ETV Bharat / bharat

Friendship day Special: ಕೈಕಾಲು ಕಳೆದುಕೊಂಡ ಬಾಲಕನ ಸರ್ವಸ್ವವೂ ಆದ ಗೆಳೆಯರು! - ಕೈಕಾಲು ಕಳೆದುಕೊಂಡ ಬಾಲಕನ ಸರ್ವಸ್ವವೂ ಆದ ಗೆಳೆಯರು

Friendship day Special: ನೋವಿನಲ್ಲಿರುವ ಗೆಳೆಯನ ನಗುವನ್ನು ನೋಡಲು ಆ ಮಕ್ಕಳು ಬಯಸಿದ್ದರು. ತಡಮಾಡದೇ ತಮ್ಮ ವಿಚಾರವನ್ನು ಶಿಕ್ಷಕರೊಂದಿಗೆ ಹಂಚಿಕೊಂಡರು. ಎಲ್ಲರೂ ಸೇರಿ ಆ ಹುಡುಗನಿಗೆ ನಾವಿದ್ದೇವೆ ಎಂದು ಸಂದೇಶ ರವಾನಿಸಿದರು. ಏನಿದು ಘಟನೆ ಅಂತೀರಾ...?

Friendship day Special  FRIENDS MAGIC BRING SMILE ON A DISABLE BOY face  Telangana boy news  ಕೈಕಾಲುಗಳನ್ನು ಕಳೆದುಕೊಂಡ ಬಾಲಕಿನ ಸರ್ವಸ್ವ ಆದ ಗೆಳೆಯರು  ನಾವಿದ್ದೇವೆ ಎಂದು ಸಂದೇಶ  ಮಧುಕುಮಾರ್​ಗೆ ಕೈಕಾಲುಗಳಾದ ಗೆಳೆಯರು
ಕೈಕಾಲುಗಳನ್ನು ಕಳೆದುಕೊಂಡ ಬಾಲಕಿನ ಸರ್ವಸ್ವ ಆದ ಗೆಳೆಯರು
author img

By

Published : Aug 6, 2022, 1:52 PM IST

Updated : Aug 6, 2022, 2:15 PM IST

ಸಂಗಾರೆಡ್ಡಿ(ತೆಲಂಗಾಣ): ಗೆಳೆತನಕ್ಕೆ ನಿಜವಾದ ಅರ್ಥ ಈ ಮಕ್ಕಳಲ್ಲಿದೆ. ತನ್ನ ಗೆಳೆಯನೊಬ್ಬ ಅಂಗವಿಕಲನಾಗಿದ್ದಾನೆ ಎಂದು ತಿಳಿದ ಗೆಳೆಯರು ಅವನಿಗೆ ಕೈ-ಕಾಲುಗಳಾಗಿದ್ದಾರೆ. ಊಟ ಮಾಡಿಸುವುದು, ಜೊತೆಗೂಡಿ ಆಟವಾಡುವುದು, ಊರು ಸುತ್ತುವುದು, ಗಲಾಟೆ ಮಾಡುವುದು, ಶಾಲೆಗೆ ಹೋಗುವುದು, ಓದುವುದು ಹೀಗೆ ಆ ಗೆಳೆಯನಿಗೆ ಅಂಗವೈಕ್ಯಲತೆಯ ಕೊರಗು ಬಾರದಂತೆ ಆ ಗೆಳೆಯರು ನೋಡಿಕೊಳ್ಳುತ್ತಿದ್ದಾರೆ. ಇದು ಒಂದಲ್ಲ.. ಎರಡಲ್ಲ.. ಹಲವು ವರ್ಷಗಳಿಂದ ಇದೇ ರೀತಿ ಸಾಗಿರುವುದು ಗಮನಾರ್ಹ...

Friendship day Special: ಕೊಂಕೋಲ್‌ ಗ್ರಾಮದ ನಿವಾಸಿ ಮಧು ಕುಮಾರ್‌ 5ನೇ ತರಗತಿಯಲ್ಲಿ ಓದುತ್ತಿದ್ದಾಗ ವಿದ್ಯುತ್‌ ಸ್ಪರ್ಶಿಸಿತ್ತು. ಈ ಸಮಯದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಾಲಕ ಮಧುನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವಿದ್ಯುತ್​ ಅವಘಡದಿಂದಾಗಿ ಆತನ ಕಾಲುಗಳು ಮತ್ತು ಕೈಗಳನ್ನು ದೇಹದಿಂದ ತೆಗೆದು ಹಾಕಲಾಯಿತು. ಹಲವು ದಿನಗಳಿಂದ ಮಧು ಆಸ್ಪತ್ರೆಯ ಬೆಡ್‌ಗೆ ಸೀಮಿತರಾಗಿದ್ದರು.

ಆ ನಂತರ ಚೇತರಿಸಿಕೊಂಡು ಶಾಲೆಗೆ ಹೋಗುವ ಹಂಬಲವನ್ನು ಪೋಷಕರ ಮುಂದೆ ವ್ಯಕ್ತಪಡಿಸಿದರು. ಆದರೆ ಕೊರೊನಾ ಪ್ರಭಾವದಿಂದ ಶಾಲೆಗೆ ಹೋಗಲು ಆಗಿರಲಿಲ್ಲ. ಈಗ ಶಾಲೆಗಳು ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿರುವುದರಿಂದ ಮಧು ನಿತ್ಯ ಶಾಲೆಗೆ ಹೋಗುತ್ತಿದ್ದಾರೆ. ಇದಕ್ಕೆ ಕಾರಣ ಆತನ ಗೆಳೆಯರು ಮತ್ತು ಶಿಕ್ಷಕರು..

ಕೈಕಾಲು ಕಳೆದುಕೊಂಡ ಬಾಲಕನ ಸರ್ವಸ್ವವೂ ಆದ ಗೆಳೆಯರು

ಇತ್ತೀಚೆಗೆ ಅಶೋಕ್ ಎಂಬ ಶಿಕ್ಷಕ ಮಕ್ಕಳನ್ನು ತರಗತಿಯಲ್ಲಿ ಆಟವಾಡಿಸುತ್ತಿದ್ದರು. ಎಲ್ಲ ಮಕ್ಕಳೂ ಆಟದಲ್ಲಿ ತೊಡಗಿಸಿಕೊಂಡಿದ್ದರು. ಈ ಸಮಯದಲ್ಲಿ ಶಿಕ್ಷಕ ಮತ್ತು ಸಹ ವಿದ್ಯಾರ್ಥಿಗಳು ಮಧು ಕಣ್ಣುಗಳಲ್ಲಿ ಸ್ವಲ್ಪ ನೋವು ಗಮನಿಸಿದರು. ತಕ್ಷಣ ಗುರುಗಳ ಮಾರ್ಗದರ್ಶನದಲ್ಲಿ ಮಕ್ಕಳು ಮಧುಗೆ ಕೈಕಾಲುಗಳಾಗಿ ಆಟವಾಡಿಸಿದರು. ಆಗ ಮಧು ಕಣ್ಣಲ್ಲಿ ಮಂದಾಹಾಸ ಮೂಡಿತು.

ಮಧುಕುಮಾರ್ ಶಾಲೆಗೆ ಬರುವಾಗಿನಿಂದ ಆತನ ಸ್ನೇಹಿತರು ಜೋತೆಯಲ್ಲೇ ಇರುತ್ತಾರೆ. ಮಧುಗೆ ಅನ್ನ ತಿನ್ನಿಸುವುದು, ನೀರು ಕುಡಿಸುವುದು, ಹೊರಗೆ ಕರೆದುಕೊಂಡು ಹೋಗುವುದು, ಆಟ ಆಡಿಸುವುದು... ಹೀಗೆ ಗೆಳೆಯನ ಎಲ್ಲ ಜವಾಬ್ದಾರಿಯನ್ನು ಸಂಪೂರ್ಣವಾಗಿ ಗೆಳೆಯರೇ ನೋಡಿಕೊಳ್ಳುತ್ತಾರೆ. ಈ ನೋವಿನಲ್ಲೂ ಮಧುವಿನ ಕಣ್ಣುಗಳು ಆನಂದದಿಂದ ಹೊಳೆಯುವುದಕ್ಕೆ ಕಾರಣ ಆತನ ಈ ಗೆಳೆಯರೇ..

ಮಧುಕುಮಾರ್​ಗೆ ಕೈಕಾಲುಗಳಾದ ಗೆಳೆಯರು: ಸಂಗಾರೆಡ್ಡಿ ಜಿಲ್ಲೆಯ ಕೊಂಕೋಲ್ ಗ್ರಾಮದ ಮಧು ಕುಮಾರ್​ ಅವನು ತನ್ನ ಸಹವರ್ತಿ ವಿದ್ಯಾರ್ಥಿಗಳಿಗೆ ಕೈ ಬೀಸಿ ಕರೆಯುವುದು, ನಮಸ್ಕರಿಸುವುದು, ಹಸ್ತ ಲಾಗವ ಮಾಡುವುದು ಈ ವಿಡಿಯೋದಲ್ಲಿ ನೋಡಬಹದು. ಆದರೆ ಇದಕ್ಕೆ ಕಾರಣ ಅವರ ಗೆಳೆಯರು.

ಆ ಕಾಲುಗಳು ಮತ್ತು ಕೈಗಳು ಮಧುಕುಮಾರ್ ಅವರದ್ದಲ್ಲ. ಗಣೇಶ್ ಎಂಬ ವಿದ್ಯಾರ್ಥಿ ಮಧು ಕುಮಾರ್ ಅವರ ಮಡಿಲಲ್ಲಿ ಕುಳಿತು ಕಾಲು ಮತ್ತು ಕೈಗಳಾಗಿದ್ದಾರೆ. ಮಧುಗೆ ಕಾಲು, ಕೈಗಳಿಲ್ಲ ಎಂಬುದು ಹೊಸಬರಿಗೆ ತಿಳಿಯದ ಮಟ್ಟಿಗೆ ಈ ಮ್ಯಾಜಿಕ್ ಮಾಡಿದ್ದಾರೆ..

ನನಗೀಗ ಗೆಳೆಯರೇ ಎಲ್ಲ: '5ನೇ ತರಗತಿಯಲ್ಲಿದ್ದಾಗ ವಿದ್ಯುತ್ ಸ್ಪರ್ಶದಿಂದ ಕಾಲು, ಕೈ ಕಳೆದುಕೊಂಡಿದ್ದೆ. ಈಗ ನಾನು 8ನೇ ತರಗತಿಯಲ್ಲಿದ್ದೇನೆ. ನನ್ನ ಶಾಲೆಯಲ್ಲಿ ನನಗೆ ಒಳ್ಳೆಯ ಸ್ನೇಹಿತರಿದ್ದಾರೆ. ನಿತ್ಯ ಅವರು ನನ್ನನ್ನು ಶಾಲೆಗೆ ಕರೆದುಕೊಂಡು ಹೋಗುತ್ತಾರೆ. ನಾನು ಎಲ್ಲಿಗೆ ಹೋಗಬೇಕೆಂದರೂ ಸಹ ಅವರು ಕರೆದುಕೊಂಡು ಹೋಗುತ್ತಾರೆ. ನನ್ನ ಸ್ನೇಹಿತರು ನನಗೆ ಕ್ಯಾರಂ ಆಡಲು ಸಹಾಯ ಮಾಡುತ್ತಾರೆ.

ಕೈ ಇಲ್ಲದ ಕಾರಣ ನನಗೆ ಊಟ ಮಾಡಿಸುತ್ತಾರೆ. ನನ್ನ ಸ್ನೇಹಿತರು ನಿಜವಾಗಿಯೂ ನನಗೆ ಯಾವುದೇ ಅಂಗವೈಕಲ್ಯವಿಲ್ಲ ಎಂದು ಭಾವಿಸುತ್ತಾರೆ. ಅವರೊಂದಿಗಿರುವಾಗ ಅವರಂತೆಯೇ ನಾನು ಸಾಮಾನ್ಯ ಎಂದು ಅನಿಸುತ್ತದೆ’ ಅಂತಾ ಮಧು ಕುಮಾರ್ ತಮ್ಮ ಮನದಾಳದ ಮಾತುಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

ಶಿಕ್ಷಕ ಅಶೋಕ್​ ಹೇಳುವುದಿಷ್ಟು: ನಾನು ಒಂದು ದಿನ ತರಗತಿಯಲ್ಲಿ ಮಕ್ಕಳಿಗೆ ಆಟವಾಡಿಸುತ್ತಿದ್ದೆ. ಆಗ ಮಧು ಆ ಆಟದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಅಂದು ಅವನು ಖಿನ್ನತೆಗೆ ಒಳಗಾಗಿದ್ದನ್ನು ನಾನು ಗಮನಿಸಿದೆ. ನಂತರ ನಾನು ಈ ಬಗ್ಗೆ ಆತನ ಸ್ನೇಹಿತರಿಗೆ ತಿಳಿಸಿದೆ. ಆಗಿನಿಂದಲೂ ಮಧು ತರಗತಿಯಲ್ಲಿ ವಿಭಿನ್ನವಾಗಿ ಕಾಣಿಸುತ್ತಾರೆ.

ಆತನ ಸ್ನೇಹಿತರು ನಿತ್ಯ ಮಧುಗೆ ಸಹಾಯ ಮಾಡಲು ಪ್ರಾರಂಭಿಸಿದರು. ಅವರೆಲ್ಲರೂ ಮಧುವಿನ ಕೈಕಾಲುಗಳಾದರು. ಅಷ್ಟೇ ಅಲ್ಲ ಅವನಿಗೆ ಎಲ್ಲದರಲ್ಲೂ ಸಹಾಯ ಮಾಡಲು ಮುಂದಾದರು. ಈಗ ಮಧು ಅವರ ಸಹಾಯದಿಂದ ಡ್ಯಾನ್ಸ್​ ಮಾಡಬಹುದು. ಆ ದಿನದಿಂದ ಮಧು ಖಿನ್ನತೆಗೆ ಒಳಗಾಗಿದ್ದನ್ನು ನಾನು ನೋಡಲಿಲ್ಲ. ಈಗ ಅವರ ಸ್ನೇಹಿತರ ಸಹಾಯದಿಂದ ಮಧು ತುಂಬಾ ಸಂತೋಷವಾಗಿದ್ದಾರೆ ಎಂದು ಶಿಕ್ಷಕ ಅಶೋಕ್ ಹೇಳಿದ್ದಾರೆ.

ಈಗಿನ ಕಾಲದಲ್ಲಿ ಕೈ-ಕಾಲು ಇಲ್ಲದವರನ್ನು ಮಾತನಾಡಿಸಬೇಕಾದ್ರೆ ಜನ ಹಿಂದು-ಮುಂದು ನೋಡ್ತಾರೆ. ಅಂತಹದರಲ್ಲಿ ಈ ಮಕ್ಕಳು ಆ ಬಾಲಕನಿಗೆ ಸರ್ವಸ್ವವಾಗಿರುವುದು ನಿಜಕ್ಕೂ ಒಳ್ಳೆಯ ಸಂಗತಿ. ಇವರನ್ನು ನೋಡಿ ನಾವು ಕಲಿಯುವುದು ಬಹಳವಿದೆ..

ಓದಿ: ಹಾಸನದಲ್ಲಿ ಆಶ್ಲೇಷ ಮಳೆ ಅನಾಹುತ: ಗೋಡೆ ಕುಸಿದು ಬಾಲಕ ಸಾವು

Last Updated : Aug 6, 2022, 2:15 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.