್ಟು ರಾಗಿ ಮತ್ತು ಕಡಲೆ ಕಾಳುಗಳನ್ನು ನೀಡುತ್ತಿದ್ದಾರೆ. ಅಲ್ಲದೇ, ಯಾರಾದರೂ ಮನೆಯಲ್ಲಿ ಪಂಜರದಲ್ಲಿ ಗಿಳಿಗಳನ್ನು ಇಟ್ಟಿದ್ದರೆ, ಅವುಗಳ ಬಿಡುಗಡೆ ಮಾಡಲು ಸಲಹೆ ನೀಡುತ್ತಾರೆ. ಹರ್ಷುಖ್ ದೋಬ್ರಿಯಾ ಸಲಹೆ ಮೇರೆಗೆ ಇದುವರೆಗೆ 27 ಮಂದಿ ತಮ್ಮ ಮನೆಗಳಲ್ಲಿ ಪಂಜರದಲ್ಲಿದ್ದ ಪಕ್ಷಿಗಳನ್ನು ಮುಕ್ತಗೊಳಿಸಿದ್ದಾರೆ.

ಇದನ್ನೂ ಓದಿ: ತಾಯಿ ಜೊತೆ 'ಸಂಸ್ಕೃತ ಶ್ಲೋಕ' ಹೇಳುವ ನವಜಾತ ಶಿಶು.. ನೆಟ್ಟಿಗರು ಫಿದಾ; ಕಲಿಯುಗದ ಅಭಿಮನ್ಯು ಎಂದ ಜನರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.