ETV Bharat / bharat

ಶ್ರೀನಗರ - ಲೇಹ್ ಹೆದ್ದಾರಿಯಲ್ಲಿ ಮಣ್ಣು, ಕಲ್ಲುಗಳ ಕುಸಿತ: ಸಂಚಾರ ಸ್ಥಗಿತ - etv bharat kannada

ಬೆಳಗ್ಗೆ ಕಲ್ಗುಂಡ್ ಪ್ರದೇಶದಲ್ಲಿ ಮಣ್ಣು ಕುಸಿದ ಹಿನ್ನೆಲೆ ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿಯನ್ನು ವಾಹನ ಸಂಚಾರಕ್ಕಾಗಿ ತಕ್ಷಣವೇ ಮುಚ್ಚಲಾಗಿದೆ.

ಶ್ರೀನಗರ - ಲೇಹ್ ಹೆದ್ದಾರಿಯಲ್ಲಿ ಮಣ್ಣು, ಕಲ್ಲುಗಳ ಕುಸಿತ: ಸಂಚಾರ ಸ್ಥಗಿತ

author img

By

Published : Jul 28, 2022, 3:07 PM IST

Updated : Jul 28, 2022, 3:26 PM IST

ಗಂದೇರ್‌ಬಾಲ್ (ಜಮ್ಮು & ಕಾಶ್ಮೀರ ): ಇಲ್ಲಿನ ಕಲ್ಗುಂದ ಪ್ರದೇಶದಲ್ಲಿ ಮಣ್ಣು ಕುಸಿದಿದೆ. ಪರಿಣಾಮ ಶ್ರೀನಗರ - ಲೇಹ್ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಮಣ್ಣು ಕುಸಿದು ಕಲ್ಲು ರಸ್ತೆಯಲ್ಲಿ ಬಿದ್ದಿರುವುದರಿಂದ ಸಂಚಾರ ಸ್ಥಗಿತಗೊಂಡಿದೆ. ನೂರಾರು ವಾಹನಗಳು ರಸ್ತೆಯಲ್ಲೇ ಸಿಲುಕಿವೆ.

ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಅಧೀಕೃತ ಮಾಹಿತಿ ಪಡೆಯದೇ ಜನರು ಪ್ರಯಾಣಿಸದಂತೆ ಸೂಚಿಸಲಾಗಿದೆ. ಜಮ್ಮುವಿನಿಂದ ಕಾಶ್ಮೀರಕ್ಕೆ ತೆರಳುತ್ತಿದ್ದ ಅಮರನಾಥ ಯಾತ್ರೆಯ ಬೆಂಗಾವಲು ವಾಹನವನ್ನು ಹೆದ್ದಾರಿ ತಡೆಯಿಂದಾಗಿ ಚಂದರ್‌ಕೂಟ್ ಯಾತ್ರಾ ನಿವಾಸದಲ್ಲಿಯೇ ನಿಲ್ಲಿಸಲಾಗಿದೆ. ಲಡಾಖ್ ಕಡೆಯಿಂದ ಬರುವ ವಾಹನಗಳು ಮತ್ತು ಹತ್ತಾರು ಅಮರನಾಥ ಯಾತ್ರಾರ್ಥಿಗಳು ಈ ವೇಳೆ ರಸ್ತೆಯಲ್ಲೇ ಸಿಲುಕಿಕೊಂಡಿದ್ದಾರೆ.

ಶ್ರೀನಗರ - ಲೇಹ್ ಹೆದ್ದಾರಿಯಲ್ಲಿ ಮಣ್ಣು, ಕಲ್ಲುಗಳ ಕುಸಿತ: ಸಂಚಾರ ಸ್ಥಗಿತ

ಜಮ್ಮು ಮತ್ತು ಕಾಶ್ಮೀರ ಸಂಚಾರ ಪೊಲೀಸರು ನೀಡಿದ ಇತ್ತೀಚಿನ ಮಾಹಿತಿ ಪ್ರಕಾರ, ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 44 ಅನ್ನು ಮತ್ತೊಮ್ಮೆ ಮುಚ್ಚಿರುವುದರಿಂದ ಜನರು ಅದನ್ನು ಅಲ್ಲಿ ಸಂಚರಿಸುವನ್ನು ನಿಲ್ಲಿಸಬೇಕಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: 4 ವರ್ಷಗಳ ಬಳಿಕ ಅತ್ಯಾಚಾರಿಗೆ ಕಠಿಣ ಶಿಕ್ಷೆ ವಿಧಿಸಿದ ಗದಗ ಜಿಲ್ಲಾ ಸತ್ರ ನ್ಯಾಯಾಲಯ

Last Updated : Jul 28, 2022, 3:26 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.